ಫೈಕಸ್ ನರ್ವೋಸ Heyne ex Roth - ಮೊರೇಸಿ

ಪರ್ಯಾಯ ನಾಮ : ಫೈಕಸ್ ಅಂಗುಸ್ಟಿಫೋಲಿಯ Roxb.

Vernacular names : Tamil: ಈಚ್ಚಮರಂ, ಈಚ್ಚMalayalam: ಕಾನ ಅತ್ತಿ;ಕಾಡಪಾರಾ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಆನಿಕೆ ಬೇರುಗಳನ್ನೊಳಗೊಂಡ 35 ಮೀ. ಎತ್ತರದವರೆಗಿನ ದೊಡ್ಡ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತ ಅಥವಾ ಉಪ-ಮೃದುತುಪ್ಪಳದಿಂದ ಕೂಡಿರುತ್ತವೆ.
ಜಿನುಗು ದ್ರವ : ಜಿನುಗು ದ್ರವ ಬಿಳಿಯ ಬಣ್ಣ ಹೊಂದಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು 1 ಸೆಂ.ಮೀ.ವರೆಗಿನ ಉದ್ದ ಹೊಂದಿದ್ದು ಅಂಡ-ಭರ್ಜಿಯಾಕಾರದಲ್ಲಿದ್ದು ರೇಷ್ಮೆಯಂತಹ ಮೃದು ತುಪ್ಪಳದಿಂದ ಕೂಡಿದ್ದು ವಲಯಾಕಾರದ ಗುರುತುಗಳನ್ನುಳಿಸಿ ಉದುರಿ ಹೋಗುತ್ತವೆ;ತೊಟ್ಟುಗಳು 0.8 – 3 ಸೆಂ.ಮೀ. ಉದ್ದ ಹೊಂದಿದ್ದು ಕಾಲುವೆಗೆರೆ ಸಮೇತವಾಗಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಪತ್ರಗಳು 6 – 18 X 3 – 8 ಸೆಂ.ಮೀ. ಗಾತ್ರವಿದ್ದು ಸಂಕುಚಿತ ಅಂಡವೃತ್ತ- ಚತುರಸ್ರ,ಭರ್ಜಿ ಅಥವಾ ಬುಗುರಿ-ಭರ್ಜಿಯ ಆಕಾರ ಹೊಂದಿದ್ದು, ಕ್ರಮೇಣ ಚೂಪಾಗುವುದರಿಂದ ಹಿಡಿದು ಬಾಲರೂಪಿ- ಕ್ರಮೇಣ ಚೂಪಾಗುವ ತುದಿ,ಚೂಪಾದ ಬುಡ, ಸ್ವಲ್ಪವಾಗಿ ತರಂಗಿತವಾದ ಅಂಚು,ಕಾಗದವನ್ನೋಲುವ ಅಥವಾ ತೆಳುವಾದ ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ,ಪತ್ರಗಳು ಒಣಗಿದಾಗ ಮೇಲ್ಭಾಗದಲ್ಲಿ ಹಸಿರು ಮತ್ತು ತಳಭಾಗದಲ್ಲಿ ಕಂದು ಬಣ್ಣ ಹೊಂದಿರುತ್ತವೆ; ಮಧ್ಯ ನಾಳ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ ,3 ಆಧಾರ ನಾಳಗಳು ಪತ್ರಗಳ ಬುಡದಲ್ಲಿರುತ್ತವೆ; ಎರಡನೇ ದರ್ಜೆಯ ನಾಳಗಳು 8- 13 ಜೋಡಿಗಳಿದ್ದು ಪ್ರಮುಖವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲ ಬಂಧ ವಿನ್ಯಾಸದಲ್ಲಿದ್ದು ಕವಲುಗಳು ಎಲೆಯ ಅಕ್ಷದ ಕಡೆಗೆ ಇರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಸೈಕೋನಿಯ ರೀತಿಯವುಗಳಾಗಿದ್ದು ,ಅಕ್ಷಾಕಂಕುಳಿನಲ್ಲಿ ಮತ್ತು ಎಲೆರಹಿತವಾದ ಕುಡಿಕೊಂಬೆಗಳ ಮೇಲಿರುತ್ತವೆ ಹಾಗೂ ಒಂಟಿಯಾಗಿ ಅಥವಾ ಜೋಡಿಗಳಾಗಿರುತ್ತವೆ, ಗಾತ್ರದಲ್ಲಿ 0.8 – 1.5 ಸೆಂ.ಮೀ.ಅಡ್ಡಗಲತೆ ಹೊಂದಿದ್ದು ಉಪ-ಪೇರು ಹಣ್ಣಿನ ಆಕಾರದಲ್ಲಿರುತ್ತವೆ;ಹೂಗಳು ಏಕ ಲಿಂಗಿಗಳು.
ಕಾಯಿ / ಬೀಜ : ಸೈಕೋನಿಯ (ಸಂಯುಕ್ತ ಫಲ) ಗೋಳಾಕಾರದಲ್ಲಿದ್ದು ಜೋಡಿಯಾಗಿರುತ್ತವೆ ಹಾಗೂ ಕೆಂಪು ಬಣ್ಣದಲ್ಲಿದ್ದು ರೋಮರಹಿತವಾಗಿರುತ್ತವೆ;ವೃಂತ 2.5 ಸೆಂ.ಮೀ.ವರೆಗಿನ ಉದ್ದ ಹೊಂದಿರುತ್ತದೆ; ಅಖೀನುಗಳು ನಯವಾಗಿರುತ್ತವೆ.

ಜೀವಪರಿಸ್ಥಿತಿ :

1200 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಮೇಲ್ಛಾವಣಿಯಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಸಿಯದಿಂದಆಸ್ಟ್ರೇಲಿಯ;ಪಶ್ಚಿಮ ಘಟ್ಟದ ದಕ್ಷಿಣ,ಮಧ್ಯ ಮತ್ತು ಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

Roem. & Schult., Syst. Veg. 1:513.1817;Gamble, Fl. Madras 3:1364.1998(rep.ed.); Sasidharan, Biodiversity documentation for Kerala- Flowering Plants, part 6:440.2004.

Top of the Page