ಫೈಕಸ್ ಟಾಲ್ಬೋಲ್ಟಿಯೈ King - ಮೊರೇಸಿ

Vernacular names : Tamil: Itthi; Kal-ithiMalayalam: Vellayal; Ithi

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಬಿಳಲು ಬೇರುಗಳನ್ನೊಳಗೊಂಡ 30 ಮೀ. ಎತ್ತರದವರೆಗಿನ ನಿತ್ಯಹರಿದ್ವರ್ಣ ಮಾದರಿಯ ಮರಗಳು. ಸಾಮಾನ್ಯವಾಗಿ ಎಳೆಯದಾಗಿದ್ದಾಗ ಸಸ್ಯಗಳಾಗಿರುತ್ತವೆ.
ಕಾಂಡ ಮತ್ತು ತೊಗಟೆ : ತೊಗಟೆ ಹಸಿರು ಬಣ್ಣದಲ್ಲಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಮೃದುತುಪ್ಪಳದಿಂದ ಕೂಡಿರುತ್ತವೆ.
ಜಿನುಗು ದ್ರವ : ಜಿನುಗು ದ್ರವ ಹಾಲಿನಂತಿದ್ದು ವಿಫುಲವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು 0.5 ಸೆಂ.ಮೀ.ವರೆಗಿನ ಉದ್ದ ಹೊಂದಿದ್ದು ಅಂಡವೃತ್ತದ ಆಕಾರದಲ್ಲಿದ್ದು ಮೃದು ತುಪ್ಪಳದಿಂದ ಕೂಡಿದ್ದು ವಲಯಾಕಾರದ ಗುರುತುಗಳನ್ನುಳಿಸಿ ಉದುರಿ ಹೋಗುತ್ತವೆ;ತೊಟ್ಟುಗಳು 1 – 3 ಸೆಂ.ಮೀ. ಉದ್ದ ಹೊಂದಿದ್ದು ಕಾಲುವೆಗೆರೆ ಸಮೇತವಾಗಿರುತ್ತವೆ ಮತ್ತು ಎಳೆಯದಾಗಿದ್ದಾಗ ಮೃದುತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 5 – 12.7 X 1.2 – 6.4 ಸೆಂ.ಮೀ. ಗಾತ್ರವಿದ್ದು ಅಂಡದ ಅಥವಾ ಅಂಡವೃತ್ತ ಆಕಾರ ಹೊಂದಿದ್ದು, ಬಾಲರೂಪಿ- ಕ್ರಮೇಣ ಚೂಪಾಗುವುದರಿಂದ ಮೊಂಡಾಗ್ರವುಳ್ಳ ಬಾಲರೂಪಿ ತುದಿ, ಬೆಣೆ -ಚೂಪಾದ ಬುಡ, ನಯವಾದ ಅಂಚು, ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ ,ಪತ್ರಗಳ ಒಣಗಿದಾಗ ಮೇಲ್ಭಾಗ ಹೊಳಪಿನಿಂದ ಕೂಡಿರುತ್ತದೆ;ಮಧ್ಯ ನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ ,3 ರಿಂದ5 ಆಧಾರ ನಾಳಗಳು ಪತ್ರಗಳ ಬುಡದಲ್ಲಿರುತ್ತವೆ; ಎರಡನೇ ದರ್ಜೆಯ ನಾಳಗಳು 8- 10 ಜೋಡಿಗಳಿದ್ದು ಅಂಚಿನ ಬಳಿ ಕುಣಿಕೆಗೊಂಡಿರುತ್ತವೆ;ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಯ ಅಕ್ಷದ ಕಡೆಗೆ ಇರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಸೈಕೋನಿಯ ರೀತಿಯವುಗಳಾಗಿದ್ದು ,ತೊಟ್ಟುರಹಿತವಾಗಿರುತ್ತವೆ ಮತ್ತು ಅಕ್ಷಾಕಂಕುಳಿನಲ್ಲಿ ಜೋಡಿಗಳಾಗಿರುತ್ತವೆ, ಆಕಾರದಲ್ಲಿ ಅದುಮಿದ ಗೋಳಾಕಾರದಲ್ಲಿರುತ್ತವೆ; ಹೂಗಳು ಏಕ ಲಿಂಗಿಗಳು.
ಕಾಯಿ / ಬೀಜ : ಸೈಕೋನಿಯ (ಸಂಯುಕ್ತ ಫಲ) ಗೋಳಾಕಾರದಲ್ಲಿದ್ದು 0.5 ರಿಂದ 0.6 ಸೆಂ.ಮೀ. ಅಡ್ಡಗಲತೆಯನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

1000 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಆಗಾಗ್ಗೆ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಭಾರತ, ಚೈನ ಮತ್ತು ಶ್ರೀಲಂಕಾ;ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

Ann. Roy. Bot. Gard. (Calcutta)1;51. Tt. 63 & 84. 1887;Gamble, Fl. Madras 3:1363.1998(rep.ed.); Sasidharan, Biodiversity documentation for Kerala- Flowering Plants, part 6:441.2004.

Top of the Page