ಗಾರ್ಸೀನಿಯ ರೂಬ್ರೋ- ಎಖೈನೇಟ Kosterm. - ಕ್ಲೂಸಿಯೇಸಿ

Synonym : ಗಾರ್ಸೀನಿಯ ಎಖಿನೋಕಾರ್ಪ sensu J.Hk. non Thw. ; ಗಾರ್ಸೀನಿಯ ಎಖಿನೋಕಾರ್ಪ var. ಮೋಂಟಿಕೋಲ Mahes.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ವಾಯು ವಿನಿಮಯ ಬೆಂಡುರಂಧ್ರ ಸಮೇತವಾಗಿರುತ್ತದೆ. ಕಚ್ಚು ಮಾಡಿದ ಜಾಗ ಶ್ವೇತ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಬಲಿಷ್ಠವಾಗಿದ್ದು, ಕೋನಯುಕ್ತವಾಗಿದ್ದು ರೋಮರಹಿತ ವಾಗಿರುತ್ತವೆ ಹಾಗೂ ಒಣಗಿದಾಗ ಹಳದಿ ಬಣ್ಣದಲ್ಲಿರುತ್ತವೆ.
ಜಿನುಗು ದ್ರವ : ಸಸ್ಯಕ್ಷೀರ ಕೆನೆ ಬಣ್ಣ ಹೊಂದಿರುತ್ತದೆ .
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆ-ಯಲ್ಲಿರುತ್ತವೆ; ಎಲೆತೊಟ್ಟುಗಳು ಧ್ರುಢವಾಗಿದ್ದು, ಬುಡಭಾಗದಲ್ಲಿ ಒರೆಯನ್ನು ಹೊಂದಿದ್ದು ರೋಮರಹಿತವಾಗಿರುತ್ತವೆ ಹಾಗೂ ಸಪಾಟಪೀನಮಧ್ಯ ಆಕಾರದಲ್ಲಿದ್ದು, 1 ರಿಂದ 2.5 ಸೆಂ.ಮೀ ಉದ್ದವಿರುತ್ತವೆ; ಎಲೆಪತ್ರಗಳು 7 -15 X 3 - 7 ಸೆಂ.ಮೀ ಗಾತ್ರ ಹೊಂದಿದ್ದು ವಿಶಾಲ ಬುಗುರಿ ಅಥವಾ ಕೆಲವು ವೇಳೆ ಅಂಡವೃತ್ತ ಆಕಾರ ಹೊಂದಿರುತ್ತ, ತುದಿ ಸಾಮಾನ್ಯವಾಗಿ ದುಂಡಾಗಿರುತ್ತದೆ ಅಥವಾ ಕೆಲವು ವೇಳೆ ದುಂಡನೆಯ ಅಗ್ರದಲ್ಲಿ ತಗ್ಗುಳ್ಳ ಆಕಾರದಲ್ಲಿರುತ್ತದೆ, ಎಲೆಯ ಬುಡ ಒಳಬಾಗಿದ ತಳವುಳ್ಳ ಮಾದರಿಯನ್ನು ಹೊಂದಿರುತ್ತವೆ, ಎಲೆಗಳ ಅಂಚು ಹಿಂಸುರುಳಿಯಾಗಿರುತ್ತದೆ,ಎಲೆಗಳು ದಪ್ಪವಾದ ತೊಗಲನ್ನು ಹೋಲುವ ಮಾದರಿಯಲ್ಲಿರುತ್ತವೆ; ಎರಡನೇ ದರ್ಜೆಯ ನಾಳಗಳು ಬಹುಸಂಖ್ಯೆಯಲ್ಲಿದ್ದು ಕಡಿಮೆ ಅಂತರವುಳ್ಳ ಸಮಾಂತರದಲ್ಲಿದ್ದು ಮಂದವಾದ ಅಂಚಿನಲ್ಲಿ ಕೊನೆಗೊಳ್ಳುತ್ತವೆ; ಪತ್ರಗಳು ಒಣಗಿದಾಗ ತಳಭಾಗದಲ್ಲಿ ಸಸ್ಯಕ್ಷೀರ ಕೊಳವೆಗಳು ಕಾಣುವಂತಿರುತ್ತವೆ.
ಪುಷ್ಪಮಂಜರಿ/ಹೂಗಳು : ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಗುಚ್ಛಗಳಲ್ಲಿರುತ್ತವೆ.; ಹೆಣ್ಣು ಹೂಗಳು ಒಂಟಿಯಾಗಿದ್ದು ತುದಿಯಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿ ಗಳು ಅಂಡವೃತ್ತಾಕಾರದಲ್ಲಿದ್ದು 6.5 X 5 ಸೆಂ.ಮೀ ಗಾತ್ರ ಹೊಂದಿದ್ದು , ಮುಳ್ಳುಗಳ ಸಮೇತವಿರುತ್ತವೆ ಹಾಗೂ ಒಂದರಿಂದ ಮೂರು ಬೀಜಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

ಮಧ್ಯಮ ಎತ್ತರದ ಪ್ರದೇಶಗಳ ತೇವಾಂಶವುಳ್ಳ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮರಗಳು. ಸಾಮಾನ್ಯವಾಗಿ 800 ಮತ್ತು 1200 ಮೀ ನಡುವಿನ ಎತ್ತರದ ಪ್ರದೇಶಗಳಲ್ಲಿ ಕಂಡು ಬರುವ ಈ ಪ್ರಭೇದ 1800 ಮೀ ಎತ್ತರದ ಪ್ರದೇಶಗಳಿಗೂ ವಿಸ್ತರಣೆಗೊಂಡು ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಸಸ್ಯ ಅಗಸ್ತ್ಯಮಲೈ ಪ್ರದೇಶದಲ್ಲಿ ಆಗಾಗ್ಗೆಯೂ, ಪೆರಿಯಾರ್ ಪ್ರದೇಶದಲ್ಲಿ ಅಪರೂಪವಾಗಿಯೂ ಕಂಡುಬರುತ್ತದೆ.

ಸ್ಥಿತಿ :

ದುರ್ಬಲ ಸ್ಥಿತಿ (IUCN2000)

ಗ್ರಂಥ ಸೂಚಿ :

Sri Lanka J. Sci. (Biol. Sci.) 12 (2): 128. 1977; Gamble, Fl. Madras 1: 73. 1997 (re. ed); Sasidharan, Biodiversity documentation for Kerala- Flowering Plants, part 6: 42. 2004.

Top of the Page