ಗಾರ್ಸೀನಿಯ ಟಾಲ್ಬೋಟಿಯೈ Raiz. & Sant. - ಕ್ಲೂಸಿಯೇಸಿ

Synonym : ಗಾರ್ಸೀನಿಯ ಮಲಬಾರಿಕ Talbolt; ಗಾರ್ಸೀನಿಯ ವಾಲಿಫೋಲಿಯ J.Hk. var. ಮ್ಯಾಕ್ರಾಂತ J.Hk.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಹಳದಿ ಅಥವಾ ಕಂದು ಬಣ್ಣದ್ದು; ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕೋನಯುಕ್ತವಾಗಿದ್ದು ರೋಮರಹಿತ ವಾಗಿರುತ್ತವೆ ಕೆಲವು ವೇಳೆ ಸೂಕ್ಷ್ಮರೋಮ ಸಹಿತವಾಗಿರುತ್ತವೆ
ಜಿನುಗು ದ್ರವ : ಸಸ್ಯಕ್ಷೀರ ವಿಫುಲವಾಗಿದ್ದು ಕೆನೆ ಬಣ್ಣ ಹೊಂದಿರುತ್ತದೆ .
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿ-ರುತ್ತವೆ; ಎಲೆತೊಟ್ಟುಗಳು ರೋಮರಹಿತವಾಗಿದ್ದು 0.6 ರಿಂದ 2.1 ಸೆಂ.ಮೀ ಉದ್ದಹೊಂದಿದ್ದು, ಸಪಾಟಪೀನಮಧ್ಯ ಆಕಾರದ ಮೇಲ್ಭಾಗವನ್ನು ಹೊಂದಿದ್ದು, ಕಾಲುವೆಗೆರೆ ಸಮೇತವಾಗಿರುತ್ತವೆ ಹಾಗೂ ಆಡ್ಡಡ್ಡವಾದ ಮಡಿಕೆಗಳನ್ನು ಹೊಂದಿರುತ್ತವೆ ಮತ್ತು ಬುಡಭಾಗದಲ್ಲಿ ಒರೆಯನ್ನು ಹೊಂದಿರುತ್ತವೆ;ಎಲೆಪತ್ರಗಳು 7 -15 X 3 – 7.5 ಸೆಂ.ಮೀ ಗಾತ್ರ ಹೊಂದಿದ್ದು ಅಂಡವೃತ್ತದಿಂದ ಸಂಕುಚಿತ ಅಂಡಾಕಾರ ಹೊಂದಿರುತ್ತವೆ, ತುದಿ ಸಾಮಾನ್ಯವಾಗಿ ದುಂಡಾಗಿದ್ದು ಕೆಲವು ವೇಳೆ ಚೂಪಾಗಿರುತ್ತದೆ, ಎಲೆಯ ಬುಡ ದುಂಡಾಗಿ ಅಥವಾ ಒಳಬಾಗಿದ ತಳವುಳ್ಳ ಮಾದರಿಯಲ್ಲಿರುತ್ತವೆ, ಎಲೆಗಳ ಅಂಚು ಹಿಂಸುರುಳಿಯಾಗಿರುತ್ತದೆ,ಎಲೆಗಳು ತೊಗಲನ್ನು ಹೋಲುವ ಮಾದರಿಯಲ್ಲಿರುತ್ತವೆ; ಎರಡನೇ ದರ್ಜೆಯ ನಾಳಗಳು ಹೆಚ್ಚೂ ಕಡಿಮೆ ಸಮಾಂತರದಲ್ಲಿದ್ದು ಅಂಚಿನ ಬಳಿ ಕುಣಿಕೆಗೊಂಡಿರುತ್ತದೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ; ಕ್ಷೀರ ಕೊಳವೆಗಳು ಎಲೆಯ ತಳಬಾಗದಲ್ಲಿಸ್ಪಷ್ಟವಾಗಿ ಗೋಚರಿಸುತ್ತವೆ.
ಪುಷ್ಪಮಂಜರಿ/ಹೂಗಳು : ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿದ್ದು ಚಿಕ್ಕದಾದ ವೃಂತದ ಮೇಲಿನ ಗುಚ್ಛಗಳಲ್ಲಿರುತ್ತವೆ. .
ಕಾಯಿ /ಬೀಜ : ಬೆರ್ರಿ ಗಳು 5 ಸೆಂ.ಮೀ ವ್ಯಾಸ ಹೊಂದಿದ್ದು ಗೋಳಾಕಾರದಲ್ಲಿರುತ್ತವೆ ಹಾಗೂ ಒಂದರಿಂದ ನಾಲ್ಕು ಬೀಜಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

ಉಪಮೇಲ್ಛಾವಣಿ ಮರಗಳಾಗಿ ಕಡಿಮೆ ಎತ್ತರದ ಪ್ರದೇಶಗಳ ತೇವಾಂಶವುಳ್ಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ 800 ಮೀ ಎತ್ತರದ ಪ್ರದೇಶಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತ- ದಕ್ಷಿಣ ಮಧ್ಯ ಮತ್ತುಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Rec. Bot. Surv. India (ed.) 16:14. 1960; Gamble,Fl.Madras1: 74.1997 (re.ed.);Sasidharan, Biodiversity documentation for Kerala-Flowering Plants, part 6:41.2004; Saldanha, Fl. Karnataka 1: 207.1996.

Top of the Page