ಗ್ಲೂಟ ಟ್ರವಾಂಕೋರಿಕ Bedd. - ಅನಕಾರ್ಡಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 35 ಮೀ ಎತ್ತರದವರೆವಿಗೆ ಬೆಳೆಯುವ ಮಹಾವೃಕ್ಷಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿರುತ್ತದೆ. ಹಲವು ಸಂಧರ್ಭಗಳಲ್ಲಿ, ಅವ್ಯವಸ್ಥಿತವಾಗಿ ಮೂಡಲ್ಪಟ್ಟ ಚಕ್ಕೆ ರೂಪದ ಗುರುತುಗಳನ್ನೊಳಗೊಂಡಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕೊಂಬೆಗಳು “ಆಬ್ರೆವಿಲ್ಲೆ” ಮಾದರಿಯ ವಿನ್ಯಾಸದಲ್ಲಿರುತ್ತವೆ. ಕಿರುಕೊಂಬೆಗಳು ಧೃಢವಾಗಿರುತ್ತವೆ
ಜಿನುಗು ದ್ರವ : ಸಸ್ಯಕ್ಷೀರ ಶ್ವೇತ ಬಣ್ಣದಲ್ಲಿದ್ದು, ವಿರಳವಾಗಿರುತ್ತದೆ.
ಎಲೆಗಳು : ಎಲೆಗಳು ಸರಳ,ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು, ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ. ಎಲೆತೊಟ್ಟು 0.5 ಸೆಂ.ಮೀ ಗಿಂತ ಕಡಿಮೆ ಉದ್ದ, ರೋಮರಹಿತವಾಗಿದ್ದು ಅಡ್ಡಸೀಳಿದಾಗ ಸಪಾಟ ಪೀನಮಧ್ಯ ಆಕಾರವನ್ನು ಹೋಲುತ್ತದೆ; ಎಲೆ ಪತ್ರ 6.5-19 X 1.8- 7 ಸೆಂ.ಮೀ ಗಾತ್ರ ಹೊಂದಿದ್ದು, ಈಟಿ- ಬುಗುರಿ ಸಮ್ಮಿಶ್ರಾಕಾರ ಅಥವಾ ಚಮಚದಾಕಾರದಲ್ಲಿರುತ್ತದೆ; ಚೂಪಲ್ಲದ ಅಥವಾ ಗುಂಡಾದ ತುದಿ(ಸಣ್ಣ ಮರಗಳಲ್ಲಿಎಲೆ ಪತ್ರ ಕ್ರಮೇಣ ಚೂಪಗುವ ಸಣ್ಣ ತುದಿ ಹೊಂದಿರುತ್ತದೆ) ಹಾಗೂ ಬೆಣೆಯಾಕಾರದ ಬುಡವನ್ನು ಹೊಂದಿರುತ್ತದೆ.ಪತ್ರದ ಬುಡ ಭಾಗ ಕೆಲವು ವೇಳೆ ಕಾಂಡದವರೆವಿಗೂ ವಿಸ್ತಾರಗೊಂಡಿರುತ್ತದೆ. ಪತ್ರಗಳು ನಯವಾದ ಅಂಚು ,ತೊಗಲಿನಂತಹ ಮೇಲ್ಮೈಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳಗಳು ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ.;12 - 18ಎರಡನೇ ದರ್ಜೆಯ ನಾಳಗಳಿದ್ದು, ಮೂರನೇ ದರ್ಜೆ ನಾಳಗಳು ಜಾಲಬಂಧ ವಿನ್ಯಾಸ ಹೊಂದಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ ಅಥವಾ ವಿಶಾಲ ಜಾಲಬಂಧ ನಾಳವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ದ್ವಿಲಿಂಗಿ , ಶ್ವೇತ ಬಣ್ಣದವುಗಳಾಗಿದ್ದು ಅಕ್ಷಾಕಂಕುಳಿನ ಅಥವಾ ತುದಿಯಲ್ಲಿರುವ 8 ರಿಂದ 10 ಸೆಂ.ಮಿ. ಉದ್ದವುಳ್ಳ ಪುನರಾವೃತ್ತಿಯಾಗಿ ಕವಲೊಡೆಯುವ ಪುಷ್ಪಮಂಜರಿಯಲ್ಲಿರುತ್ತವೆ
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯಾಗಿದ್ದು, ಗುಂಡಾಕಾರವಾಗಿ, ದಾರುವಿನಂತಿದ್ದು,3.8 ಸೆಂ.ಮಿ. ಗಾತ್ರ ಹಾಗೂ ಒಂದು ಬೀಜವನ್ನೊಳಗೊಂಡಿರುತ್ತದೆ.

ಜೀವಪರಿಸ್ಥಿತಿ :

ಸಮುದ್ರ ಮಟ್ಟಕ್ಕಿಂತ ಮಧ್ಯಮ ಎತ್ತರದಲ್ಲಿನ (600 ರಿಂದ 1400 ಮೀ) ತೇವಾಂಶದಿಂದ ಕೂಡಿದ, ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮರಗಳಾಗಿ ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿಯ ಅಗಸ್ತ್ಯಮಲೆ ಬೆಟ ಪ್ರದೇಶಕ್ಕೆ ಸೀಮಿತ.

ಸ್ಥಿತಿ :

ಅಳಿವಿನಂಚಿನ ಅಲ್ಪ ಅಪಾಯ ಸಂಭವ ಸ್ಥಾನದಲ್ಲಿದ್ದು ನಶಿಸುವ ಭೀತಿ ಸ್ಥಿತಿಗೆ ಹತ್ತಿರವಾಗಿರುವಂತಹ ಪ್ರಭೇಧ (IUCN 200)

ಗ್ರಂಥ ಸೂಚಿ :

Beddome, Fl. Sylv. 1: 60. 1870; Gamble, Fl. Madras 1: 261. 1997 (re. ed); Mohanan and Sivadasan, Fl. Agasthymala 179. 2002; Mohanan and Henry Fl. Thiruvananthapuram 128. 1994.

Top of the Page