ಗೋನಿಯೋತಲಾಮಸ್ ತ್ವಾಯ್ಟೆಸಿಯೈ J. Hk. &Thoms. - ಅನೋನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಚಿಕ್ಕ ಮರಗಳು 8ಮೀ ಎತ್ತರದವರೆವಿಗೆ ಬೆಳೆಯುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಗುಂಡಾಕಾರದಲ್ಲಿದ್ದು ಉಪ ರೋಮರಹಿತವಾಗಿರುತ್ತದೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿ ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ. ತೊಟ್ಟುಗಳು 0.8 ರಿಂದ 1 ಸೆಂ.ಮೀ. ಉದ್ದ, ಆಕಾರದಲ್ಲಿ ದುಂಡಾಗಿದ್ದು, ರೋಮರಹಿತವಾಗಿರುತ್ತವೆ. ಎಲೆ ಪತ್ರಗಳು 10 - 15 × 4 - 5.5 ಸೆಂ.ಮೀ. ಗಾತ್ರ ಹೊಂದಿದ್ದು, ಧೀರ್ಘ ಚತುರಾಸ್ರಾಕಾರದಿಂದ ಅಂಡವೃತ್ತ ಆಕಾರ ಹೊಂದಿದ್ದು, ಮೊಂಡಾಗಿ ಕ್ರಮೇಣ ಚೂಪಾಗುವ ತುದಿ ಹಾಗೂ ಚೂಪಾದುದರಿಂದ ಉಪ ಒಳಬಾಗಿದ ತಳವುಳ್ಳ ಬುಡ, ಕಾಗದರೂಪದ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತದೆ. ಮಧ್ಯನಾಳ ದೃಢವಾಗಿದ್ದು ಪತ್ರದ ತಳಭಾಗದಲ್ಲಿ ಪ್ರಾಮುಖ್ಯವಾಗಿ ಕಂಡುಬರುತ್ತವೆ. ಎರಡನೇ ದರ್ಜೆಯ ನಾಳಗಳು 10 ರಿಂದ 12 ಜೋಡಿಗಳಿರುತ್ತವೆ. ತೃತೀಯ ದರ್ಜೆಯ ನಾಳಗಳು ಅತ್ಯಂತ ತೆಳುವಾಗಿದ್ದು, ಸ್ಥೂಲವಾದ ಜಾಲಬಂಧನಾಳ ರೂಪದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ. ಹೂ ತೊಟ್ಟು 1.5 ರಿಂದ 2 ಸೆಂ.ಮೀ. ಉದ್ದವಿದ್ದು ರೋಮರಹಿತವಾಗಿರುತ್ತವೆ.
ಕಾಯಿ /ಬೀಜ : ಒಂದು ಬೀಜ ಹೊಂದಿದ ಬೆರ್ರಿಗಳು ತೊಟ್ಟು ರಹಿತವಾಗಿ ಅಥವಾ ಚಿಕ್ಕದಾದ ತೊಟ್ಟು ಸಹಿತವಾಗಿದ್ದು ಗುಂಪಾಗಿರುತ್ತವೆ.

ಜೀವಪರಿಸ್ಥಿತಿ :

ಕೆಳಛಾವಣಿಯ ಮರಗಳಾಗಿ (ನಾಲ್ಕನೇ ಸಮಗ್ರ ಸಮೂಹದಲ್ಲಿ) ಸಮುದ್ರ ಮಟ್ಟಕ್ಕಿಂತ 800 ರಿಂದ 1200ಮೀ ಉಳ್ಳ ಮಧ್ಯಮ ಎತ್ತರದ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮಘಟ್ಟದ ದಕ್ಷಿಣ ಸಹ್ಯಾದ್ರಿ ಪ್ರದೇಶದ ಅಗಸ್ತ್ಯಮಲೆಯಲ್ಲಿ ಮತ್ತು ಶ್ರೀಲಂಕಾದಲ್ಲೂ ಮರ ನೈಸರ್ಗಿಕವಾಗಿ ವ್ಯಾಪಿಸಿದೆ.

ಗ್ರಂಥ ಸೂಚಿ :

Hooker and Thomson, Fl. Ind. 106.1872; Gamble, Fl. Madras 1: 19.1997 (re.ed); Mohanan and Sivadasan, Fl. Agasthymala 54. 2002; Sasidharan, Biodiversity documentation for Kerala- Flowering Plants, part 6: 17. 2004.

Top of the Page