ಜಿಮ್ನಾಕ್ರಾಂತೆರ ಫರ್ಕುಹರಿಯಾನ (J.Hk. & Thoms.) Warb. - ಮಿರಿಸ್ಟಿಕೇಸಿ

ಪರ್ಯಾಯ ನಾಮ : ಮಿರಿಸ್ಟಿಕ ಫರ್ಕುಹರಿಯಾನ J.Hk. & Thoms; ಮಿರಿಸ್ಟಿಕ ಕೆನರಿಕ Bedd. ex King; ಜಿಮ್ನಾಕ್ರಾಂತೆರ ಕೆನೆರಿಕ Warb.

Vernacular names : Tamil: ಪಿಂಡಿMalayalam: ಹೆಡಬಗಳ;ಮೋಂಬತ್ತಿ ಬೀಜ;ಪಿಂಡಿಕಾಯಿ ಮರ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ. ವರೆಗಿನ ಎತ್ತರದ ನಿತ್ಯ ಹರಿದ್ವರ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ದಟ್ಟ ಕಂದು ಬಣ್ಣದಲ್ಲಿರುತ್ತದೆ ಮತ್ತು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ;ಕಚ್ಚು ಮಾಡಿದ ಜಾಗ ನಸುಗೆಂಪಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳುಗಳು ಸುತ್ತು ಜೋಡನೆಯಲ್ಲಿದ್ದು ಮುಖ್ಯ ಕಾಂಡಕ್ಕೆ ಸಮಕೋನದಲ್ಲಿರುತ್ತವೆ;ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ಕೆಂಗಂದು ಬಣ್ಣದ ಮೃದು ತುಪ್ಪಳದಿಂದ ಕೂಡಿರುತ್ತವೆ.
ಜಿನುಗು ದ್ರವ : ತೊಗಟೆಯನ್ನು ಕೆತ್ತಿದಾಗ ಕೆಂಪು ಬಣ್ಣದ ವಿಫುಲವಾಗಿರದ ಸಸ್ಯ ರಸವಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ ; ತೊಟ್ಟುಗಳು 1 ರಿಂದ 2 ಸೆಂ.ಮೀ. ಉದ್ದ ಹೊಂದಿದ್ದು ಕೊಂಚವಾದ ಕಾಲುವೆಗೆರೆ ಸಮೇತವಾಗಿರುತ್ತವೆ ಮತ್ತು ಎಳೆಯದಾಗಿದ್ದಾಗ ಉಪ-ಮೃದುತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 11 - 26 X 4 - 10 ಸೆಂ.ಮೀ.ವರೆಗಿನ ಗಾತ್ರವಿದ್ದು ಸಾಮಾನ್ಯವಾಗಿ ಸಂಕುಚಿತ ಚತುರಸ್ರ ಅಥವಾ ಚತುರಸ್ರ ಕೆಲವು ವೇಳೆ ಭರ್ಜಿಯ ಆಕಾರ ಹೊಂದಿದ್ದು, ಥಟ್ಟನೆ ಅಥವಾ ಅನುಕ್ರಮವಾಗಿ ಕ್ರಮೇಣ ಚೂಪಾಗುವ ತುದಿ ಹೊಂದಿದ್ದು ಬುಡ ಸಾಮಾನ್ಯವಾಗಿ ದುಂಡಾದ ಕೆಲವು ವೇಳೆ ಸ್ವಲ್ಪ ಮಟ್ಟಿಗೆ ಒಳಬಾಗಿದ ರೀತಿಯಲ್ಲಿರುತ್ತದೆ,ಅಂಚು ನಯವಾಗಿದ್ದು, ಮೇಲ್ಮೈ ತೊಗಲನ್ನೋಲುವ ರೀತಿಇರುತ್ತದೆ,ಪತ್ರಗಳು ರೋಮರಹಿತವಾಗಿರುತ್ತವೆ ಮತ್ತು ಮೇಲ್ಭಾಗದಲ್ಲಿ ಹೊಳಪಿನಿಂದ ಕೂಡಿದ್ದು ತಳಭಾಗ ಮಾಸಲು ಬೂದು ಹಸಿರು ಬಣ್ಣದಲ್ಲಿರುತ್ತದೆ ;ಮಧ್ಯ ನಾಳ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 7 - 14 ಜೋಡಿಗಳಿದ್ದು ಆರೋಹಣ ಮಾದರಿಯಲ್ಲಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ, ಕಂಡುಬಂದ ಪಕ್ಷದಲ್ಲಿ ಕವಲುಗಳು ಎಲೆದಿಂಡಿನ ಕಡೆಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಏಕ ಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ;ಗಂಡು ಹೂಗಳು ಹಳದಿ ಛಾಯೆಯನ್ನು ಹೊಂದಿದ್ದು ಅಕ್ಷಾಕಂಕುಳಿನಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆದ ಪುಷ್ಪಮಂಜರಿಯಲ್ಲಿರುತ್ತವೆ ಹಾಗೂ ನಸುಗೆಂಪು ಮಿಶ್ರಿತ ಹಳದಿ ಬಣ್ಣದ ದಟ್ಟ ಮೃದುಗೂದಲಿಂದ ಕೂಡಿರುತ್ತವೆ;ಹೆಣ್ಣ ಹೂಗಳು ದೊಡ್ಡ ಗಾತ್ರದಲ್ಲಿದ್ದು ಅಕ್ಷಾಕಂಕುಳಿನಲ್ಲಿನ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ / ಬೀಜ : ಸಂಪುಟ ಫಲ ಗೋಳಾಕಾರದಲ್ಲಿದ್ದು 3.2 ಸೆಂ.ಮೀವರೆಗಿನ ಗಾತ್ರ ಹೊಂದಿದ್ದು ರೋಮರಹಿತವಾಗಿರುತ್ತವೆ;ಬೀಜಗಳು ಒಂದಿದ್ದು ಗೋಳದ ಆಕಾರದಲ್ಲಿದ್ದು ತೆಳು ಕಂದು ಬಣ್ಣ ಹೊಂದಿರುತ್ತವೆ ಮತ್ತು ಆಳವಾದ ಸೀಳಿಕೆಗಳನ್ನುಳ್ಳ ಪತ್ರೆ ಸಮೇತವಾಗಿರುತ್ತವೆ.

ಜೀವಪರಿಸ್ಥಿತಿ :

600 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ಜೌಗು ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಉಪ-ಮೇಲ್ಛಾವಣಿಯಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಗಸ್ತ್ಯಮಲೈ(ಪಶ್ಚಿಮ) ಮತ್ತು ಮಧ್ಯ ಮಲೆನಾಡಿನಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Monogr. Myris. 365.1897;Gamble, Fl. Madras 3:1212.1998(rep.ed.); Sasidharan, Biodiversity documentation for Kerala- Flowering Plants, part 6:393.2004;Saldanha, Fl. Karnataka 1: 51.1984.

Top of the Page