ಹೆಡ್ಯೋಟಿಸ್ ಆರ್ಟಿಕ್ಯುಲ್ಯಾರಿಸ್ R.Br. ex Wt. & Arn. - ರೂಬಿಯೇಸಿ

Synonym : ಓಲ್ಡೆನ್ಲ್ಯಾಂಡಿಯ ಆರ್ಟಿಕ್ಯುಲ್ಯಾರಿಸ್ (Wt. & Arn.)Gamble

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳಿಂದ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಛಾಯೆಯಲ್ಲಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಕೋನಗಳನ್ನು ಹೊಂದಿದ್ದು, ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ; ಕಾವಿನೆಲೆಗಳು ಆಳವಾದ ಸೀಳಿಕೆಗಳನ್ನು ಹೊಂದಿದ್ದು ತೊಟ್ಟುಗಳ ನಡುವೆ ಇರುತ್ತವೆ,ಬುಡ ಬಾಗದಲ್ಲಿ ಸಂಯುಕ್ತವಾಗಿರುತ್ತವೆ ಮತ್ತು ಉದುರಿದಾಗ ಗುರುತನ್ನು ಉಳಿಸುತ್ತವೆ ಹಾಗೂ ರೋಮರಹಿತವಾಗಿರುತ್ತವೆ; ತೊಟ್ಟುಅಂದಾಜು, 0.2 ಸೆಂ.ಮೀ.ವರೆಗಿನ ಉದ್ದವಿದ್ದು,ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತದೆ ಮತ್ತು ರೋಮರಹಿತವಾಗಿರುತ್ತದೆ;ಪತ್ರಗಳು 1.2-3 X 0.2 –0.7 ಸೆಂ.ಮೀ. ಗಾತ್ರ, ಅಂಡ-ಭರ್ಜಿಯ ಆಕಾರ ಹೊಂದಿದ್ದು, ಮೊಂಡಾಗ್ರವುಳ್ಳ ಚೂಪಾದ ತುದಿ, ಚೂಪಾದುದರಿಂದ ಛಿನ್ನಾಗ್ರ ಮಾದರಿವರೆಗಿನ ಬುಡ, ನಯವಾದ ಮತ್ತು ಹಿಂಚಾಚಿದ ಅಂಚು,ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ತಳಭಾಗದಲ್ಲಿ ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ತೆಳುವಾದ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 4 ಜೋಡಿಗಳಿದ್ದು ಪ್ರಮುಖವಾಗಿರುವುದಿಲ್ಲ ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಒತ್ತಾಗಿ ಜೋಡಣೆಗೊಂಡ ಮಧ್ಯಾರಂಭಿ ಮಾದರಿಯವು; ಹೂಗಳು ಉಪ-ತೊಟ್ಟನ್ನು ಹೊಂದಿದ್ದು ಊದಾ ಬಣ್ಣದ ಹೊರ ಆವರಣ ಹಾಗೂ ಬಿಳಿಯ ಒಳ ಆವರಣದ ಸಮೇತವಿರುತ್ತವೆ;
ಕಾಯಿ / ಬೀಜ : ಸಂಪುಟ ಫಲ ಬುಗುರಿಯ ಆಕಾರ ಹೊಂದಿದ್ದು ರೋಮರಹಿತವಾಗಿರುತ್ತದೆ ಹಾಗೂ ಶಾಶ್ವತವಾಗಿ ಉಳಿಯುವ ಪುಷ್ಪಪಾತ್ರೆಯ ಎಸಳುಗಳ ಸಮೇತವಿರುತ್ತವೆ;ಬೀಜಗಳ ಸಂಖ್ಯೆ 2.

ಜೀವಪರಿಸ್ಥಿತಿ :

1800 ಮತ್ತು 2400 ಮೀ. ನಡುವಿನ ಅತಿ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ನೈರುತ್ಯ ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ನೀಲಗಿರಿ,ಅಣ್ಣಾಮಲೈ ಮತ್ತು ಪಾಲಕ್ಕಾಡು ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Prodr. 407. 1834; Gamble, Fl. Madras 2: 597. 1993 (re. ed);Sasidharan, Biodiversity documentation for Kerala- Flowering Plants, part 6: 213. 2004.

Top of the Page