ಹೋಪಿಯ ಕೆನರೆನ್ಸಿಸ್ Hole - ಡಿಪ್ಟೆರೋಕಾರ್ಪೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಚಕ್ಕೆ ರೂಪದಲ್ಲಿದ್ದು ಕಂದು ಬಣ್ಣ ಹೊಂದಿರುತ್ತದೆ ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು,ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ ;ತೊಟ್ಟುಗಳು ಒಂದರಿಂದ ಎರಡು ಸೆಂ.ಮೀ.ಉದ್ದವಿದ್ದು, ರೋಮರಹಿತವಾಗಿರುತ್ತವೆ;ಪತ್ರಗಳು 10-17 X 2-9 ಸೆಂ.ಮೀ ಗಾತ್ರ,ಅಂಡ-ಭರ್ಜಿಯ ಆಕಾರ ಕ್ರಮೇಣ ಚೂಪಾಗುವ ತುದಿ,ಬುಡ ದುಂಡಾಗಿದ್ದು, ಕೆಲವುವೇಳೆ ಎಲೆ ಪತ್ರದ ತಳಭಾಗದ ಮಧ್ಯದಲ್ಲಿ ಎಲೆತೊಟ್ಟು ಇರುತ್ತದೆ;ಪತ್ರದ ಮೇಲ್ಮೈ ತೊಗಲನ್ನೋಲುವ ರೀತಿಯದಾಗಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 8 ಜೋಡಿಗಳಿದ್ದು ಅಕ್ಷಸ್ಥಸಹಜೀವಿ ಗೂಡುಗಳು ತಳಭಾಗದ ಎರಡನೇ ದರ್ಜೆಯ ನಾಳಗಳ ಅಕ್ಷಾಕಂಕುಳಿನಲ್ಲಿರುತ್ತವೆ; ಮೂರನೇ ದರ್ಜೆಯ ನಾಳಗಳು ಓರೆಯಾಗಿದ್ದು,ಕಡಿಮೆ ಅಂತರ ಹೊಂದಿದ್ದು, ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು; ಪುಷ್ಪಮಂಜರಿಗಳು ರೋಮರಹಿತವಾಗಿರುತ್ತವೆ;ಹೂಗಳು ತಿರುಚಿದ ದಳಗಳನ್ನು ಹೊಂದಿದ್ದು ಕೆನೆ ಬಣ್ಣವನ್ನು ಹೊಂದಿರುತ್ತವೆ.
ಕಾಯಿ /ಬೀಜ : ಕಾಯಿಗಳು ಕರಟ ಮಾದರಿಯಲ್ಲಿದ್ದು 1.2 ರಿಂದ 1.5 ಸೆಂ.ಮೀ. ಉದ್ದವಿದ್ದು ಅಂಡಾಕಾರದಲ್ಲಿರುತ್ತವೆ; ಪುಷ್ಪಪಾತ್ರೆ ವೃದ್ಧಿಸಿದ್ದು 2 ದೊಡ್ಡದಾದ ಹಾಲೆಗಳ ಸಮೇತವಾಗಿರುತ್ತದೆ; ಹಾಗೂ ಒಂದು ಬೀಜವನ್ನು ಒಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1000ಮೀ.ವರೆಗಿನ ಮಧ್ಯಮ ಎತ್ತರದ ಪ್ರದೇಶಗಳಲ್ಲಿ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಮೇಲ್ಚಾವಣಿಯಲ್ಲಿ ಈ ಸಸ್ಯ ಕಂಡುಬರುತ್ತದೆ..

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ- ಮಧ್ಯ ಸಹ್ಯಾದ್ರಿಯಲ್ಲಿನ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದಲ್ಲಿ ಈ ಸಸ್ಯ ಹೇರಳವಾಗಿ ಬೆಳೆಯುತ್ತದೆ.

ಗ್ರಂಥ ಸೂಚಿ :

Ind. For. 44:575.1918; Gamble,Fl.Madras 3:1867.1997(re.ed.);Saldanha, Fl. Karnataka 1:192.1996.

Top of the Page