ಹೋಪಿಯ ಎರೋಸ (Bedd.) van Sloot. - ಡಿಪ್ಟೆರೋಕಾರ್ಪೇಸಿ

Synonym : ಬಲನೋಕಾರ್ಪಸ್ ಎರೋಸ Bedd.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಅಂದಾಜು 18 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ತೆಳುವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಮತ್ತು ಎಳೆಯ ಎಲೆತೊಟ್ಟುಗಳು ಸೂಕ್ಷ್ಮವಾದ ರೋಮಗಳನ್ನು ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ ;ತೊಟ್ಟುಗಳು ದೃಢವಾಗಿದ್ದು ಅಂದಾಜು 0.5 ಸೆಂ.ಮೀ.ಉದ್ದವಿರುತ್ತವೆ;ಪತ್ರಗಳು 10-25 X 3-6 ಸೆಂ.ಮೀ ಗಾತ್ರ,ಅಂಡವೃತ್ತ-ಚತುರಸ್ರ ದಿಂದ ಹಿಡಿದು ಚತುರಸ್ರ- ಭರ್ಜಿಯವರೆಗಿನ ಆಕಾರ, ಚೂಪಾಗುವ ತುದಿ,ದುಂಡಗಿನ ಅಥವಾ ಉಪ- ಹೃದಯಾಕಾರದ ಬುಡ,ನಯವಾದ ಅಂಚು ಹೊಂದಿದ್ದು ರೋಮರಹಿತವಾಗಿರುತ್ತವೆ;ಮಧ್ಯನಾಳಗಳು ಮೇಲೆದ್ದಿರುತ್ತವೆ; ಎರಡನೇ ದರ್ಜೆಯ ನಾಳಗಳು 12 ರಿಂದ 14 ಜೋಡಿಗಳಿರುತ್ತವೆ, ಮೂರನೇ ದರ್ಜೆಯ ನಾಳಗಳು ದುರ್ಬಲವಾದ ಜಾಲಬಂಧ ನಾಳ ವಿನ್ಯಾಸ ಹೊಂದಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಪುನರಾವೃತ್ತಿಯಾಗಿ ಕವಲೊಡೆಯು ಮಾದರಿಯಲ್ಲಿದ್ದು ಅಕ್ಷಾಕಂಕುಳಿನಲ್ಲಿರುವ ಗುಚ್ಛಗಳಲ್ಲಿರುತ್ತವೆ;
ಕಾಯಿ /ಬೀಜ : ಕಾಯಿಗಳು ಕರಟ ಮಾದರಿಯಲ್ಲಿದ್ದು 2.5 X 1.5 ಸೆಂ.ಮೀ. ಗಾತ್ರವಿದ್ದು,ಬುಗುರಿ ಅಥವಾ ಚತುರಸ್ರಾಕಾರ ಹೊಂದಿದ್ದು, ತುದಿಯಲ್ಲಿ ಸೂಕ್ಷ್ಮ ಮೊನಚು ಮುಳ್ಳನ್ನು ಹೊಂದಿರುತ್ತವೆ. ಕಾಯಿಗಳ ಪುಷ್ಪಪಾತ್ರೆ ದಾರುವಿನಂತಿದ್ದು ಛಿನ್ನಾಗ್ರವಾಗಿರುತ್ತದೆ.

ಜೀವಪರಿಸ್ಥಿತಿ :

700ಮೀ.ವರೆಗಿನ ಕೆಳ ಎತ್ತರದ ಪ್ರದೇಶಗಳಲ್ಲಿನ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಆಗಾಗ್ಗೆ ನೀರಿನ ತೊರೆಗಳ ಬಳಿಯಲ್ಲಿ ಉಪ-ಮೇಲ್ಚಾವಣಿಮರಗಳಾಗಿ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಸಸ್ಯ ವಿಚ್ಛಿನ್ನ ರೀತಿಯಲ್ಲಿ ವ್ಯಾಪಿಸಿದೆ;ದಕ್ಷಿಣ ಸಹ್ಯಾದ್ರಿಯಲ್ಲಿನ ಅಗಸ್ತ್ಯಮಲೆ ಮತ್ತು ಪಶ್ಚಿಮ ಅಣ್ಣಾಮಲೆ ಮತ್ತು ಮಧ್ಯ ಸಹ್ಯಾದ್ರಿಯಲ್ಲಿನ ವಯನಾಡು ಘಟ್ಟಗಳಲ್ಲಿ ಈ ಪ್ರಭೇದವನ್ನು ದಾಖಲಿಸಲಾಗಿದೆ.

ಗ್ರಂಥ ಸೂಚಿ :

Reinwardtia 3:318.1956;Gamble, Fl.Madras 1:84.1997(re.ed.);Sasidharan, Biodiversity documentation for Kerala- Flowering Plants, part 6:44.2004.

Top of the Page