ಹಂಟೀರಿಯ ಜೇಲಾನಿಕ (Retz.) Gard. ex Thw. - ಅಪೋಸೈನೇಸಿ

Synonym : ಹಂಟೀರಿಯ ಕೋರಿಂಬೋಸ Roxb.; ಹಂಟೀರಿಯ ರಾಕ್ಸ್ಬರ್ಗಿಯಾನ Wt.; ಕಮೇರಿಯ ಜೇಲಾನಿಕ Retz.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12ಮೀ ಎತ್ತರದವರೆವಿಗೆ ಬೆಳೆಯುವ ಸಣ್ಣಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ವಾಯು ವಿನಿಮಯ ಬೆಂಡುರಂಧ್ರಗಳ ಸಮೇತವಾಗಿರುತ್ತದೆ. ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು, ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಸಸ್ಯ ಕ್ಷೀರ ಹಾಲಿನ ಬಿಳುಪು ಬಣ್ಣವನ್ನು ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿದ್ದು 1.3 ರಿಂದ 1.9 ಸೆಂ.ಮೀ. ಉದ್ದದ ಎಲೆ ತೊಟ್ಟನ್ನು ಹೊಂದಿರುತ್ತವೆ. ಪತ್ರಗಳು 6 - 12.7 x 1.4 - 2.5 ಸೆಂ.ಮೀ. ಗಾತ್ರ ಹೊಂದಿರುತ್ತವೆ. ಪತ್ರಗಳು ಅಂಡವೃತ್ತಾಕೃತಿ-ಚತುರಸ್ರಾಕಾರದಿಂದ ಭರ್ಜಿಯಾಕಾರವನ್ನು ಹೊಂದಿದ್ದು ಕ್ರಮೇಣವಾಗಿ ಚೂಪಾಗುವುದರಿಂದ ಚೂಪಾದ ಎಲೆ ತುದಿಯನ್ನು ಹಾಗೂ ಚೂಪಾದ ಎಲೆ ಬುಡವನ್ನು ಪಡೆದಿರುತ್ತವೆ. ಎಲೆಯ ಅಂಚು ನಯ. ಪತ್ರದ ಮೇಲ್ಭಾಗ ಹೊಳಪು ಹಾಗು ಕಾಗದವನ್ನು ಹೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೀಕರಣಗೊಂಡಿದ್ದು ಅಂತರ ಅಂಚಿನ ನಾಳ ಸಮೇತವಾಗಿರುತ್ತವೆ. ಎರಡನೇ ದರ್ಜೆಯ ನಾಳಗಳು ಬಹುಸಂಖ್ಯೆ-ಯಲ್ಲಿದ್ದು ತೆಳುವಾಗಿರುತ್ತವೆ. ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಯ ಅಕ್ಷದ ದಿಕ್ಕಿಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಶ್ವೇತ ವರ್ಣ ಹೊಂದಿದ್ದು ಸುವಾಸನಾಯುಕ್ತವಾಗಿದ್ದು ತುದಿಯಲ್ಲಿನ ಅಥವಾ ಎಲೆಗಳಿಗೆ ಅಭಿಮುಖವಾಗಿರುವ ಮಧ್ಯಾರಂಭಿ ಪುಷ್ಪ ಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯಲ್ಲಿದ್ದು ಗೋಳಾಕಾರದಲ್ಲಿದ್ದು 1 ರಿಂದ 2 ಬೀಜಗಳನ್ನು ಹೊಂದಿರುತ್ತವೆ. ಕಾಯಿಗಳು ಹಣ್ಣಾದಾಗ ಕಿತ್ತಳೆ ಕೆಂಪು ಬಣ್ಣದ್ದಾಗಿರುತ್ತವೆ.

ಜೀವಪರಿಸ್ಥಿತಿ :

ಸಮುದ್ರಮಟ್ಟದಿಂದ 800ಮೀ ಎತ್ತರದವರೆಗಿನ ಪ್ರದೇಶಗಳಲ್ಲಿನ ತೇವಾಂಶವುಳ್ಳ ನಿತ್ಯಹರಿದ್ವರ್ಣ ರೀತಿಯ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಬೇಧ ಬೆಳೆಯುತ್ತವೆ.

ಗ್ರಂಥ ಸೂಚಿ :

Thwaites, Pl. Zeyl. 191.1860; Gamble, Fl. Madras 2: 808.1997 (re.ed); Sasidharan, Biodiversity documentation for Kerala- Flowering Plants, part 6: 282. 2004.

Top of the Page