ಹಿಡ್ನೋಕಾರ್ಪಸ್ ಪೆಂಟಾಂಡ್ರ (Buch.-Ham.) Oken - ಫ್ಲಕೋರ್ಶಿಯೇಸಿ

Synonym : ಹಿಡ್ನೋಕಾರ್ಪಸ್ ಲಾರಿಫೋಲಿಯ(Dennst.)Sleumer

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿರುತ್ತದೆ ಮತ್ತು ಸೀಳಿಕಾ ಮಾದರಿಯಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ನಸುಗೆಂಪು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪ-ದುಂಡಾಗಿದ್ದು ಸೂಕ್ಷ್ಮ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಉದುರಿ ಹೋಗುವಂತವು; ತೊಟ್ಟುಗಳು 0.7 -2.2 ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ಉಪ-ದುಂಡಾಗಿರುತ್ತವೆ ಮತ್ತುಮೃದು ತುಪ್ಪಳದಿಂದ ಕೂಡಿರುತ್ತದೆ; ಪತ್ರಗಳು 8-23 X 3.5-10ಸೆಂ.ಮೀ.ಗಾತ್ರ ಹೊಂದಿದ್ದು ಸಾಮಾನ್ಯವಾಗಿ ಚತುರಸ್ರದಿಂದ ಅಂಡವೃತ್ತ –ಚತುರಸ್ರದವರೆಗಿನ ಆಕಾರ ಹೊಂದಿದ್ದು, ಬಾಲರೂಪಿ- ಕ್ರಮೇಣ ಚೂಪಾಗುವ ತುದಿ,ಚೂಪಾದ ಅಥವಾ ಬೆಣೆಯಾಕಾರದ ಬುಡ ಮತ್ತು ಗರಗಸ ದಂತಿತವಾದ ಅಂಚು ಹೊಂದಿರುತ್ತವೆ; ಮೇಲ್ಮೈ ಕಾಗದವನ್ನೋಲುವ ಮಾದರಿಯಲ್ಲಿರುತ್ತದೆ ಮತ್ತು ರೋಮರಹಿತವಾಗಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು5-7 ಜೋಡಿಗಳಿದ್ದು ಅಗ್ರದ ಕಡೆಗೆ ಓರೆಯಾಗಿ ಆರೋಹಣಗೊಳ್ಳುತ್ತವೆ;ಮೂರನೇ ದರ್ಜೆಯ ನಾಳಗಳು ಕಡಿಮೆ ಅಂತರದಲ್ಲಿದ್ದು ಲಂಬ ರೇಖೆಗೆ ಸಮಕೋನದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿನ ಕಿರು ಉದ್ದದ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ ಅಥವಾ ಒಂಟಿಯಾಗಿರುತ್ತವೆ ಮತ್ತು ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ; ಪುಷ್ಪ ದಳಗಳು ಬಿಳಿ ಬಣ್ಣದವು.
ಕಾಯಿ /ಬೀಜ : ಬೆರ್ರಿಗಳು ಗೋಳಾಕಾರದಲ್ಲಿದ್ದು 6(-10) ಸೆಂ.ಮೀ.ವರೆಗಿನ ಅಡ್ಡಗಳತೆ ಹೊಂದಿರುತ್ತವೆ ಮತ್ತು ಸಾಮಾನ್ಯವಾಗಿ ಕಡು ಕಂದು ಮೃದುತುಪ್ಪಳದಿಂದ ಕೂಡಿರುತ್ತವೆ ಮತ್ತು ದಾರುವಿನಂತಿರುತ್ತವೆ ಹಾಗೂ ಅಗ್ರದಲ್ಲಿ ಸೂಕ್ಷ್ಮ ಕಿರು ಮುಳ್ಳನ್ನು ಹೊಂದಿರುತ್ತವೆ; ಬೀಜಗಳು ಅಸಂಖ್ಯ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳ ಒಳ ಛಾವಣಿಯಲ್ಲಿ ಮತ್ತು ತೊರೆಗಳ ಬದಿಯಲ್ಲಿ ಕಂಡು ಬರುವ ಈ ಸಸ್ಯ ಸಾಧಾರಣವಾಗಿ 1000 ಮೀ. ವರೆಗಿನ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತದೆ ಕೆಲವೊಮ್ಮೆ 1700 ಎತ್ತರದ ಪ್ರದೇಶಗಳಿಗೂ ವಿಸ್ತರಿಸಿರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Bull. Bot. Surv. India 14:183.1972; ;Gamble, Fl. Madras 1:52.1997 (Rep. Ed.) Sasidharan, Biodiversity documentation for Kerala- Flowering Plants, part 6 ,33. 2004;Saldanha, Fl. Karnataka 1:272. 1996.

Top of the Page