ಇಕ್ಸೋರ ಎಲಾಂಗೇಟ Heyne ex G. Don. - ರೂಬಿಯೇಸಿ

:

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ತೊಟ್ಟುಗಳ ನಡುವೆ ಇರುತ್ತವೆ,ಉದುರಿದ ನಂತರ ಗುರುತುಗಳನ್ನು ಉಳಿಸುತ್ತವೆ ;ತೊಟ್ಟು 1ರಿಂದ 1.2 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತದೆ, ರೋಮರಹಿತವಾಗಿರುತ್ತದೆ;ಪತ್ರಗಳು 7-26.5 X 3 –10.2 ಸೆಂ.ಮೀ. ಗಾತ್ರ ಹೊಂದಿದ್ದು ವಿಶಾಲ ಅಂಡವೃತ್ತದಿಂದ ಅಂಡವೃತ್ತ-ಬುಗುರಿ-ಭರ್ಜಿವರೆಗಿನ ಆಕಾರ ಹೊಂದಿದ್ದು, ಚೂಪಾದ ತುದಿ, ಒಳಬಾಗಿದ ಮಾದರಿಯಿಂದ ತಳಭಾಗಕ್ಕೆ ವಿಸ್ತರಿಸಿದ ಮಾದರಿವರೆಗಿನ ಬುಡ, ನಯವಾದ ಅಂಚು,ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಸ್ವಲ್ಪಮಟ್ಟಿಗೆ ಕಾಲುವೆಗೆರೆಯನ್ನು ಹೊಂದಿರುತ್ತದೆ;ಎರಡನೇ ದರ್ಜೆಯ ನಾಳಗಳು 12 ರಿಂದ 15 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ತೆಳುವಾಗಿದ್ದು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ನೀಳಛತ್ರ ಮಾದರಿಯಲ್ಲಿದ್ದು ತುಂಬಾ ಒತ್ತಾಗಿರುತ್ತವೆ; ವೃಂತ ಉದ್ದವಾಗಿದ್ದು 15 ಸೆಂ.ಮೀ.ವರೆಗಿನ ಉದ್ದವಿರುತ್ತವೆ ಮತ್ತು ಮೃದುತುಪ್ಪಳದಿಂದ ಕೂಡಿರುತ್ತವೆ; ಹೂಗಳು ತೊಟ್ಟು ರಹಿತವಾಗಿದ್ದು ಬಿಳಿ ಬಣ್ಣ ಹೊಂದಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು ಬಹುಮಟ್ಟಿಗೆ ಗೋಳದ ಆಕಾರ ಹೊಂದಿರುತ್ತವೆ; ಬೀಜಗಳ ಸಂಖ್ಯೆ 2.

ಜೀವಪರಿಸ್ಥಿತಿ :

300 ಮತ್ತು 900 ಮೀ. ನಡುವಿನ ಎತ್ತರದ ಪ್ರದೇಶಗಳಲ್ಲಿನ ಒಣ ನಿತ್ಯ ಹರಿದ್ವರ್ಣದಿಂದ ನಿತ್ಯ ಹರಿದ್ವರ್ಣದವರೆಗಿನ ಕಾಡುಗಳ ಒಳಗೆ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಇಂಡೋಮಲೇಸಿಯ ; ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ,ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Gen. Hist. 3: 572. 1834; Gamble, Fl. Madras 2: 630. 1993 (re. ed); Sasidharan, Biodiversity documentation for Kerala- Flowering Plants, part 6: 218. 2004; Cooke, Fl. Bombay 1: 610.1903; Almeida, Fl. Maharashtra 3:23. 2001.

Top of the Page