ಲ್ಯಾಸಿಯಾಂತಸ್ ಜಾಕ್ಕಿಯಾನಸ್ Wt. - ರೂಬಿಯೇಸಿ

:

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ 5 ಮೀ. ಎತ್ತರದ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕಾಂಡದ ಲಂಬ ರೇಖೆಗೆ ಸಮಕೋನದಲ್ಲಿರುತ್ತವೆ;ಕಿರುಕೊಂಬೆಗಳು ಉಪ-ದುಂಡಾಗಿರುವುದರಿಂದ ಸಂಕುಚಿತವರೆಗಿನ ಆಕಾರ ಹೊಂದಿರುತ್ತವೆ ಮತ್ತು ಒರಟು ರೋಮಗಳಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ತ್ರಿಕೋನದ ಆಕಾರ ಹೊಂದಿದ್ದು ತೊಟ್ಟುಗಳ ನಡುವೆ ಇರುತ್ತವೆ,ಉದುರಿದ ನಂತರ ಗುರುತುಗಳನ್ನು ಉಳಿಸುತ್ತವೆ;ತೊಟ್ಟು 0.2-0.5 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತದೆ,ಒರಟು ರೋಮಗಳಿಂದ ಕೂಡಿರುತ್ತವೆ;ಪತ್ರಗಳು 5.5-17 X 2–4 ಸೆಂ.ಮೀ. ಗಾತ್ರ ಹೊಂದಿದ್ದುಸಂಕುಚಿತ ಅಂಡವೃತ್ತದಿಂದ ಚತುರಸ್ರ ಅಥವಾ ಬುಗುರಿ-ಭರ್ಜಿಯವರೆಗಿನ ಆಕಾರ ಹೊಂದಿದ್ದು,ಅತಿ ಚೂಪಾದ ಬಾಲ ರೂಪಿ- ಕ್ರಮೇಣ ಚೂಪಾಗುವವರೆಗಿನ ತುದಿ, ಚೂಪಾದುದರಿಂದ ದುಂಡಾಗಿರುವರೆಗಿನ ಬುಡ, ನಯವಾಗಿದ್ದು ಲೋಮಾಂಗಗಳಿಂದ ಕೂಡಿದ ಅಂಚು ಹೊಂದಿರುತ್ತವೆ,ಪತ್ರಗಳ ತಳಭಾಗ ಒರಟು ರೋಮಗಳಿಂದ ಆವೃತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆಯನ್ನು ಹೊಂದಿರುತ್ತದೆ;ಎರಡನೇ ದರ್ಜೆಯ ನಾಳಗಳು 7 ರಿಂದ 8 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಎಲೆ ದಿಂಡಿಗೆ ಸಮಕೋನದಲ್ಲಿದ್ದು ಕಡಿಮೆ ಅಂತರ ಹೊಂದಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಮಧ್ಯಾರಂಭಿ ಮಾದರಿಯವುಗಳಾಗಿದ್ದು ಅಕ್ಷಾಕಂಕುಳಿನಲ್ಲಿರುತ್ತವೆ; ಹೂಗಳು ತೊಟ್ಟು ರಹಿತವಾಗಿದ್ದು ಬಿಳಿ ಬಣ್ಣದಲ್ಲಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಗೋಳಾಕಾರದಲ್ಲಿದ್ದು ಅಗ್ರದಲ್ಲಿ ಶಾಶ್ವತವಾದ ಪುಷ್ಪಪಾತ್ರೆಯ ಎಸಳುಗಳನ್ನು ಹೊಂದಿರುತ್ತವೆ;ಬೀಜಗಳ ಸಂಖ್ಯೆ 4.

ಜೀವಪರಿಸ್ಥಿತಿ :

700 ಮತ್ತು 1600 ಮೀ. ಮಧ್ಯಮ ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ನೈರುತ್ಯ ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿಯ ಪಾಲಕ್ಕಾಡು ಬೆಟ್ಟಗಳು ಮತ್ತು ವಯನಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ.

ಸ್ಥಿತಿ :

ಅಪರೂಪ(Nayar,1997).

ಗ್ರಂಥ ಸೂಚಿ :

Cal. J. Nat. Hist. 6: 512. 1846; Gamble, Fl. Madras 2: 647. 1993 (re.ed.); Sasidharan, Biodiversity documentation for Kerala- Flowering Plants, part 6: 221. 2004.

Top of the Page