ಲೆಪಿಸಾಂತೆಸ್ ಡೆಫಿಸಿಯೆನ್ಸ್ - ಸ್ಯಾಪಿಂಡೇಸಿ

:

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ 5 ಮೀ ಎತ್ತರದವರೆಗಿನ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದ ಛಾಯೆಯಲ್ಲಿದ್ದು ಬೆಂಡು ರಂಧ್ರಗಳನ್ನು ಹೊಂದಿರುತ್ತದೆ; ಕಚ್ಚು ಮಾಡಿದ ಜಾಗ ಹಳದಿ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತವಾಗಿದ್ದು ಸಮಗರಿ ರೂಪಿಗಳಾಗಿರುತ್ತವೆ, ಅಪರೂಪವಾಗಿ ಅಸಮಗರಿ ರೂಪಿಗಳಾಗಿರುತ್ತವೆ,50 ಸೆಂ.ಮೀ.ಉದ್ದ ಹೊಂದಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಅಕ್ಷದಿಂಡು ಉಬ್ಬು ಸಾಲಿನ ಗುರುತುಗಳನ್ನು ಹೊಂದಿರುತ್ತದೆ, ಸಾಮಾನ್ಯವಾಗಿ ಕಂದು ಬಣ್ಣದಲ್ಲಿರುತ್ತದೆ,ಉಬ್ಬಿದ ಬುಡದ ಸಮೇತವಿದ್ದು,ದುಂಡಾಗಿದ್ದು, ರೋಮರಹಿತವಾಗಿರುತ್ತದೆ;ಉಪತೊಟ್ಟು 0.5 ರಿಂದ 1 ಸೆಂ.ಮೀ.ಉದ್ದವಿದ್ದು, ದೃಢವಾಗಿದ್ದು, ಕಾಲುವೆಗೆರೆ ಸಮೇತವಿದ್ದು ರೋಮರಹಿತ -ವಾಗಿರುತ್ತದೆ; ಉಪಪತ್ರಗಳು 4 ರಿಂದ 7 ಜೋಡಿಗಳಿದ್ದು, ಅಭಿಮುಖಿ ಅಥವಾ ಉಪ ಅಭಿಮುಖಿಗಳಾಗಿರುತ್ತವೆ,ಗಾತ್ರದಲ್ಲಿ 12-28 X 4.5 – 9.5 ಸೆಂ.ಮೀ. ಇದ್ದು, ಸಂಕುಚಿತ ಅಂಡವೃತ್ತ-ಚತುರಸ್ರದಿಂದ ಬುಗುರಿ-ಭರ್ಜಿಯ ಆಕಾರದಲ್ಲಿರುತ್ತವೆ,ಕಿರು ಪತ್ರಗಳ ತುದಿ ಮೊಂಡಾಗ್ರವುಳ್ಳ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು, ಬುಡ ಚೂಪಾಗಿ ಅಥವಾ ಕೊಂಚ ಅಸಮ್ಮಿತಿಯಾಗಿರುತ್ತದೆ, ಅಂಚು ನಯವಾಗಿದ್ದು, ಮೇಲ್ಮೈ ಕಾಗದ ಅಥವಾ ಉಪ-ಕಾಗದವನ್ನೋಲುವ ಮಾದರಿಯಲ್ಲಿರುತ್ತದೆ ಮತ್ತು ರೋಮರಹಿತ -ವಾಗಿರುತ್ತವೆ;ಮಧ್ಯನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು 7 ರಿಂದ 12 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಕಾಂಡಜನ್ಮಿಗಳಾಗಿದ್ದು ಮಧ್ಯಾಭಿಸರ ಮಾದರಿಯವುಗಳಾಗಿರುತ್ತವೆ ; ಹೂಗಳು ಸಂಕೀರ್ಣಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ ಮತ್ತು ಉಪ-ತೊಟ್ಟುಗಳ ಸಮೇತವಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು3.5X2.8 ಸೆಂ.ಮೀ. ಗಾತ್ರವಿರುತ್ತವೆ;ಬೀಜಗಳು ಕಪ್ಪು ಬಣ್ಣ ಹೊಂದಿದ್ದು ಅಂಡವೃತ್ತದ ಆಕಾರದಲ್ಲಿರುತ್ತವೆ.

ಜೀವಪರಿಸ್ಥಿತಿ :

1600 ಮೀ. ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಾವರಣದಲ್ಲಿಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿ (ಕೊಡಗಿನವರೆಗೆ) ಪ್ರದೇಶಗಳಲ್ಲಿ ಈ ಪ್ರಬೇಧ ವ್ಯಾಪಿಸಿದೆ.

ಗ್ರಂಥ ಸೂಚಿ :

Leenh., Blumea 17: 69. 1969; Gamble, Fl. Madras 1: 247. 1997 (re. ed).

Top of the Page