ಲಿಗುಸ್ಟ್ರಂ ಗ್ಯಾಂಬ್ಲಿಯೈ Ramamoorthy - ಓಲಿಯೇಸಿ

ಪರ್ಯಾಯ ನಾಮ : ಲಿಗುಸ್ಟ್ರಂ ರಾಕ್ಸ್ಬರ್ಗಿಯೈ Clarke

Vernacular names : Malayalam: ಸೀಪಿ ಮರ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಗಿದ್ದು,,ಸೂಕ್ಷ್ಮ ಮೃದುತುಪ್ಪಳದಿಂದ ಕೂಡಿರುತ್ತದೆ ಮತ್ತು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ,ಕೆಲವು ವೇಳೆ ಉಪ ಅಭಿಮುಖಿ -ಗಳಾಗಿರುತ್ತವೆ; ಎಲೆತೊಟ್ಟುಗಳು 0.6 ರಿಂದ 1.3 ಸೆಂ.ಮೀ.ಉದ್ದವಿದ್ದು, ಕಾಲುವೆಗೆರೆ ಸಮೇತವಿರುತ್ತವೆ; ಪತ್ರಗಳು5.5-11 X 3-4 ಸೆಂ.ಮೀ. ಗಾತ್ರ, ಭರ್ಜಿಯ,ಚತುರಸ್ರ-ಭರ್ಜಿಯ ಆಕಾರ, ನಿಧಾನ ಗತಿಯಲ್ಲಿ ಗಾತ್ರದಲ್ಲಿ ಕಡಿಮೆಯಾಗುತ್ತಾ ಬಂದು ಅಥವಾಅಗ್ರದಲ್ಲಿ ಮೊನಚು ಮುಳ್ಳುಳ್ಳ ಕ್ರಮೇಣ ಚೂಪಾಗುವ ಮಾದರಿಯ ತುದಿ, ಒಳಬಾಗಿದ ಬುಡ, ನಯವಾದ ಅಂಚು, ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ತಳಭಾಗದಲ್ಲಿ ರೋಮರಹಿತವಾಗಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಕಾಲುವೆ ಗೆರೆ ಹೊಂದಿರುತ್ತದೆ; ಎರಡನೇ ದರ್ಜೆಯ ನಾಳಗಳು 5 ರಿಂದ 9 ಜೋಡಿಗಳಿದ್ದು ತೆಳುವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಕದಿರಣಿಗೆ ರೂಪದ ಕವಲೊಡೆಯುವ ಮಾದರಿಯಲ್ಲಿರುತ್ತವೆ ಹಾಗೂ ಮೃದು ತುಪ್ಪಳದಿಂದ ಕೂಡಿದ್ದು 20 ಸೆಂ.ಮೀ.ವರೆಗಿನ ಉದ್ದವನ್ನು ಹೊಂದಿರುತ್ತವೆ; ಹೂಗಳು ಬಿಳಿ ಬಣ್ಣದವು ಮತ್ತು ಸುವಾಸನೆಯಿಂದ ಕೂಡಿರುವಂತಹವು.
ಕಾಯಿ / ಬೀಜ : ಡ್ರೂಪ್ಗಳು ಚತುರಸ್ರದ ಆಕಾರದಲ್ಲಿದ್ದು ಅಂದಾಜು 1 ಸೆಂ.ಮೀ. ಉದ್ದ ಹೊಂದಿದ್ದು, ದಟ್ಟ ಕೆನ್ನೀಲಿ ಬಣ್ಣದಲ್ಲಿರುತ್ತವೆ; ಬೀಜ 1 ರಿಂದ ಮೂರು.

ಜೀವಪರಿಸ್ಥಿತಿ :

1800 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣದಿಂದ ಅರೆನಿತ್ಯ ಹರಿದ್ವರ್ಣವರೆಗಿನ ಕಾಡುಗಳ ಅಂಚಿನಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Saldanha & Nicols., Fl. Hassan Dist. 513.1976; Gamble, Fl. Pres.Madras 797:1993(rep.ed.);Sasidharan, Biodiversity documentation for Kerala- Flowering Plants,part 6:278.2004;

Top of the Page