ಲಿಗುಸ್ಟ್ರಂ ಪೆರ್ರೋಟ್ಟೆಟಿಯೈ A. DC - ಓಲಿಯೇಸಿ

ಪರ್ಯಾಯ ನಾಮ : ಲಿಗುಸ್ಟ್ರಂ ನೀಲ್ಘೆರ್ರೆನ್ಸೆ Wt.

Vernacular names : Tamil: ಪಿಂಕನ್,ಪುನ್ನುMalayalam: ಕೂಲಿ ಮರ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ತೆಳು ಕಂದು ಬಣ್ಣದಲ್ಲಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ;ಕಚ್ಚು ಮಾಡಿದ ಜಾಗ ಬಿಳಿಯಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಗಿರುತ್ತವೆ ಮತ್ತು ಸೂಕ್ಷ್ಮ ಮೃದುತುಪ್ಪಳದಿಂದ ಕೂಡಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ .
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ; ಎಲೆತೊಟ್ಟುಗಳು 1 ಸೆಂ.ಮೀ.ವರೆಗಿನ ಉದ್ದವಿದ್ದು, ಕಾಲುಗೆರೆ ಸಮೇತವಿರುತ್ತವೆ; ಪತ್ರಗಳು1.5-5(7.5)X 1.2-3.2(-5) ಸೆಂ.ಮೀ. ಗಾತ್ರ, ಅಂಡವೃತ್ತದಿಂದ ಅಂಡವೃತ್ತ-ಬುಗುರಿಯ ಆಕಾರ, ಚೂಪಾದ ಅಥವಾಅಗ್ರದಲ್ಲಿ ಮೊನಚು ಮುಳ್ಳುಳ್ಳ ಸಣ್ಣ ಗಾತ್ರದ ಕ್ರಮೇಣ ಚೂಪಾಗುವ ಮಾದರಿಯ ತುದಿ, ದುಂಡಾದುದರಿಂದ ಒಳಬಾಗಿದ ಮಾದರಿವರೆಗಿನ ಬುಡ, ನಯವಾದ ಅಂಚು,ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ತಳಭಾಗ ರೋಮರಹಿತವಾಗಿರುತ್ತವೆ ; ಮಧ್ಯನಾಳ ಮೇಲ್ಭಾಗದಲ್ಲಿ ಕಾಲುವೆ ಗೆರೆ ಹೊಂದಿರುತ್ತದೆ; ಎರಡನೇ ದರ್ಜೆಯ ನಾಳಗಳು 3 ರಿಂದ 6 ಜೋಡಿಗಳಿದ್ದು ತೆಳುವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಕದಿರಣಿಗೆ ರೂಪದ ಕವಲೊಡೆಯುವ ಮಾದರಿಯಲ್ಲಿದ್ದು ದೃಢವಾಗಿದ್ದು, ಸಣ್ಣ ಗಾತ್ರದಲ್ಲಿದ್ದು,ದಟ್ಟವಾಗಿದ್ದು ರೋಮರಹಿತವಾಗಿರುತ್ತವೆ;ಹೂಗಳು ಬಿಳಿ ಬಣ್ಣದವು ಮತ್ತು ಸುವಾಸನೆಯಿಂದ ಕೂಡಿರುವಂತಹವು.
ಕಾಯಿ / ಬೀಜ : ಡ್ರೂಪ್ಗಳು ಬುಗುರಿ ಆಕಾರದಲ್ಲಿದ್ದು ಅಂದಾಜು 2 ಸೆಂ.ಮೀ. ಉದ್ದ ಹೊಂದಿದ್ದು, ದಟ್ಟ ಕೆನ್ನೀಲಿ ಬಣ್ಣದಲ್ಲಿರುತ್ತವೆ; ಬೀಜಗಳ ಸಂಖ್ಯೆ 1 ರಿಂದ ಮೂರು.

ಜೀವಪರಿಸ್ಥಿತಿ :

2300 ಮೀ. ಎತ್ತರದವರೆಗಿನ ಅರೆನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಎಲ್ಲಾ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

DC., Prodr. 8: 294.1844;Green, Kew Bull. 45:693.1990; Gamble, Fl. Pres.Madras 797:1993(rep.ed.);Sasidharan, Biodiversity documentation for Kerala- Flowering Plants,part 6:279.2004; Cooke,Fl. Bombay 2:119.1908; Almeida,Fl.Maharashtra 3:189.2001

Top of the Page