ಲಿಟ್ಸಿಯ ಫ್ಲಾರಿಬಂಡ (Bl.) Gamble - ಲಾರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ವಾಯುವಿನಿಮಯ ಬೆಂಡು ರಂಧ್ರಗಳನ್ನು ಹೊಂದಿರುತ್ತವೆ;ಕಚ್ಚು ಮಾಡಿದ ಜಾಗ ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದೃಢವಾಗಿದ್ದು ದಟ್ಟವಾದ ತುಕ್ಕು ವರ್ಣದ ರೋಮಗಳಿಂದ ಕೂಡಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿ -ರುತ್ತವೆ; ತೊಟ್ಟುಗಳು 0.4-2 ಸೆಂ.ಮೀ. ಉದ್ದವಿದ್ದು ತುಕ್ಕು ವರ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ ಮತ್ತು ಮತ್ತು ಅಡ್ಡ ಸೀಳಿದಾಗ ಸಪಾಟ ಪೀನಮಧ್ಯ ಆಕಾರದಲ್ಲಿರುತ್ತವೆ ; ಪತ್ರಗಳು 6-25 X3-9 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದು ಆಕಾರದಲ್ಲಿ ವೈವಿಧ್ಯತೆ ಹೊಂದಿರುತ್ತವೆ; ಅಂಡವೃತ್ತದಿಂದ ಅಂಡವೃತ್ತ-ಬುಗುರಿವರೆಗಿನ ಆಕಾರ ಹೊಂದಿರುತ್ತವೆ ;ತುದಿ ಚೂಪಲ್ಲದುದರಿಂದ ಚೂಪು ಅಥವಾ ಕ್ರಮೇಣ ಚೂಪಾಗುವ ಮಾದರಿಯವರೆಗೆ ಇರುತ್ತವೆ ಮತ್ತು ಚೂಪಾದ ಬುಡವನ್ನು ಹೊಂದಿರುತ್ತವೆ;ಅಂಚು ನಯವಾಗಿರುತ್ತದೆ ಅಥವಾ ಕೊಂಚ ಹಿಂಸುರುಳಿಯನ್ನು ಹೊಂದಿರುತ್ತದೆ ; ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿರುತ್ತದೆ;ಪತ್ರದ ತಳಭಾಗ ಮಾಸಲು ಬೂದು ಹಸಿರು ಬಣ್ಣ ಹೊಂದಿರುತ್ತದೆ;ಪತ್ರಗಳು ಒಣಗಿದಾಗ ಮೇಲ್ಭಾಗ ಹಸಿರಾಗಿಯೂ ತಳಬಾಗ ಕಂದು ಬಣ್ಣದಲ್ಲಿಯೂ ಇರುತ್ತವೆ; ನಡುವಿನ ನಾಳಗಳು ವಿರಳವಾಗಿ ರೋಮಸಹಿತವಾಗಿರುತ್ತವೆ; ಪತ್ರಗಳು ಬುಡದ ಬಳಿಯಲ್ಲಿ ಮಧ್ಯನಾಳ ದಟ್ಟ ಮೃದು ತುಪ್ಪಳವನ್ನು ಹೊಂದಿರುವುದನ್ನು ಬಿಟ್ಟರೆ ಮೇಲ್ಭಾಗ ರೋಮರಹಿತ -ವಾಗಿರುತ್ತವೆ;ಎರಡನೇ ದರ್ಜೆಯ ನಾಳಗಳು 8-15 ಜೋಡಿಗಳಿದ್ದು ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತವೆ ಮತ್ತು ತಳಬಾಗದಲ್ಲಿ ದೃಢವಾಗಿರುತ್ತವೆ ಹಾಗೂ ಸಾಮಾನ್ಯವಾಗಿ ಬಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ಹೆಚ್ಚಿನ ಅಂತರ ಹೊಂದಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ ಹಾಗೂ ದೃಢವಾಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಪೀಠಛತ್ರ ಪುಷ್ಪಮಂಜರಿಗಳು ಮಧ್ಯಾಭಿಸರ ಮಾದರಿಯಲ್ಲಿರುತ್ತವೆ ಮತ್ತು ತುಕ್ಕು ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ.
ಕಾಯಿ /ಬೀಜ : ಬೆರ್ರಿ ಅಂಡಾಕಾರದಲ್ಲಿದ್ದು ಪುಷ್ಪಾವರಣದ ಬಟ್ಟಲಿನ ಮೇಲೆ ಆಸೀನವಾಗಿರುತ್ತದೆ ಮತ್ತು ಒಂದು ಬೀಜವನ್ನು ಒಳಗೊಂಡಿರುತ್ತದೆ.

ಜೀವಪರಿಸ್ಥಿತಿ :

ನಿತ್ಯ ಹರಿದ್ವರ್ಣ ಕಾಡುಗಳಲ್ಲಿನಲ್ಲಿ ಸಾಮಾನ್ಯವಾಗಿ ಒಳಛಾವಣಿ ಮರಗಳಾಗಿ ಕಂಡುಬರುವ ಈ ಪ್ರಭೇದ 300 ರಿಂದ 1800 ಮೀ.ನಡುವಿನ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಬೆಳೆಯುತ್ತದೆ.

ಗ್ರಂಥ ಸೂಚಿ :

Gamble, FPM1238(867);Gamble,Fl.Madras 2:1238. 1993(rep.ed.); Sasidharan, Biodiversity documentation for Kerala Flowering Plants, part 6: 398. 2004; Saldanha, Fl. Karnataka 1:66.1996.

Top of the Page