ಲಿಟ್ಸಿಯ ಕ್ವಿನ್ಕ್ವೆಫೋಲಿಯ (Dennst.) Suresh - ಲಾರೇಸಿ

Synonym : ಲಿಟ್ಸಿಯ ಲಿಗುಸ್ಟ್ರೈನ (Nees) J.Hk.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 6 ಮೀ.ವರೆವಿಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಉದುರು ರೋಮಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿ ಇರುತ್ತವೆ;ತೊಟ್ಟುಗಳು 1.5 ಸೆಂ.ಮೀ. ಉದ್ದ ಹೊಂದಿದ್ದು ಅಡ್ಡಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ; ಪತ್ರಗಳು 7-10 X 2.5 – 4 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದು ಬುಗುರಿಯಿಂದ ಬುಗುರಿ- ಭರ್ಜಿ ವರೆಗಿನ ಅಥವಾ ಅಂಡವೃತ್ತದ ಆಕಾರ ಹೊಂದಿರುತ್ತವೆ ಮತ್ತು ಉಪತೊಗಲನ್ನೋಲುವ ಮತ್ತು ರೋಮರಹಿತವಾದ ಹಾಗೂ ಪತ್ರದ ತಳಭಾಗದಲ್ಲಿ ಮಾಸಲು ಬೂದು ಹಸಿರು ಬಣ್ಣಹೊಂದಿದ ಮೇಲ್ಮೈ ಹೊಂದಿದ್ದು ಚೂಪಲ್ಲದ ಅಥವಾ ಚೂಪಾದ ತುದಿ ಮತ್ತು ಚೂಪಾದುದರಿಂದ ಬೆಣೆಯಾಕಾರದ ಬುಡವನ್ನು ಹೊಂದಿರುತ್ತವೆ; ಅಂಚು ನಯವಾಗಿ -ರುತ್ತದೆ; ಎರಡನೇ ದರ್ಜೆಯ ನಾಳಗಳು 6-9 ಜೋಡಿಗಳಿರುತ್ತವೆ;ಉನ್ನತ ದರ್ಜೆಯ ನಾಳಗಳು ಪತ್ರಗಳು ಕನಿಷ್ಟ ಪಕ್ಷಒಣಗಿದ್ದಾಗಲಾದರೂ ಜಾಲಬಂಧ ನಾಳ ವಿನ್ಯಾಸ ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿರುವ ಅಥವಾ ಪಾರ್ಶ್ವದಲ್ಲಿನ ಪೀಠಛತ್ರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿ 0.6 ಸೆಂ.ಮೀ. ಅಡ್ಡಗಳತೆ ಹೊಂದಿರುತ್ತದೆ ಮತ್ತು ರೋಮರಹಿತವಾಗಿದ್ದು ಒಂದು ಬೀಜವನ್ನು ಒಳಗೊಂಡಿರುತ್ತದೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ 700 ರಿಂದ 2200 ಮೀ. ನಡುವಿನ ಎತ್ತರದ ಪ್ರದೇಶಗಳ ಒಣ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಸಹ್ಯಾದ್ರಿ,ಪಾಲಕ್ಕಡು ಬೆಟ್ಟಗಳು ಮತ್ತು ವಯನಾಡಿನಲ್ಲಿ ಅಪರೂಪವಾಗಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Nicols.. et. al., Interpr. Hort. Malab. 158.1998;Gamble,Fl. Madras 2:1235.1993(rep.ed.); Sasidharan, Biodiversity documentation for Kerala Flowering Plants, part 6: 399. 2004

Top of the Page