ಮೇಟಿನಸ್ ರಾತಿಯಾನ (Walp.) Ramam. - ಸೆಲಾಸ್ಟ್ರೇಸಿ

Synonym : ಜಿಮ್ನೋಸ್ಪೋರಿಯ ರಾತಿಯಾನ Wt. & Arn.

ಕನ್ನಡದ ಪ್ರಾದೇಶಿಕ ಹೆಸರು : ಅಂಕ್ಲಿ, ಎಂಕ್ಲಿ,ಕಂಕಡ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ 5 ಮೀ. ಎತ್ತರಕ್ಕೆ ಬೆಳೆಯುವ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತ ವಾಗಿರುತ್ತವೆ
ಎಲೆಗಳು : ಎಲೆಗಳು ಸರಳವಾಗಿದ್ದು ಸುತ್ತು ಜೋಡಣಾ ವ್ಯವಸ್ಥೆ ಯಲ್ಲಿರುತ್ತವೆ;ಕಾವಿನೆಲೆಗಳು ತ್ರಿಕೋನಾಕಾರದಲ್ಲಿದ್ದು ಉದುರಿ ಹೋಗುವ ರೀತಿಯವು;ಎಲೆ ತೊಟ್ಟುಗಳು 0.9 ರಿಂದ 1.3 ಸೆಂ.ಮೀ ಉದ್ದವಿದ್ದುಕಾಲುವೆ ಗೆರೆ ಸಮೇತವಾಗಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ; ಎಲೆಪತ್ರಗಳು 8 –13 X 4 - 7 ಸೆಂ.ಮೀ. ಗಾತ್ರ,ಅಂಡವೃತ್ತಾಕಾದಿಂದ ಬುಗುರಿಯಾಕಾರದವರೆಗಿನ ಆಕಾರದಲ್ಲಿದ್ದು, ಕ್ರಮೇಣವಾಗಿ ಕೊಂಚ ಚೂಪಾಗುವ ಅಥವಾ ಚೂಪಾದ ತುದಿ, ಬೆಣೆಯಾಕಾರದ ಅಥವಾಒಳಬಾಗಿದ ತಳವುಳ್ಳ ಬುಡ, ಗರಗಸ ದಂತಿತವಾದ ಅಥವಾ ಸೂಕ್ಷ್ಮ ಗರಗಸ ದಂತಿತವಾದ ಅಂಚು,ತೊಗಲನ್ನೋಲುವ ಮತ್ತು ರೋಮರಹಿತವಾದ ಮೇಲ್ಮೈ ಹೊಂದಿರುತ್ತವೆ;ಎರಡನೇ ದರ್ಜೆಯ 5 ರಿಂದ 7 ಜೋಡಿ ನಾಳಗಳಿದ್ದು, ವಿಶಾಲ ಜಾಲಬಂಧ ವಿನ್ಯಾಸ ಹೊಂದಿದ ಮೂರನೇ ದರ್ಜೆಯ ನಾಳಗಳಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಉದುರಿದ ಎಲೆಗಳ ಅಕ್ಷಾಕಂಕುಳಿನಲ್ಲಿನ ವೃಂತದ ಮೇಲೆ ಗುಚ್ಛಾಕಾದಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು 3 ಕೋಶಗಳ ಸಮೇತವಿರುತ್ತವೆ ;ಬೀಜಗಳು 6, ಹಾಗೂ ಪತ್ರೆ ಸಮೇತವಾಗಿರುತ್ತವೆ.

ಜೀವಪರಿಸ್ಥಿತಿ :

1000 ಮೀ ಎತ್ತರದವರೆಗಿನ ಪ್ರದೇಶಗಳ ವಿರೂಪಗೊಂಡ ನಿತ್ಯಹರಿದ್ವರ್ಣ ಅಥವಾ ಅರೆ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸೀಮಿತ- ಮಧ್ಯ ಮತ್ತು ಮಹಾರಾಷ್ಟ್ರ ಸಹ್ಯಾದ್ರಿ.

ಗ್ರಂಥ ಸೂಚಿ :

Ind.for. 103(6):387.1977; Saldanha, Fl.Karnataka 2:97.1996; Cooke, Fl. Bombay 1:232.1902

Top of the Page