ಮೆಲಿಕೋಪೆ ಲುನು-ಅಂಕೆಂಡ (Gaertn.) Hartley - ರೂಟೇಸಿ

Synonym : ಇಯೋಡಿಯ ಲುನು-ಅಂಕೆಂಡ (Gaertn.) Merr.;ಎವೋಡಿಯ ರಾಕ್ಸ್ಬರ್ಘಿಯಾನ Benth.

Vernacular names : Tamil: Kattushanbagam, KattuchampakamMalayalam: Kaneli, Kattu-shanbagam

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಅಂದಾಜು 10 ಮೀ ಎತ್ತರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು ಬಲಿತಾಗ ಬೆಂಡು ಮಾದರಿಯಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕಂದು ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಚತುಷ್ಕೋನದಿಂದ ಉಪದುಂಡಾಗಿರುವರೆಗಿನ ಆಕಾರ ಹೊಂದಿದ್ದು ಸೂಕ್ಷ್ಮವಾದ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತವಾಗಿದ್ದು,ತ್ರಿಪರ್ಣಿಕೆ ಮಾದರಿಯಲ್ಲಿದ್ದು ಅಭಿಮುಖಿಗಳಾಗಿದ್ದು ಕತ್ತರಿಯಾಕಾರದಲ್ಲಿ ಜೋಡಿವಾಗಿರುತ್ತವೆ;ಅಕ್ಷದಿಂಡು 3.5 ರಿಂದ 11 ಸೆಂ.ಮೀ ಉದ್ದವಿದ್ದು,ಎಳೆಯದಾಗಿದ್ದಾಗ ಸೂಕ್ಷ್ಮವಾದ ಮೃದುತುಪ್ಪಳದಿಂದ ಕೂಡಿರುತ್ತವೆ ಮತ್ತು ಉಬ್ಬಿದ ಬುಡ ಹೊಂದಿರುತ್ತವೆ; ಉಪತೊಟ್ಟುಗಳು 0.6 ರಿಂದ 1.1 ಸೆಂ.ಮೀವರೆಗಿನ ಉದ್ದ ಹೊಂದಿದ್ದು ಕಾಲುವೆ ಗೆರೆ ಸಮೇತವಿದ್ದು ಸ್ವಲ್ಪಮಟ್ಟಿಗೆ ಮೃದು ತುಪ್ಪಳದಿಂದ ಆವೃತವಾಗಿರುತ್ತವೆ;ಕಿರುಪತ್ರಗಳು 7-20 X 3- 8.5 ಸೆಂ.ಮೀ ಗಾತ್ರ(ಸಸಿಗಳು ಸಾಮಾನ್ಯವಾಗಿ ದೊಡ್ಡ ಗಾತ್ರ ಹೊಂದಿರುತ್ತವೆ),ಅಂಡವೃತ್ತದಿಂದ ಬುಗುರಿವರೆಗಿನ ಆಕಾರ,ಕ್ರಮೇಣ ಚೂಪಾಗುವ ತುದಿ, ಅಸಮಪಾರ್ಶ್ವತೆಯುಳ್ಳ ಅಥವಾ ಸ್ವಲ್ಪಮಟ್ಟಿಗೆ ಒಳಬಾಗಿದ ಬುಡ,ನಯವಾದ ಅಂಚು,ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು,ಮಚ್ಚೆ ರೀತಿಯ ರಸಗ್ರಂಥಿಗಳ ಸಮೇತವಿದ್ದು ರೋಮರಹಿತವಾಗಿರುತ್ತವೆ ಮತ್ತು ಮೇಲ್ಭಾಗದಲ್ಲಿ ಹೊಳಪನ್ನು ಹೊಂದಿರುತ್ತವೆ;ಮಧ್ಯನಾಳ ಪತ್ರದ ಕಾಲುವೆ ಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 7-16 ಜೋಡಿಗಳಿದ್ದು ನೇರವಾಗಿ ಅಥವಾ ಕ್ರಮೇಣವಾಗಿ ಬಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುವುದರಿಂದ ವಿಶಾಲ ಜಾಲಬಂಧ ನಾಳ ವಿನ್ಯಾಸದವರೆಗಿನ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಹರಡುವ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾರಂಭಿ ಮಾದರಿಯವು;ಹೂಗಳು ಹಸಿರು ಮಿಶ್ರಿತ ಬಿಳಿ ಬಣ್ಣದವುಗಳಾಗಿದ್ದು ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಸೋತ ಫಲ 4-ಕೋಶಗಳ ಸಮೇತವಿರುತ್ತವೆ;ಮರಿಫಲಗಳಲ್ಲಿ ಒಂದು ಬೀಜವಿರುತ್ತದೆ.

ಜೀವಪರಿಸ್ಥಿತಿ :

1400 ಮೀ.ವರೆಗಿನ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ಆಸ್ಟ್ರೇಲಿಯ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳು.

ಗ್ರಂಥ ಸೂಚಿ :

Hartley, Sandakania 4: 61. 1994; Merr., Philipp. J. Sci. 7: 378. 1913 (Evodia); Gamble, Fl. Madras 1: 148. 1997 (re. ed); Sasidharan, Biodiversity documentation for Kerala- Flowering Plants, part 6: 82. 2004; Cooke, Fl. Bombay 1: 177.1903; Almeida, Fl. Maharashtra 1:206. 1996; Saldanha, Fl. Karnataka 2: 218. 1996.

Top of the Page