ಮೆಮೆಸಿಲಾನ್ ಸುಬ್ರಮಣಿಯೈ Henry - ಮೆಲಾಸ್ಟೊಮಟೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಅಂದಾಜು 4 ಮೀ. ಎತ್ತರದವರೆಗೆ ಬೆಳೆಯುವ ದೊಡ್ಡ ಗಾತ್ರದ ಪೊದೆಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ಚಕ್ಕೆ ರೂಪದಲ್ಲಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದೃಢವಾಗಿದ್ದು 4-ಪ್ರಬಲವಾದ ಕೋನಗಳನ್ನುಹೊಂದಿದ್ದು ಸಂಕುಚಿತವಾದ ರೆಕ್ಕೆಗಳ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯ –ಲ್ಲಿರುತ್ತವೆ;ಎಲೆಗಳು ತೊಟ್ಟುರಹಿತವಾಗಿರುತ್ತವೆ ಅಥವಾ ಉಪತೊಟ್ಟುರಹಿತವಾಗಿರುತ್ತವೆ (ಉಪ ತೊಟ್ಟುಗಳು ಅಂದಾಜು 0.2 ಸೆಂ.ಮೀ. ಉದ್ದವಿರುತ್ತವೆ) ಮತ್ತು ರೋಮರಹಿತ -ವಾಗಿರುತ್ತವೆ;ಪತ್ರಗಳು 20 – 40 X6 1 4 ಸೆಂ.ಮೀ. ಗಾತ್ರ ಹೊಂದಿದ್ದು ಭರ್ಜಿಯ ಆಕಾರದಲ್ಲಿದ್ದು ಹಂತ ಹಂತವಾಗಿ ಕಡಿದಾಗುತ್ತಾ ಹೋಗುವ ಕ್ರಮೇಣ ಚೂಪಾದ ತುದಿ ಮತ್ತು ದುಂಡಾದ ಅಥವಾ ಉಪ-ಹೃದಯಾಕಾರದ ಬುಡ ಹೊಂದಿರುತ್ತವೆ;ಅಂಚು ನಯವಾಗಿರುತ್ತದೆ; ಪತ್ರಗಳು ದಪ್ಪನೆಯ ತೊಗಲನ್ನೋಲುವ ಮಾದರಿಯಲ್ಲಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಕಾಲುವೆ ಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 26 ಜೋಡಿಗಳಿದ್ದು ದೃಢವಾಗಿರುತ್ತವೆ ಮತ್ತು ಸಮಾಂತರ -ದಲ್ಲಿದ್ದು ಅಂತರ ಅಂಚಿನ ನಾಳಗಳನ್ನು ಸೇರಿಕೊಳ್ಳುತ್ತವೆ ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲ ಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ, ವಿರಳವಾದ ಹಾಗೂ ವೃಂತವುಳ್ಳ ಪೀಠಛತ್ರ ಮಾದರಿಯ ಮಧ್ಯಾರಂಭಿ ಮಾದರಿಯವು;ವೃಂತಗಳು 6ರಿಂದ 12 ಸೆಂ.ಮೀ.ಉದ್ದವಿದ್ದು ದೃಢವಾಗಿದ್ದು 4-ಕೋನಯುಕ್ತವಾಗಿರುತ್ತವೆ;ಹೂಗಳು ಅನೇಕವಿದ್ದು ನೀಲಿ ಮಿಶ್ರಿತ ನೇರಳೆಬಣ್ಣ ಹೊಂದಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಗೋಳಾಕಾರದಲ್ಲಿದ್ದು 0.8 ರಿಂದ 1.2 ಸೆಂ.ಮೀ. ವ್ಯಾಸ ಹೊಂದಿರುತ್ತವೆ ಮತ್ತು ತುದಿಯಲ್ಲಿ ಪುಷ್ಪಪಾತ್ರೆಯ ವಿಸ್ತ್ರುತ ಭಾಗ ಸಮೇತವಿರುತ್ತವೆ;ಕಾಯಿಗಳು ಮಾಗಿದಾಗ ಕೆನ್ನೀಲಿ ಬಣ್ಣದಲ್ಲಿದ್ದು ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

700 ಮತ್ತು 1100 ಮೀ. ನಡುವಿನ ಮಧ್ಯಮ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಗೆ ಬೆಳೆಯುವ ಈ ಪ್ರಭೇದ ಅಪರೂಪವಾಗಿ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಗಸ್ತ್ಯಮಲೈನ ಕಣ್ಣಿಕಟ್ಟಿ ಮತ್ತು ವಲೈಯಾರ್ ಪ್ರದೇಶಗಳಲ್ಲಿ ಸ್ಥಳೀಯವಾಗಿ ವ್ಯಾಪಿಸಿದೆ.

ಸ್ಥಿತಿ :

ಉಳಿವಿನ ಆತಂಕಕಾರಿ ಸ್ಥಿತಿ (IUCN, 2000).

ಗ್ರಂಥ ಸೂಚಿ :

J. Bombay Nat. Hist. Soc. 77: 492. 1980; Sasidharan, Biodiversity documentation for Kerala- Flowering Plants, part 6: 182. 2004.

Top of the Page