ಮೆಮೆಸಿಲಾನ್ ವೈಟಿಯೈ Thw. - ಮೆಲಾಸ್ಟೊಮಟೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಅಂದಾಜು 4 ಮೀ. ಎತ್ತರದ ಪೊದೆಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಸಂಕುಚಿ 4-ಕೋನಗಳನ್ನು ಹೊಂದಿದ್ದು ರೆಕ್ಕೆಗಳ ಸಮೇತವಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯ –ಲ್ಲಿರುತ್ತವೆ ಮತ್ತು ರೋಮರಹಿತವಾದ ಉಪತೊಟ್ಟುಗಳನ್ನು ಹೊಂದಿರುತ್ತವೆ (0.2 ಸೆಂ.ಮೀ. ಉದ್ದ); ಪತ್ರಗಳು 6.5-11 X 2.5 -5.7 ಸೆಂ.ಮೀ. ಗಾತ್ರ ಹೊಂದಿದ್ದು ಅಂಡದಿಂದ ಅಂಡ-ಅಂಡವೃತ್ತವರೆಗಿನ ಆಕಾರದಲ್ಲಿದ್ದು ಮೊಂಡಾಗ್ರವುಳ್ಳ ಚೂಪಾದ ತುದಿ ಮತ್ತು ದುಂಡಾದದುದರಿಂದ ಉಪಹೃದಯದವರೆಗಿನ ಆಕಾರವುಳ್ಳ ಬುಡವನ್ನು ಹೊಂದಿರುತ್ತವೆ; ಅಂಚು ನಯವಾಗಿರುತ್ತದೆ; ಪತ್ರಗಳು ತೊಗಲನ್ನೋಲುವ ಮಾದರಿಯಲ್ಲಿರುತ್ತವೆ; ಮಧ್ಯನಾಳ ಕಾಲುವೆ ಗೆರೆ ಸಮೇತವಿರುತ್ತದೆ; ಎರಡನೇ ಮತ್ತು ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಹೂಗಳೂ ನೀಲಿ ಬಣ್ಣದವುಗಳಾಗಿದ್ದು ಗುಚ್ಛಗಳಲ್ಲಿದ್ದು ಒಂಟಿಯಾಗಿ ಅಥವಾ ತೀರಾ ಚಿಕ್ಕದಾದ ವೃಂತವುಳ್ಳ ಸಾಮಾನ್ಯವಾಗಿ ಪಾರ್ಶ್ವದ ಮೇಲಿನ ಗುಬುಟುಗಳ ಮೇಲಿನ ಮಧ್ಯಾರಂಭಿ ಪುಷ್ಪಮಂಜರಿಗಳಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಗೋಳಾಕಾರದಲ್ಲಿದ್ದು ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

700 ಮೀ. ಎತ್ತರದವರೆಗಿನ ಪ್ರದೇಶಗಳಲ್ಲಿನ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳ ಒಳಗೆ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟ ಮತ್ತು ಶ್ರೀಲಂಕಾ:ಪಶ್ಚಿಮ ಘಟ್ಟದ ಮಧ್ಯ ಸಹ್ಯಾದ್ರಿಯಲ್ಲಿ ಈ ಸಸ್ಯ ಬೆಳೆಯುತ್ತದೆ.

ಗ್ರಂಥ ಸೂಚಿ :

Enum. Pl. Zeyl.113.1859;Cooke, Fl. Bombay 1:503.1902.

Top of the Page