ಮೆಸುವ ಫೆರ್ರಿಯ L. - ಕ್ಲೂಸಿಯೇಸಿ

Synonym : ಮೆಸುವ ಸ್ಪೀಷಿಯೋಸ choisy; ಮೆಸುವ ಪೆಡಂಕ್ಯುಲೇಟ Wt.; ಮೆಸುವ ಕೋರೋಮಂಡಲೀನ Wt.

ಕನ್ನಡದ ಪ್ರಾದೇಶಿಕ ಹೆಸರು : ಅತ್ತವರ, ನಾಗಸಂಪಿಗೆ,ನಾಗಕೇಸರ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 35 ಮೀ ಎತ್ತರದವರೆಗೆ ಬೆಳೆಯುವ ಆನಿಕೆಗಳುಳ್ಳ ದೊಡ್ಡಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ ಹೊಂದಿದ್ದು ಅನಿಯತವಾಗಿ ಸುಲಿದ ದೊಡ್ಡ ಗಾತ್ರದ ಚಕ್ಕೆಗಳನ್ನು ಹೊಂದಿರುತ್ತದೆ; ಕಚ್ಚು ಮಾಡಿದ ಜಾಗ ಕೆಂಪು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು, ತೆಳುವಾಗಿದ್ದು ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಸಸ್ಯಕ್ಷೀರ ಕೊಳಕು ಬಿಳಿ ಬಣ್ಣ ಹೊಂದಿರುತ್ತದೆ .
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆ-ಯಲ್ಲಿರುತ್ತವೆ; ಎಲೆತೊಟ್ಟುಗಳು 05 – 1.2 ಸೆಂ.ಮೀ, ಉದ್ದಹೊಂದಿದ್ದು ಅಡ್ಡ ಸೀಳಿದಾಗ ಸಪಾಟ ಪೀನಮಧ್ಯ ಆಕಾರವನ್ನು ಹೊಂದಿರುತ್ತವೆ; ಎಲೆಪತ್ರಗಳು 7.5 ರಿಂದ 14 ಸೆಂ. ಮೀ ಉದ್ದ,1.5 ರಿಂದ 3.5 ಸೆಂ ಮೀ ಅಗಲವಿದ್ದು, ಸಂಕುಚಿತವಾದ ಅಂಡಾಕಾರದಿಂದ ಸಂಕುಚಿತವಾದ ಭರ್ಜಿಯ ಆಕಾರಹೊಂದಿದ್ದು, ಇಕ್ಕಟ್ಟಾದ, ಕ್ರಮೇಣ ಚೂಪಾಗುವ ತುದಿ, ಚೂಪಾದ ಬುಡ, ನಯವಾದ ಅಂಚನ್ನು ಹೊಂದಿದ್ದು, ಮಾಸಲು ಬೂದು ಹಸಿರು ಬಣ್ಣವುಳ್ಳ ತಳಭಾಗ ಹೊಂದಿರುತ್ತವೆ; ಎರಡನೇ ದರ್ಜೆಯ ನಾಳಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ತೆಳುವಾಗಿದ್ದು, ತೀರಾ ಸನಿಹವಾದ ಸಮಾಂತರದಲ್ಲಿದ್ದು ಮಧ್ಯನಾಳಕ್ಕೆ ಲಂಬವಾಗಿರುತ್ತವೆ ಕೆಲವು ವೇಳೆ ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಹೂಗಳು ದ್ವಿಲಿಂಗಿಗಳು,ಒಂಟಿಯಾಗಿ ಅಥವಾ ಜೋಡಿಯಾಗಿ ಅಕ್ಷಾಕಂಕುಳಿನಲ್ಲಿರುತ್ತವೆ; ಕೇಸರಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಕಿತ್ತಳೆ ಬಣ್ಣದಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಅಂಡಾಕಾರದಿಂದ ಗೋಳಾಕಾರದಲ್ಲಿದ್ದು, ಅಗ್ರ ಸೂಕ್ಷ್ಮವಾದ ಮೊನಚು ಮುಳ್ಳನ್ನು ಹೊಂದಿರುತ್ತವೆ ಹಾಗೂ ಉಬ್ಬು ಸಾಲಿನ ಗುರುತುಗಳನ್ನು ಹೊಂದಿರುತ್ತವೆ ಹಾಗೂ ಒಂದರಿಂದ ನಾಲ್ಕು ಬೀಜಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1500 ಮೀ ಎತ್ತರದವರೆಗಿನ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳನಲ್ಲಿನ ಝರಿಗಳ ಬದಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಶಿಯ; ಪಶ್ಚಿಮ ಘಟ್ಟಗಳ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಸ್ಥಿತಿ :

ಈ ಪ್ರಭೇದವನ್ನು ಇಲ್ಲಿ ಸಂಕೀರ್ಣ ಪ್ರಭೇದವಾಗಿ ಪರಿಗಣಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರಭೇದವನ್ನು ಹಲವಾರು ಮಾದರಿಗಳಾಗಿ ಅಥವಾ ಇನ್ನೂ ಹೆಚ್ಚಿನ ಸಂಖ್ಯೆಯ ಪ್ರಭೇದಗಳಾಗಿ ವಿಭಜಿಸಲಾಗಿದೆ.

ಗ್ರಂಥ ಸೂಚಿ :

Hooker, Fl. Brit. Ind. 1: 277. 1874; Gamble, Fl. Madras 1: 77. 1997 (re. ed); Sasidharan, Biodiversity documentation for Kerala- Flowering Plants, part 6: 42. 2004; Saldanha, Fl. Karnataka 1: 210. 1996; Cook, Fl. Bombay 1: 81. 1902.

Top of the Page