ಮೇಟಿನಸ್ ಲ್ಯಾಟಿಫೋಲಿಯ Wt. ex Lawson - ಸೆಲಾಸ್ಟ್ರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5ಮೀ. ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಕಪ್ಪು- ನೇರಳೆ ಬಣ್ಣ ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖದಿಂದ ಉಪ ಅಭಿಮುಖ ಜೋಡಣಾ ವ್ಯವಸ್ಥೆಯಲ್ಲಿರುತ್ತವೆ; ಎಲೆತೊಟ್ಟುಗಳು0.9 ರಿಂದ1.3 ಸೆಂ.ಮೀ ಉದ್ದವಿದ್ದುಕಾಲುವೆ ಗೆರೆ ಸಮೇತವಾಗಿರುತ್ತವೆ ; ಎಲೆಪತ್ರಗಳು 7 –15 X2.5 -6.5 ಸೆಂ.ಮೀ ಗಾತ್ರವಿದ್ದು ,ಅಂಡವೃತ್ತ ಅಥವಾ ಚತುರಸ್ರ-ಭರ್ಜಿ ಆಕಾರದಲ್ಲಿದ್ದು, ,ಕ್ರಮೇಣವಾಗಿ ಚೂಪಾಗುವ ತುದಿ, ಒಳಬಾಗಿದ ತಳವುಳ್ಳ ಬುಡ, ನಯವಾದ ಹಾಗೂ ಹಿಂಚಾಚಿದ ಅಂಚು, ಕಾಗದವನ್ನೋಲುವ ಮತ್ತು ರೋಮರಹಿತವಾದ ಮೇಲ್ಮೈ ಹೊಂದಿದ್ದು, ಮಸುಕಾದ ಬಣ್ಣ ಹೊಂದಿದ ತಳಭಾಗವನ್ನು ಹೊಂದಿರುತ್ತವೆ;ಎರಡನೇ ದರ್ಜೆಯ ನಾಳಗಳು ಅಂದಾಜು 8 ಜೋಡಿಗಳಿದ್ದು ಅಪ್ರಮುಖವಾಗಿರುತ್ತವೆ, ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿದ್ದು ತೊಟ್ಟುರಹಿತ ಗುಚ್ಛಗಳಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ಅಂಡವೃತ್ತಾಕಾರದಲ್ಲಿದ್ದು, 1.5 ಸೆಂ.ಮೀ ಉದ್ದವಿದ್ದು ಒಂದು ಬೀಜವನ್ನೊಳ -ಗೊಂಡಿರುತ್ತವೆ.

ಜೀವಪರಿಸ್ಥಿತಿ :

ಮಧ್ಯಮ ಎತ್ತರದ (700 ರಿಂದ 1500 ಮೀ) ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸೀಮಿತವಾದ ಈ ಸಸ್ಯ ಮಧ್ಯ ಸಹ್ಯಾದ್ರಿಯ ಪಾಲಕ್ಕಾಡು ಬೆಟ್ಟ ಶ್ರೇಣಿ,ದಕ್ಷಿಣ ಮಲೆನಾಡು ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Hooker, Fl.Brit. Ind.1:613 Gamble, Fl.Madras1:206.1997(re.ed.); Sasidharan, Biodiversity documentation for Kerala-Flowering Plants, part 6:97.2004;Cooke, Fl. Bombay 1:229.1902

Top of the Page