ಮೈಕ್ರೋಟ್ರೋಪಿಸ್ ಸ್ಟಾಕ್ಸಿಯೈ Gamble - ಸೆಲಾಸ್ಟ್ರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ ಎತ್ತರಕ್ಕೆ ಬೆಳೆಯುವ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಕೆನ್ನೀಲಿ ಮಿಶ್ರಿತ ಕಂದು ಬಣ್ಣ ಹೊಂದಿದ್ದು, ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಮಾದರಿಯಲ್ಲಿ ಜೋಡಿತವಾಗಿದ್ದು ಅಂದಾಜು 0.3 ರಿಂದ 0.7 ಸೆಂ.ಮೀ ಉದ್ದದ ತೊಟ್ಟು ಹೊಂದಿರುತ್ತವೆ;ಎಲೆಪತ್ರಗಳು 7.5 – 15 X 2.5 - 6.5 ಸೆಂ.ಮೀ ಗಾತ್ರವಿದ್ದು ಅಂಡವೃತ್ತದಿಂದ ಬುಗುರಿ-ಭರ್ಜಿಸಮ್ಮಿಶ್ರಾಕಾರ ಹೊಂದಿರುತ್ತವೆ. ಎಲೆ ತುದಿ ಚೂಪಾಗಿದ್ದು, ಎಲೆಯ ಬುಡ ಚೂಪಾಗಿವುದರಿಂದ ಬೆಣೆಯಾಕಾರದವರೆಗಿನ ಆಕಾರದಲ್ಲಿರುತ್ತದೆ, ಎಲೆಯ ಅಂಚು ಹಿಂಚಾಚಿಕೊಂಡಿರುತ್ತದೆ,, ಎಲೆಯ ಮೇಲ್ಮೈ ತೊಗಲವನ್ನೋಲುವ ಮಾದರಿಯದು;ಮಧ್ಯನಾಳ ಎಲೆಯ ಮೇಲ್ಭಾಗದಲ್ಲಿ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು ಎಲೆಗಳ ತಳಭಾಗದಲ್ಲಿ ಪ್ರಮುಖವಾಗಿ ಕಾಣುವಂತಿದ್ದು ಸಂಖ್ಯೆಯಲ್ಲಿ 11 ಜೋಡಿಗಳಿರುತ್ತವೆ ಹಾಗೂ ಸಮಾಂತರವಾಗಿದ್ದು ಎಲೆಯಂಚಿನ ಬಳಿ ಕುಣಿಕೆಗೊಂಡಿರುತ್ತವೆ; ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಯ ಅಕ್ಷದ ದಿಕ್ಕಿಗಿರುತ್ತವೆ
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿದ್ದು ತೊಟ್ಟುರಹಿತ ಗುಚ್ಛಗಳಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ಚತುರಸ್ರಾಕಾರದಲ್ಲಿದ್ದು, 1.5 ರಿಂದ 2 ಸೆಂ.ಮೀ ಉದ್ದವಿದ್ದು ಒಂದು ಬೀಜವನ್ನೊಳ ಗೊಂಡಿರುತ್ತದೆ.

ಜೀವಪರಿಸ್ಥಿತಿ :

ಕಡಿಮೆ ಮತ್ತು ಮಧ್ಯಮ ಎತ್ತರದ (300 ರಿಂದ 1500 ಮೀ) ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Kew Bull.1916:132; Gamble, Fl. Madras1:206.1997(re.ed.); Sasidharan, Biodiversity documentation for Kerala-Flowering Plants, part 6:97.2004.

Top of the Page