ಮಿಟ್ರಗೈನ ಪಾರ್ವಿಫೋಲಿಯ (Roxb.) Korth. - ರೂಬಿಯೇಸಿ

:

Vernacular names : Tamil: ವಿಂಬ,ಸಿರಕಡಂಬು,ಕದಂಬ,ನೀರ್ಕದಂಬು,ಪೂಚ್ಚಕದಂಬು,ರೋಸ್ ಕದಂಬು, ವೀಂಬುMalayalam: ಹೆದು ಮರ,ನಾಯಿ ಕದಂಬ,ನೀರ್ ಕದಂಬ,ಸಣ್ಣಕದಂಬಕನ್ನಡದ ಪ್ರಾದೇಶಿಕ ಹೆಸರು: ಕೈಮ್

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆಗಿನ ಎಲೆಉದುರು ಮಾದರಿಯ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ನಯ ಹಾಗೂ ತೆಳುವಾಗಿದ್ದು ಬಲಿತಾಗ ಅನಿಯತವಾದ ಚಕ್ಕೆ ರೂಪದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕೋನಯುಕ್ತದಿಂದ ಉಪದುಂಡಾದ ಆಕಾರದಲ್ಲಿದ್ದು ರೋಮರಹಿತವಾಗಿರುತ್ತವೆ
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಎಲೆ ರೂಪಿಗಳಾಗಿದ್ದು ಹಡಗಿನಾಕಾರದ ಹಿಂಬದಿಯನ್ನು ಹೊಂದಿರುತ್ತವೆ ಮತ್ತು ತೊಟ್ಟುಗಳ ನಡುವೆ ಇರುತ್ತವೆ ಮತ್ತು ಉದರಿದಾಗ ಗುರುತನ್ನು ಉಳಿಸುತ್ತವೆ;ತೊಟ್ಟು 1 ರಿಂದ 4 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಕಾಲುವೆ ಗೆರೆ ಆಕಾರ ಹೊಂದಿದ್ದು, ರೋಮರಹಿತವಾಗಿರುತ್ತವೆ;ಪತ್ರಗಳು 16 X 10 ಸೆಂ.ಮೀ. ಗಾತ್ರ ಹೊಂದಿದ್ದು ಅಂಡವೃತ್ತ -ಬುಗುರಿಯ ಆಕಾರ ಹೊಂದಿದ್ದು,ಮೊಂಡಾಗ್ರವುಳ್ಳ ಥಟ್ಟನೆ ಕ್ರಮೇಣ ಚೂಪಾಗುವ,ಮಾದರಿಯ ತುದಿ, ಚೂಪಾದುದರಿಂದ ಒಳಬಾಗಿದ,ಅಥವಾ ಉಪ-ಹೃದಯಾಕಾರದವರೆಗಿನ ಮಾದರಿಯ ಬುಡ, ನಯವಾದ ಅಂಚು,ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು 6 ರಿಂದ10 ಜೋಡಿಗಳಿದ್ದು ಅಕ್ಷಸ್ಥ ಸಹಜೀವಿ ಗೂಡುಗಳ ಸಮೇತವಿರುತ್ತವೆ;ಮೂರನೇ ದರ್ಜೆಯ ನಾಳಗಳು ಹೆಚ್ಚಿನ ಅಂತರ ಹೊಂದಿದ್ದು ಓರೆಯಾಗಿ ಎಲೆಯ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಗೋಳಾಕಾರ ಮಂಜರಿ ಮಾದರಿಯವು;ಹೂಗಳು ತೊಟ್ಟುರಹಿತವಾಗಿದ್ದು ಕೆನೆ-ಬಿಳಿ ಬಣ್ಣದಲ್ಲಿರುತ್ತವೆ;ಪುಷ್ಪಪಾತ್ರೆಯ ಎಸಳುಗಳು ಸಣ್ಣ ಗಾತ್ರದವು.
ಕಾಯಿ / ಬೀಜ : ಸಂಪುಟ ಫಲಗಳು ದುಂಡನೆಯ ಗೋಳಾಕಾರದಲ್ಲಿ ಜೋಡನೆಯಾಗಿರುತ್ತವೆ,ಪ್ರತಿಯೊಂದು ಸಂಪುಟ ಫಲದಲ್ಲಿ 2 ಮರಿ ಸೋತಫಲಗಳಿರುತ್ತವೆ;ಬೀಜಗಳ ಸಂಖ್ಯೆ ಹಲವಾರು ಇದ್ದು ರೆಕ್ಕೆಗಳ ಸಮೇತವಿರುತ್ತವೆ.

ಜೀವಪರಿಸ್ಥಿತಿ :

900 ಮೀ. ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ಎಲೆಯುದುರು ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ; ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Observ. Naucl. Ind. 19. 1839; Gamble, Fl. Madras 2: 585. 1993 (re. ed); Sasidharan, Biodiversity documentation for Kerala- Flowering Plants, part 6: 222. 2004; Cook, Fl. Bombay 1: 581.1903; Almeida, Fl. Maharashtra 3:29. 2001.

Top of the Page