ಮಿಟ್ರಗೈನ ಟ್ಯುಬ್ಯುಲೋಸ (Arn.) Hav. - ರೂಬಿಯೇಸಿ

:

Vernacular names : Tamil: ಮಲಂತುಂಬ,ನಾಯ್ಕಡಂಬು

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗಿನ ಎಲೆಉದುರು ಮಾದರಿಯ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕಾಂಡದ ಲಂಬ ರೇಖೆಗೆ ಸಮಕೋನದಲ್ಲಿರುತ್ತವೆ;ಕಿರುಕೊಂಬೆಗಳು ಚತುಷ್ಕೋನದ ಆಕಾರದಲ್ಲಿದ್ದು ರೋಮರಹಿತವಾಗಿರುತ್ತವೆ
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ದೊಡ್ಡ ಗಾತ್ರದಲ್ಲಿದ್ದು,ಅಂಡಾಕಾರ ಹೊಂದಿದ್ದು ಹಡಗಿನಾಕಾರದ ಹಿಂಬದಿಯನ್ನು ಹೊಂದಿರುತ್ತವೆ ಹಾಗೂ ತೊಟ್ಟುಗಳ ನಡುವೆ ಇರುತ್ತವೆ ಮತ್ತು ಉದರಿದಾಗ ಗುರುತನ್ನು ಉಳಿಸುತ್ತವೆ;ತೊಟ್ಟು 1 ರಿಂದ 3 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿದ್ದು ರೋಮರಹಿತವಾಗಿರುತ್ತವೆ;ಪತ್ರಗಳು 10 -20 X 4.5 – 10 ಸೆಂ.ಮೀ. ಗಾತ್ರ ಹೊಂದಿದ್ದು ಅಂಡ,ಅಂಡವೃತ್ತ -ಅಂಡದವರೆಗಿನ ಆಕಾರ ಹೊಂದಿದ್ದು,ಕ್ರಮೇಣ ಚೂಪಾಗುವ, ಅಪರೂಪವಾಗಿ ಚೂಪಾದ ಮಾದರಿಯ ತುದಿ,ಛಿನ್ನಾಗ್ರ ಅಥವಾ ಚೂಪಲ್ಲದ ಮಾದರಿವರೆಗಿನ ಬುಡ, ನಯವಾದ ಅಂಚು,ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ತಳಭಾಗದಲ್ಲಿ ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು 12 ಜೋಡಿಗಳವರೆಗಿನ ಸಂಖ್ಯೆಯಲ್ಲಿರುತ್ತವೆ; ಮೂರನೇ ದರ್ಜೆಯ ನಾಳಗಳು ಹೆಚ್ಚಿನ ಅಂತರ ಹೊಂದಿದ್ದು ಓರೆಯಾಗಿ ಎಲೆಯ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಗೋಳಾಕಾರ ಮಂಜರಿ ಮಾದರಿಯವು;ಹೂಗಳು ತೊಟ್ಟುರಹಿತವಾಗಿದ್ದು ಕೆನ್ನೀಲಿ ಛಾಯೆಯುಳ್ಳ ಹಳದಿ ಬಣ್ಣದಲ್ಲಿರುತ್ತವೆ; ಪುಷ್ಪಪಾತ್ರೆಯ ಎಸಳುಗಳು ದೀರ್ಘೀಕರಣಗೊಂಡಿರುತ್ತವೆ.
ಕಾಯಿ / ಬೀಜ : ಸಂಪುಟ ಫಲಗಳು ದುಂಡನೆಯ ಗೋಳಾಕಾರ ರೀತಿಯಲ್ಲಿ ಜೋಡನೆಯಾಗಿರುತ್ತವೆ, ಪ್ರತಿಯೊಂದು ಸಂಪುಟ ಫಲದಲ್ಲಿ 2 ಮರಿಸೋತ ಫಲಗಳಿರುತ್ತವೆ;ಬೀಜಗಳ ಸಂಖ್ಯೆ ಹಲವಾರು ಇದ್ದು ರೆಕ್ಕೆಗಳ ಸಮೇತವಿರುತ್ತವೆ.

ಜೀವಪರಿಸ್ಥಿತಿ :

900 ಮೀ. ಎತ್ತರದ ಪ್ರದೇಶಗಳ ಭಗ್ನಗೊಂಡ ಅರೆನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ;ಪಶ್ಚಿಮ ಘಟ್ಟದ ಮಲಬಾರು ಪ್ರದೇಶಗಲು.

ಗ್ರಂಥ ಸೂಚಿ :

Observ. Naucl. Ind. 19. 1839; Gamble, Fl. Madras 2: 585. 1993 (re. ed); Sasidharan, Biodiversity documentation for Kerala- Flowering Plants, part 6: 222. 2004;

Top of the Page