ಮುರ್ರಯ ಪ್ಯಾನಿಕ್ಯುಲೇಟ (L.) Jack. - ರೂಟೇಸಿ

ಪರ್ಯಾಯ ನಾಮ : ಮುರ್ರಯ ಎಕ್ಸಾಟಿಕ L.

Vernacular names : Tamil: ಕಾಟ್ಟುಕರಿವೆಪ್ಪು,ಮರಮುಲ್ಲMalayalam: ಅಂಗಾರಕನ ಗಿಡ,ಕಾಡು ಕರಿ ಬೇವು,ಪಂಢರಿ ಗಿಡಕನ್ನಡದ ಪ್ರಾದೇಶಿಕ ಹೆಸರು: ದೆ ಚೈನ ಬಾಕ್ಸ್

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ ಸಣ್ಣಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು ಸೀಳಿಕಾ ಮಾದರಿಯಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ ಮತ್ತು ಬಿಳಿ ಬಣ್ಣದ ಛಾಯೆ ಹೊಂದಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತವಾಗಿದ್ದು, ಸಾಮಾನ್ಯವಾಗಿ ಅಸಮ ಸಂಖ್ಯೆ ಏಕಗರಿ ರೂಪಿಗಳಾಗಿರುತ್ತವೆ, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ರೋಮರಹಿತವಾಗಿರುತ್ತವೆ;ಅಕ್ಷದಿಂಡು ದುಂಡಾಗಿದ್ದು ರೊಮರಹಿತವಾಗಿರುತ್ತವೆ; ಉಪತೊಟ್ಟುಗಳು 0.4 ಸೆಂ.ಮೀವರೆಗಿನ ಉದ್ದ ಹೊಂದಿರುತ್ತವೆ;ಕಿರುಪತ್ರಗಳು 5 ಇದ್ದು ಪರ್ಯಾಯ ಮಾದರಿಯಲ್ಲಿ ಜೋಡಿತಗೊಂಡಿರುತ್ತವೆ, 3.5 - 7.5 X 2 – 3 ಸೆಂ.ಮೀ. ಗಾತ್ರ,ಅಂಡವೃತ್ತದ ಆಕಾರ,ಅಗಲವಾದ ಹಾಗೂ ದುಂಡನೆಯ ತುದಿಯಲ್ಲಿ ತಗ್ಗುಳ್ಳ ಅಗ್ರವನ್ನುಳ್ಳ ಕ್ರಮೇಣ ಚೂಪಾಗುವ ತುದಿ, ಅಸಮಪಾರ್ಶ್ವತೆಯುಳ್ಳ ಬುಡ,ನಯವಾದ ಅಥವಾ ಸೂಕ್ಷ್ಮ ದುಂಡೇಣಿನ ದಂತಗಳ ಸಮೇತವಿರುವ ಅಂಚು,ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು,ಕಡು ಹಸಿರು ಬಣ್ಣದಲ್ಲಿದ್ದು,ಮಚ್ಚೆ ರೀತಿಯ ರಸಗ್ರಂಥಿಗಳ ಸಮೇತವಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತವೆ;ಎರಡನೇ ದರ್ಜೆಯ ನಾಳಗಳು 6-10 ಜೋಡಿಗಳಿದ್ದು ಅಂಚಿನ ಬಳಿ ಕುಣಿಕೆಗೊಂಡಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುವುದರಿಂದ ವಿಶಾಲ ಜಾಲಬಂಧ ನಾಳ ವಿನ್ಯಾಸದವರೆಗಿನ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ, ಕೆಲವು ಹೂಗಳುಳ್ಳ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾಭಿಸರ ಮಾದರಿಯವು;ಹೂಗಳು ಬಿಳಿ ಬಣ್ಣದವುಗಳಾಗಿದ್ದು, ಉಪತೊಟ್ಟುಗಳನ್ನು ಹೊಂದಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು ಅಂಡವೃತ್ತದ ಆಕಾರದಲ್ಲಿದ್ದು,,ಕಳಿತಾಗ ಕೆಂಪು ಬಣ್ಣ ಹೊಂದಿರುತ್ತವೆ;ಬೀಜಗಳ ಸಂಖ್ಯೆ 1 ರಿಂದ 2.

ಜೀವಪರಿಸ್ಥಿತಿ :

1400 ಮೀ.ವರೆಗಿನ ಎತ್ತರದ ಪ್ರದೇಶಗಳ ಭಗ್ನಗೊಂಡ ನಿತ್ಯ ಹರಿದ್ವರ್ಣದಿಂದ ಅರೆನಿತ್ಯ ಹರಿದ್ವರ್ಣ ರೀತಿಯ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ಆಸ್ಟ್ರೇಲಿಯ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳು.

ಗ್ರಂಥ ಸೂಚಿ :

Jack., Malay. Misc. 1: 31. 1820; Gamble, Fl. Madras 1: 155. 1997 (re. ed); Sasidharan, Biodiversity documentation for Kerala- Flowering Plants, part 6: 82. 2004; Cooke, Fl. Bombay 1: 182.1903; Almeida, Fl. Maharashtra 1:210. 1996; Saldanha, Fl. Karnataka 2: 221. 1996.

Top of the Page