ನಾರಿಂಗಿ ಕ್ರೆನ್ಯುಲೇಟ (Roxb.) Nicols. - ರೂಟೇಸಿ

ಪರ್ಯಾಯ ನಾಮ : ಲಿಮೋನಿಯ ಕ್ರೆನ್ಯುಲೇಟ Roxb.

Vernacular names : Tamil: ಕಾಟ್ಟುನರಕಂ,ಮಲನರಕಂ,ನರಿನರಕಂ,ಚೆರಿಯಕುಟ್ಟುನಾರೆಗಂMalayalam: ಅರುಣ ಮುಳ್ಳು,ಕಾಡು ನಿಂಬೆ,ನಾಯಿ ಬೇಲ,ನಾಯಿ ನಿಂಬೆ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ಕವಲುಗೊಂಡ ದೊಡ್ಡ ಮುಳ್ಳುಗಳ ಸಮೇತವಿರುತ್ತದೆ;ತೊಗಟೆ ದಟ್ಟ ಬೂದು ಬಣ್ಣ ಹೊಂದಿದ್ದು, ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಹಳದಿ ಛಾಯೆ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಕಾರ ಹೊಂದಿದ್ದು ರೋಮರಹಿತವಾಗಿರುತ್ತವೆ,ದೊಡ್ಡ ಮುಳ್ಳುಗಳ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ ಹಾಗೂ ಅಸಮಗರಿ ರೂಪಿ ಮಾದರಿಯಲ್ಲಿದ್ದು 15 ಸೆಂ.ಮೀ. ವರೆಗಿನ ಉದ್ದವಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಅಕ್ಷದಿಂಡು ಬುಗುರಿ-ಭರ್ಜಿಯಾಕಾರದ ರೆಕ್ಕೆಗಳ ಸಮೇತವಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ; ಉಪಪತ್ರಗಳು 5 ರಿಂದ 7 ಇದ್ದು ಅಭಿಮುಖಿಗಳಾಗಿದ್ದು,ತೊಟ್ಟುರಹಿತವಾಗಿರುತ್ತವೆ, ರೋಮರಹಿತವಾಗಿರುತ್ತವೆ ಮತ್ತು 2 -4.5 X 1 -1.5 ಸೆಂ.ಮೀ ಗಾತ್ರ, ಅಂಡವೃತ್ತದಿಂದ ಬುಗುರಿಯವರೆಗಿನ ಆಕಾರ, ದೀರ್ಘ ಕಚ್ಚುಳ್ಳ ಅಗ್ರದಿಂದ ಕೂಡಿದ ಅಥವಾ ಚೂಪಲ್ಲದ ರೀತಿಯ ತುದಿ,ಚೂಪಾದ ಬುಡ, ಸೂಕ್ಷ್ಮವಾದ ಗರಗಸ ದಂತಿತವಾದ ಮಾದರಿಯ ತುದಿ, ಚೂಪಾದ ಬುಡ,ಸೂಕ್ಷ್ಮ ದುಂಡೇಣುಗಳನ್ನೊಳಗೊಂಡ ಅಥವಾ ಅನಿಯತ ಗರಗಸ ದಂತಿತವಾದ ಅಂಚು, ಮಚ್ಚೆ ರೀತಿಯ ರಸಗ್ರಂಥಿಗಳ ಸಮೇತವಿದ್ದು ರೋಮರಹಿತ -ವಾಗಿರುತ್ತವೆ; ಎರಡನೇ ದರ್ಜೆಯ ನಾಳಗಳು ಅಂದಾಜು 7 ರಿಂದ 10 ಜೋಡಿಗಳಿದ್ದು ಅಂಚಿನ ಬಳಿ ಕುಣಿಕೆಗೊಂಡಿರುತ್ತವೆ;ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಗಳ ಅಕ್ಷದ ಕಡೆಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಉಪ-ಪೀಠಛತ್ರ ಮಾದರಿಯವು; ತೊಟ್ಟು 1 ಸೆಂ.ಮೀ. ಉದ್ದವಿರುತ್ತದೆ.
ಕಾಯಿ / ಬೀಜ : ಬೆರ್ರಿ ಗೋಳಾಕಾರದಲ್ಲಿರುತ್ತದೆ;ಬೀಜಗಳ ಸಂಖ್ಯೆ 1 ರಿಂದ 4.

ಜೀವಪರಿಸ್ಥಿತಿ :

1200 ಮೀ. ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ;ನೈರುತ್ಯ ಪಶ್ಚಿಮದಲ್ಲಿನ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

Sald. & Nicols., Fl. Hassan Dist. 387. 1976; Gamble, Fl. Madras 1: 157. 1997 (re. ed); Sasidharan, Biodiversity documentation for Kerala- Flowering Plants, part 6: 82. 2004; Saldanha, Fl. Karnataka 2: 222. 1996.

Top of the Page