ಓಲಿಯ ಪ್ಯಾನಿಕ್ಯುಲೇಟ R.Br. - ಓಲಿಯೇಸಿ

ಪರ್ಯಾಯ ನಾಮ : ಓಲಿಯ ಗ್ಲಾಂಡ್ಯುಲಿಫೆರ Wall.

Vernacular names : Tamil: ಕುನ್ತೈMalayalam: ಕುಂತೆ ಮರ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬಿಳಿ ಛಾಯೆಯುಳ್ಳ ಕಂದು ಬಣ್ಣದಲ್ಲಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ; ಕಚ್ಚು ಮಾಡಿದ ಜಾಗ ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪ ಚತುಷ್ಕೋನ ಹೊಂದಿದ್ದು, ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಎಲೆತೊಟ್ಟುಗಳು1 – 2 ಸೆಂ.ಮೀ.ವರೆಗಿನ ಉದ್ದವಿದ್ದು, ಕಾಲುಗೆರೆ ಸಮೇತವಿರುತ್ತವೆ; ಪತ್ರಗಳು6 -12 X 3-5.8 ಸೆಂ.ಮೀ. ಗಾತ್ರ, ಅಂಡವೃತ್ತದಿಂದ ಅಂಡವೃತ್ತ-ಬುಗುರಿವರೆಗಿನ ಆಕಾರ, ಕ್ರಮೇಣ ಚೂಪಾಗುವ ಮಾದರಿಯ ತುದಿ, ಒಳಬಾಗಿದ ಮಾದರಿಯ ಬುಡ, ನಯವಾದ ಅಥವಾ ಕೊಂಚ ತರಂಗಿತವಾದ ಅಂಚು, ರೋಮರಹಿತ ಮತ್ತು ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಕಾಲುವೆ ಗೆರೆಯನ್ನು ಹೊಂದಿರುತ್ತದೆ;ಎರಡನೇ ದರ್ಜೆಯ ನಾಳಗಳು 4 ರಿಂದ 8 ಜೋಡಿಗಳಿರುತ್ತವೆ;ರೋಮ ಸಹಿತವಾದ ಸಹಜೀವಿ ಗೂಡುಗಳು ಅಕ್ಷಾಕಂಕುಳಿನಲ್ಲಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು 3- ಕವಲೊಡೆದ ಮಧ್ಯಾರಂಭಿ ಮಾದರಿಯವುಗಳಾಗಿದ್ದು ಅಕ್ಷಾಕಂಕುಳಿನಲ್ಲಿ ಅಥವಾ ತುದಿಯಲ್ಲಿರುತ್ತವೆ;ಹೂಗಳು ದ್ವಿಲಿಂಗಿಗಳಾಗಿದ್ದು ಕೆನೆ-ಬಿಳಿ ಬಣ್ಣ ಹೊಂದಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಅಂಡಾಕಾರದಲ್ಲಿದ್ದು,ಕಳಿತಾಗ ಕಂದು ಛಾಯೆಯುಳ್ಳ ಕಪ್ಪು ಬಣ್ಣದಲ್ಲಿರುತ್ತವೆ; ಬೀಜ ಒಂದು.

ಜೀವಪರಿಸ್ಥಿತಿ :

1200 ಮತ್ತು 2200ಮೀ.ನಡುವಿನ ಎತ್ತರದವರೆಗಿನ ನಿತ್ಯ ಹರಿದ್ವರ್ಣ ಮತ್ತು ಅರೆನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಭಾರತ,ಹಿಮಾಲಯ ಮತ್ತು ನೇಪಾಳ;ಪಶ್ಚಿಮ ಘಟ್ಟದ ಅಣ್ಣಾಮಲೈ,ನೀಲಗಿರಿ ಮತ್ತು ಬಾಬಾಬುಡನ್ ಬೆಟ್ಟ ಪ್ರದೇಶಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

DC., Prodr. 8: 294.1844; Gamble, Fl. Pres.Madras 796:1993(rep.ed.);Sasidharan, Biodiversity documentation for Kerala- Flowering Plants,part 6:279.2004.

Top of the Page