ಓರಿಯೋಕ್ನಿಡೆ ಇಂಟೆಗ್ರಿಫೋಲಿಯ (Gaud.) Miq. - ಅರ್ಟಿಕೇಸಿ

Synonym : ವಿಲ್ಲೆಬ್ರೂನಿಯ ಇಂಟೆಗ್ರಿಫೋಲಿಯ Gaud.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು,ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ.ಕಚ್ಚು ಮಾಡಿದ ಜಾಗ ನಸುಗೆಂಪು ಛಾಯೆ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಚೂಪಲ್ಲದ ಕೋನಗಳ ಸಮೇತವಿರುತ್ತವೆ,ವಿರಳವಾದ ಬಿಳಿ ಬಣ್ಣದ ಮೃದುತುಪ್ಪಳದ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಕಾವಿನೆಲೆಗಳು ಭರ್ಜಿಯ ಆಕಾರದಲ್ಲಿದ್ದು ಉದುರುವ ಮಾದರಿಯಲ್ಲಿದ್ದು ಉದುರಿ ಹೋದ ನಂತರ ಗುರುತುಗಳನ್ನು ಉಳಿಸುತ್ತವೆ;ತೊಟ್ಟುಗಳು 1 – 3.7 ಸೆಂ.ಮೀ.ವರೆಗಿನ ಉದ್ದವಿದ್ದು,ಮೇಲ್ಭಾಗದಲ್ಲಿ ಕಾಲುವೆಗೆರೆ ಹೊಂದಿರುತ್ತವೆ ಅಥವಾ ಚಪ್ಪಟೆಯಾಗಿರುತ್ತವೆ,ಸೂಕ್ಷ್ಮವಾದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 10–20(25) X 2.5–6.4 ಸೆಂ.ಮೀ. ಗಾತ್ರ, ಸಂಕುಚಿತ ಚತುರಸ್ರದಿಂದ ಬುಗುರಿ-ಭರ್ಜಿಯವರೆಗಿನ ಆಕಾರ ಹೊಂದಿದ್ದು, ಬಾಲರೂಪಿ ಅಥವಾ ಬಾಲರೂಪಿ - ಕ್ರಮೇಣ ಚೂಪಾಗುವ ತುದಿ, ಉಪ-ಚೂಪು ಮಾದರಿಯಿಂದ ಬೆಣೆಯಾಕಾರದವರೆಗಿನನ ಬುಡ, ನಯವಾದ ಅಥವಾ ಅಗ್ರದ ಕಡೆಯಲ್ಲಿ ಸೂಕ್ಷ್ಮ ದುಂಡೇಣುಗಳನ್ನೊಳಗೊಂಡ ಅಂಚು ಹೊಂದಿದ್ದು, ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ , ಪತ್ರಗಳ ತಳಭಾಗದಲ್ಲಿನ ಮಧ್ಯನಾಳ ಮತ್ತು ಇತರೆ ನಾಳಗಳ ಮೇಲೆ ಮೃದುತುಪ್ಪಳವಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 5 ರಿಂದ 8 ಜೋಡಿಗಳಿದ್ದು, ಆರೋಹಣ ಮಾದರಿಯಲ್ಲಿರುತ್ತವೆ, ತೀರಾ ತಳಗಿನ ಜೋಡಿಗಳು ಅಭಿಮುಖಿಗಳಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಮಧ್ಯಾರಂಭಿ ಮಾದರಿಯವುಗಳಾಗಿದ್ದು ಗುಚ್ಛಗಳಲ್ಲಿನ ಚೆಂಡುಮಂಜರಿಯಲ್ಲಿರುತ್ತವೆ, 0.4 ಸೆಂ.ಮೀ.ಅಡ್ಡಗಲತೆ ಹೊಂದಿರುತ್ತವೆ,ಅಕ್ಷಾಕಂಕುಳಿನಲ್ಲಿ ಅಥವಾ ಎಲೆಯುದುರಿದ ಗುರುತುಗಳ ಮೇಲಿರುತ್ತವೆ;ಹೂಗಳು ಏಕಲಿಂಗಿಗಳಾಗಿದ್ದು,ಗಂಡು,ಹೆಣ್ಣು ಹೂಗಳು ಒಂದೇ ಸಸ್ಯದಲ್ಲಿ ಅಥವಾ ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ, ಉಪ-ತೊಟ್ಟುಸಹಿತವಾಗಿರುತ್ತವೆ.
ಕಾಯಿ / ಬೀಜ : ಫಲಗಳು ಅಖೀನು ಮಾದರಿಯವು.

ಜೀವಪರಿಸ್ಥಿತಿ :

1400 ಮೀ. ಎತ್ತರದವರೆಗಿನ ಭಗ್ನಗೊಂಡ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಒಳಛಾವಣಿಯಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಭಾರತ,ಮ್ಯಾನ್ಮಾರ್ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Ann. Mus. Lugd.-Bat.4 : 306. 1869 ; Gamble, Fl. Madras 3: 1388. 1998 (re. ed); Sasidharan, Biodiversity documentation for Kerala- Flowering Plants, part 6: 433. 2004.

Top of the Page