ಆರ್ಮೋಸಿಯ ಟ್ರವಂಕೂರಿಕ Bedd. - ಫ್ಯಾಬೇಸಿ - ಫ್ಯಾಬಾಯ್ಡಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಚಪ್ಪಟೆ ಅಥವಾ ಉಪ-ದುಂಡಾಗಿರುತ್ತವೆ ಮತ್ತು ಉಪ-ದುಂಡಾಕಾರವಾಗಿರುತ್ತವೆ; ಎಳೆಯದಾಗಿದ್ದಾಗ ನಸುಗೆಂಪಿನಿಂದ ಕೂಡಿದ ಹಳದಿ ಬಣ್ಣದ ದಟ್ಟವಾದ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ ಮಾದರಿಯಲ್ಲಿದ್ದು ಬೆಸ ಸಂಖ್ಯೆಯ ಪರ್ಣಗಳನ್ನು ಹೊಂದಿರುತ್ತವೆ ಮತ್ತು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ.,ಕಾವಿನೆಲೆಗಳು ಉದುರಿಹೋಗುತ್ತವೆ; ತೊಟ್ಟುಗಳು 2.5-5.5 ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ಬುಡ ಉಬ್ಬಿಕೊಂಡಿರುತ್ತದೆ; ಸಂಯುಕ್ತ ಪರ್ಣದ ನಡುಕಾಂಡ 6-11 (-25) ಸೆಂ.ಮೀ ಉದ್ದವಿರುತ್ತದೆ;ಕಿರು ತೊಟ್ಟು 0.4-0.8ಸೆಂ.ಮೀ. ಉದ್ದವಿದ್ದು ಕಾಲುವೆಗೆರೆ ಸಮೇತವಿರುತ್ತವೆ;ಕಿರುಎಲೆಗಳು 7 ರಿಂದ 9 ಇದ್ದು ಉಪ ಅಭಿಮುಖಿಗಳಾಗಿರುತ್ತವೆ, ಪತ್ರಗಳು 4.5-10 x 2-3.5 ಸೆಂ.ಮೀ ಗಾತ್ರ ಹೊಂದಿದು, ಸಾಮಾನ್ಯವಾಗಿ ಅಂಡವೃತ್ತ- ಭರ್ಜಿಯ ಆಕಾರದಲ್ಲಿರುತ್ತವೆ ಕೆಲವು ಸಂದರ್ಭಗಳಲ್ಲಿ ತುದಿಯಲ್ಲಿನ ಪತ್ರಗಳು ಸಂಕುಚಿತ ಬುಗುರಿಯ ಆಕಾರದಲ್ಲಿ ಇರುತ್ತದೆ;ಪತ್ರದ ತುದಿ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು ಕೆಲವು ವೇಳೆ ಎಳೆಯದಾಗಿದ್ದಾಗ ಮೊಂಡಾಗ್ರವುಳ್ಳ ಬಾಲರೂಪಿ-ಕ್ರಮೇಣ ಚೂಪಾಗುವ ಮಾದರಿಯಲ್ಲಿರುತ್ತದೆ;ಪತ್ರದ ಬುಡ ಚೂಪಾಗಿರುತ್ತದೆ;ಎಳೆಯ ಪತ್ರಗಳಲ್ಲಿ ಅಂಚು ತರಂಗಿತವಾಗಿರುತ್ತದೆ;ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿದ್ದು ತಳಭಾಗದಲ್ಲಿ ದೃಢವಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 7 ಜೋಡಿಗಳಿದ್ದು ತೆಳುವಾಗಿರುತ್ತವ ಹಲವಾರು ಸಂಧರ್ಭದಲ್ಲಿ ಬಲಿತ ಪತ್ರಗಳ ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಹೂಗಳು ನಸುಗೆಂಪು ಬಣ್ಣದಲ್ಲಿದ್ದುಅಕ್ಷಾಕಂಕುಳಿನಲ್ಲಿನ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ಅಂಡವೃತ್ತದ ಆಕಾರದಲ್ಲಿದ್ದು ಉಬ್ಬಿಕೊಂಡಿರುತ್ತವೆ ಮತ್ತು ತುದಿಯಲ್ಲಿ ಕೊಕ್ಕನ್ನು ಹೊಂದಿದ್ದು 12 X 6 ಸೆಂ.ಮೀ. ಗಾತ್ರವನ್ನು ಹೊಂದಿರುತ್ತವೆ.; ಬೀಜಗಳು ಒಂದಿದ್ದು ಕಡುಗೆಂಪು ಬಣ್ಣದಲ್ಲಿರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ 800 ಮೀ. ಎತ್ತರದವರೆಗಿನ ತೇವಾಂಶವುಳ್ಳ ನಿತ್ಯಹರಿದ್ವರ್ಣ ಕಾಡುಗಳಲ್ಲಿನ ಮೇಲ್ಛಾವಣಿಯಲ್ಲಿ ಬೆಳೆಯುವ ಪ್ರಭೇದ ಕೆಲವು ವೇಳೆ ಪಶ್ಚಿಮ ಘಟ್ಟಗಳಲ್ಲಿ 1200 ಮೀ. ಎತ್ತರದರೆಗಿನ ಪ್ರದೇಶಗಳಲ್ಲೂ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಪ್ರಭೇದ ದಕ್ಷಿಣ ಸಹ್ಯಾದ್ರಿಯಲ್ಲಿ ಆಗಾಗ್ಗೆ ಮತ್ತು ಕೊಡಗಿನ ಪ್ರದೇಶಗಳಲ್ಲಿ ಅಪರೂಪವಾಗಿಯೂ ಕಂಡುಬರುತ್ತದೆ.

ಗ್ರಂಥ ಸೂಚಿ :

Fl. Sylv. 45.1870; Gamble, Fl. Madras 1 390.1997 (re.ed); Sasidharan, Biodiversity documentation for Kerala- Flowering Plants, part 6 140. 2004; Saldanha, Fl. Karnataka 1 480. 1996.

Top of the Page