ಆಸ್ಬೆಕ್ಕಿಯ ರೆಟಿಕ್ಯುಲೇಟ Bedd. - ಮೆಲಾಸ್ಟೊಮಟೇಸಿ

:

Vernacular names : Tamil: ಮಲ ಏಚಿಲ್Malayalam: ಹೆಣ್ಣು ನನ್ನೆ, ಕಾಲಿಕುದುರೆ,ಪಾನಾನ್ ಮರ.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಅಂದಾಜು 4 ಮೀಎತ್ತರದ ಪೊದೆಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು 4-ಕೋನಗಳನ್ನು ಹೊಂದಿದ್ದು ತುಕ್ಕು ಬಣ್ಣ ಸಮೇತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಎಲೆತೊಟ್ಟು 1 ಸೆಂ.ಮೀ.ಉದ್ದವಿದ್ದು ಅಡ್ಡಸೀಳಿದಾಗ ಸಪಾಟಪೀನ ಮಧ್ಯದ ಆಕಾರದಲ್ಲಿರುತ್ತದೆ ಹಾಗೂ ತುಕ್ಕು ಬಣ್ಣದ ರೋಮಸಹಿತವಾಗಿರುತ್ತದೆ; ಪತ್ರಗಳು 5-8X 2.5-4.5 ಸೆಂ.ಮೀ. ಗಾತ್ರ, ಅಂಡದ ಆಕಾರ,ಚೂಪಾದ ತುದಿ,ಚೂಪಲ್ಲದುದರಿಂದ ಉಪ-ಹೃದಯಾಕಾರದ ಬುಡ,ನಯವಾದ ಅಂಚು,ಚರ್ಮದಂತಹ ಮೇಲ್ಮೈ,ಕಡು ಹಸಿರು ಬಣ್ಣದ ಮೇಲ್ಭಾಗ,ತೆಳು ಬಣ್ಣದ ತಳಭಾಗ ಹೊಂದಿರುತ್ತವೆ, ಮೇಲ್ಭಾಗ ಮತ್ತು ತಳಭಾಗ ಕಂದು ಮಿಶ್ರಿತ ಹಳದಿ ಬಣ್ಣದ ಬಿರುಗೂದಲುಗಳಿಂದ ದಟ್ಟವಾಗಿ ಆವರಿಸಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆ ಗೆರೆ ಸಮೇತವಿರುತ್ತದೆ; ಪತ್ರದ ಬುಡದಲ್ಲಿ 5-7 ನಾಳಗಳು ಇರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ತುದಿಯಲ್ಲಿದ್ದು 4 ರಿಂದ 6 ಹೂಗಳನ್ನು ಹೊಂದಿರುತ್ತದೆ;ಹೂಗಳು ಕೆನ್ನೀಲಿ ಬಣ್ಣ ಹೊಂದಿರುತ್ತವೆ;ವಿಕಸಿತ ಪುಷ್ಪಪೀಠ ಹೂಜಿಯಾಕಾರ ಹೊಂದಿದ್ದು,1.5 X 1.4 ಸೆಂ.ಮೀ. ಗಾತ್ರ ಹೊಂದಿದ್ದು ಉಣ್ಣೆಯಂತಹ ಬಿರುಗೂದಲುಗಳ ಕುಚ್ಚುಗಳನ್ನು ಹೊಂದಿರುತ್ತವೆ.
ಕಾಯಿ / ಬೀಜ : ಸಂಪುಟ ಫಲಗಳು ಹೂಜಿಯಾಕಾರದಲ್ಲಿದ್ದು ಹಲವಾರು ಬೀಜಗಳನ್ನೊಳಗೊಂಡಿರುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟದ ದಕ್ಷಿಣ ಭಾಗಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಸಹ್ಯಾದ್ರಿಯ ಅಣ್ಣಾಮಲೈ ಮತ್ತು ಪಳನಿ ಬೆಟ್ಟಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Trans.Linn. Soc. London 25: 216.1865;Hooker,Fl.Brit. India 2:520.1879; Gamble, Fl. Pres.Madras 493:1919;Sasidharan,Biodiversity documentation for Kerala- Flowering Plants,part 6:184.2004.

Top of the Page