ಫೆಯಾನ್ ತಸ್ ಮಲಬಾರಿಕಸ್ Bedd. - ಅನೋನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಪೊದೆಗಳು ಅಥವಾ ಸಣ್ಣ ಮರಗಳು ಅಂದಾಜು 5ಮೀ ಎತ್ತರದವರಗೂ ಬೆಳೆಯುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಮೃದು ತುಪ್ಪಳ ಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಸಾಲಿನಲ್ಲಿರುವ ಜೋಡಿಸಲ್ಪಟ್ಟಿರುತ್ತವೆ. ಎಲೆ ತೊಟ್ಟು 3ಸೆಂ.ಮೀ. ನವರೆಗಿರುತ್ತವೆ. ಬಹುಮಟ್ಟಿಗೆ ಗುಂಡಾಕಾದರದಲ್ಲಿದ್ದು, ಧೃಡ ಹಾಗೂ ಮೃದುತುಪ್ಪಳವನ್ನು ಹೊಂದಿರುತ್ತದೆ; ಎಲೆಪತ್ರ 10-20 × 3-6ಸೆಂ.ಮೀ, ಬುಗುರಿ – ಭರ್ಜಿ ಆಕಾರ ಹೊಂದಿದ್ದು ಬಾಲರೂಪಿ – ಕ್ರಮೇಣ ಚೂಪಾಗುವ ತುದಿ, ಬಹುಮಟ್ಟಿಗೆ ಹೃದಯಾಕಾರದ ಬುಡ, ಅಲೆಯಾಕಾರದ ಅಂಚು ಹೊಂದಿರುತ್ತವೆ. ಹಾಗೂ ಸೂಕ್ಷ್ಮವಾಗಿ ಮೃದು ತುಪ್ಪಳ ಸಹಿತ ಅಥವಾ ಉಪರೋಮರಹಿತವಾದ ತಳಭಾಗ ಮತ್ತು ರೋಮರಹಿತವಾದ ಮೇಲ್ಭಾಗವನ್ನು ಪಡೆದಿರುತ್ತವೆ. ಎರದನೇ ದರ್ಜೆಯ ನಾಳಗಳು 8 ರಿಂದ 10 ಜೋಡಿಗಳು ; ತೃತೀಯ ದರ್ಜೆಯ ನಾಳಗಳು ತೆಳ್ಳಗಿದ್ದು, ದುರ್ಬಲವಾಗಿ ಅಕ್ಷಾದಿಂಡಿಗೆ ಸೇರುವಂತಹವು.
ಪುಷ್ಪಮಂಜರಿ/ಹೂಗಳು : ಹೂಗಳು ಕೆನೆಮಿಶ್ರಿತ ಶ್ವೇತ ವರ್ಣದವು ಒಂಟಿಯಾಗಿ ಅಥವಾ ಗುಚ್ಛಗಳಲ್ಲಿದ್ದು ಎಲೆಗಳಿಗೆ ಅಭಿಮುಖವಾಗಿ ಅಥವಾ ಅಗ್ರ ಅಕ್ಷಾಕಂಕುಳಿನಲ್ಲಿರುತ್ತವೆ; ಹೂತೊಟ್ಟುಗಳು 1ಸೆಂ.ಮೀ. ಉದ್ದವಿದ್ದು, ದಟ್ಟ ಮೃದು ತುಪ್ಪಳ ಸಹಿತವಾಗಿರುತ್ತವೆ.
ಕಾಯಿ /ಬೀಜ : ಸಾಮೂಹಿಕವಾಗಿರುವ ಒಂದರಿಂದ ಎರಡು ಬೀಜಗಳನ್ನೊಳಗೊಂಡ ಬೆರ್ರಿಗಳು ಕೆಂಪು ಬಣ್ಣ ಹೊಂದಿರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ ಸಮುದ್ರಮಟ್ಟದಿಂದ 200ಮೀ ಎತ್ತರದವರೆಗೆ ಕಡಿಮೆ ಪ್ರದೇಶಗಳಲ್ಲಿ ಬೆಳೆಯುವ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಿಂದ ವೈನಾಡ್ ಪ್ರಸ್ತಭೂಮಿಯವರೆಗಿನ ಪ್ರದೇಶಗಳಲ್ಲಿ ಅಪರೂಪವಾಗಿ ಕಂಡುಬರುತ್ತವೆ.

ಸ್ಥಿತಿ :

ಅಳಿವಿನಂಚಿನ ಕಡಿಮೆ ಅಪಾಯಸಂಭವ ಸ್ಥಿತಿ; ನಶಿಸುವ ಭೀತಿಗೆ ಹತ್ತಿರವಾಗಿರುವ ಸ್ಥಿತಿ. (IUCN, 2000)

ಗ್ರಂಥ ಸೂಚಿ :

Beddome, Icon. Pl. Ind. Or. 76. 1868-1974; Gamble, Fl. Madras 1: 17. 1997 (re. ed); Sasidharan, Biodiversity documentation for Kerala- Flowering Plants, part 6: 19. 2004.

Top of the Page