ಪಿಟ್ಟೋಸ್ಪೋರಂ ನೀಲ್ಘೆರ್ರೆನ್ಸೆ Wt. & Arn. - ಪಿಟ್ಟೋಸ್ಪೊರೇಸಿ

ಪರ್ಯಾಯ ನಾಮ : ಪಿಟ್ಟೋಸ್ಪೊಮ್ ನಿಲ್ಗೆರೆನ್ಸೆ Wt. & Arn.

Vernacular names : Tamil: ಅನಲಿವೆಂಗMalayalam: ಕುಹಿ ಮಾವು

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳು, ದುಂಡಾಗಿದ್ದು, ರೋಮರಹಿತವಾಗಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಸಾಮಾನ್ಯವಾಗಿ ತುದಿಯಲ್ಲಿ ಗುಂಪಾಗಿರುತ್ತವೆ; ಎಲೆತೊಟ್ಟುಗಳು 0.5 –1.2 ಸೆಂ.ಮೀ. ವರೆಗಿನ ಉದ್ದವಿದ್ದು,ಕಾಲುವೆಗೆರೆಯನ್ನು ಹೊಂದಿದ್ದು ರೋಮರಹಿತವಾಗಿರುತ್ತವೆ ; ಪತ್ರಗಳು2.5 -10 X 1.3 –5 ಸೆಂ.ಮೀ. ಗಾತ್ರ, ಅಂಡವೃತ್ತ ಅಥವಾ ಬುಗುರಿಯ ಆಕಾರ, ಚೂಪಾದ ಅಥವಾ ಉಪ - ಕ್ರಮೇಣ ಚೂಪಾಗುವ, ಕೆಲವು ವೇಳೆ ಚೂಪಲ್ಲದ ಮಾದರಿಯ ತುದಿ, ಚೂಪಾದ ಬುಡ, ನಯವಾದುದರಿಂದ ಹಿಡಿದು ಸೂಕ್ಷ್ಮ ದಂತಿತವಾದ ಅಂಚನ್ನು ಹೊಂದಿರುತ್ತವೆ,ಪತ್ರಗಳು ಕಾಗದ ಅಥವಾ ತೆಳು-ತೊಗಲನ್ನೋಲುವ ರೀತಿಯ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ, ಮಧ್ಯನಾಳ ಕಾಲುವೆ ಗೆರೆಯನ್ನು ಹೊಂದಿರುತ್ತದೆ;ಎರಡನೇ ದರ್ಜೆಯ ನಾಳಗಳು 5- 8 ಜೋಡಿಗಳಿದ್ದು,ತೆಳುವಾಗಿರುತ್ತವೆ ಹಾಗೂ ಕವಲುಗಳ ಸಮೇತವಿರುತ್ತವೆ;ಮೂರನೇ ದರ್ಜೆಯ ನಾಳಗಳು ಸೂಕ್ಷ್ಮ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ, ಕೆಲವು ವೇಳೆ ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ,ಕೆಲವು ಹೂಗಳನ್ನೊಳಗೊಂಡ ಮಧ್ಯಾಭಿಸರದ ಮಾದರಿಯವುಗಳಾಗಿರುತ್ತವೆ;ಹೂಗಳು ಹಳದಿ; ತೊಟ್ಟು 1 ಸೆಂ.ಮೀ ವರೆಗಿನ ಉದ್ದ ಹೊಂದಿರುತ್ತದೆ.
ಕಾಯಿ / ಬೀಜ : ಸಂಪುಟ ಫಲ ಓರೆಯಾದ 2 ಕವಾಟಗಳನ್ನು ಹೊಂದಿದ್ದು ಅಂದಾಜು 1 ಸೆಂ.ಮೀ. ಅಡ್ಡಗಲತೆಯನ್ನು ಹೊಂದಿರುತ್ತವೆ;ತೊಟ್ಟುಗಳು ನೂಲಿನ ರೀತಿಯಿರುತ್ತವೆ;ಬೀಜಗಳ ಸಂಖ್ಯೆ 4 ರಿಂದ 8.

ಜೀವಪರಿಸ್ಥಿತಿ :

1200 ಮತ್ತು 2300ಮೀ.ನಡುವಿನ ಮಧ್ಯಮ ಮತ್ತು ಅತಿ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ನೈರುತ್ಯ ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿಯ ಬಾಬಾಬುಡನ್ ಬೆಟ್ಟಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Wight & Arn., Prodr. 154.1834; Gamble, Fl. Pres.Madras 1:55.1997(rep.ed.);Sasidharan, Biodiversity documentation for Kerala- Flowering Plants,part 6:33.2004;Saldanha,Fl. Karnataka 1:358.1984.

Top of the Page