ಪಿಟ್ಟೋಸ್ಪೊಮ್ ಟೆಟ್ರಾಸ್ಪರ್ಮಮ್ Wt. & Arn. - ಪಿಟ್ಟೋಸ್ಪೊರೇಸಿ

:

Vernacular names : Tamil: ಕಚ್ಚಪಟ್ಟMalayalam: ಬಡಗ ಕಹಿ ಮಾವು,ಕುಯಿ ಮಾವು,ಸುನಾರಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು,ಸೂಕ್ಷ್ಮವಾದ ಸೀಳಿಕಾ ವಿನ್ಯಾಸ ಹೊಂದಿದ್ದು , ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು,ಮೃದು ತುಪ್ಪಳದಿಂದ ಕೂಡಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಸಾಮಾನ್ಯವಾಗಿ ತುದಿಯಲ್ಲಿ ಗುಂಪಾಗಿರುತ್ತವೆ; ಎಲೆತೊಟ್ಟುಗಳು1.5 – 2 ಸೆಂ.ಮೀ.ವರೆಗಿನ ಉದ್ದವಿದ್ದು, ಕಾಲುವೆಗೆರೆಯನ್ನು ಹೊಂದಿದ್ದು, ಎಳೆಯದಾಗಿದ್ದಾಗ ಸೂಕ್ಷ್ಮ ಮೃದು ತುಪ್ಪಳದಿಂದ ಕೂಡಿರುತ್ತವೆ; ಪತ್ರಗಳು 5 -10 X 2 –4 ಸೆಂ.ಮೀ. ಗಾತ್ರ, ಬುಗುರಿಯ ರೀತಿಯಿಂದ ಬುಗುರಿ-ಭರ್ಜಿಯವರೆಗಿನ ಅಥವಾ ಸಂಕುಚಿತ ಅಂಡವೃತ್ತದ ಆಕಾರ,ಚೂಪಾದುದರಿಂದ ಅಥವಾ ಚಿಕ್ಕ ಗಾತ್ರದ ಕ್ರಮೇಣ ಚೂಪಾಗುವ ಕೆಲವು ವೇಳೆ ಚೂಪಲ್ಲದ ಮಾದರಿಯ ತುದಿ, ಬೆಣೆಯಾಕಾರದ ಬುಡ, ನಯವಾದ ಅಂಚನ್ನು ಹೊಂದಿರುತ್ತವೆ,ಪತ್ರಗಳು ಉಪ-ತೊಗಲನ್ನೋಲುವನ್ನೋಲುವ ರೀತಿಯ ಮೇಲ್ಮೈ,ತೆಳು ಬಣ್ಣದ ತಳಭಾಗವನ್ನು ಹೊಂದಿದ್ದು ರೋಮರಹಿತವಾಗಿರುತ್ತವೆ, ಮಧ್ಯನಾಳ ಕಾಲುವೆ ಗೆರೆಯನ್ನು ಹೊಂದಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 9 ಜೋಡಿಗಳು; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಮಧ್ಯಾಭಿಸರದ ಮಾದರಿಯವು;ಹೂಗಳು ಕೆನೆ ಬಣ್ಣದವು; ತೊಟ್ಟು 0.5 ಸೆಂ.ಮೀ ವರೆಗಿನ ಉದ್ದ ಹೊಂದಿರುತ್ತದೆ.
ಕಾಯಿ / ಬೀಜ : ಸಂಪುಟ ಫಲ 2 ಕವಾಟಗಳನ್ನು ಹೊಂದಿದ್ದು ಅಂದಾಜು 1 ಸೆಂ.ಮೀ. ಅಡ್ಡಗಲತೆಯನ್ನು ಹೊಂದಿರುತ್ತವೆ; ಬೀಜಗಳು 4.

ಜೀವಪರಿಸ್ಥಿತಿ :

1600 ಕ್ಕೂ ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ಅಣ್ಣಾಮಲೈ,ಪಳನಿ ಬೆಟ್ಟಗಳು,ನೀಲಗಿರಿ ಮತ್ತು ಬಾಬಾಬುಡನ್ ಬೆಡ್ಡ ಪ್ರದೇಶಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

Wight & Arn., Prodr. 154.1834; Gamble, Fl. Pres.Madras 1:55.1997(rep.ed.);Sasidharan, Biodiversity documentation for Kerala- Flowering Plants,part 6:34.2004;Saldanha,Fl. Karnataka 1:358.1984.

Top of the Page