ಪಾಲಿಗ್ಯಾಲ ಏರಿಲ್ಲಟ Buch.-Ham. ex Don. - ಪಾಲಿಗ್ಯಾಲೇಸಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 4 ಮೀ. ಎತ್ತರದವರೆಗಿನ ದೊಡ್ಡ ಗಾತ್ರದ ಪೊದೆಗಳು ಆಥವಾ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಂದು ಬಣ್ಣದಲ್ಲಿದ್ದು, ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ;ಕಚ್ಚು ಮಾಡಿದ ಜಾಗ ಬಿಳಿ ಮಿಶ್ರಿತ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು,ಮೃದು ತುಪ್ಪಳದಿಂದ ಕೂಡಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.7 –1.3 ಸೆಂ.ಮೀ.ವರೆಗಿನ ಉದ್ದವಿದ್ದು,ಅಡ್ಡ ಸೀಳಿದಾಗ ಕಾಲುವೆಗೆರೆಯನ್ನು ಹೊಂದಿರುತ್ತದೆ ಹಾಗೂ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ; ಪತ್ರಗಳು 6. 5 -11 X 3–4 .3 ಸೆಂ.ಮೀ. ಗಾತ್ರ, ಅಂಡವೃತ್ತದ ಆಕಾರ, ಕ್ರಮೇಣ ಚೂಪಾಗುವ ಮಾದರಿಯ ತುದಿ, ಚೂಪಾದ ಬುಡ, ನಯವಾದ ಅಂಚನ್ನು ಹೊಂದಿದ್ದು ರೋಮರಹಿತವಾಗಿರುತ್ತವೆ;ನಾಳಗಳು ಪತ್ರಗಳ ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತವೆ;, ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆ ಗೆರೆಯನ್ನು ಹೊಂದಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 8 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಮಧ್ಯಾಭಿಸರದ ಮಾದರಿಯವುಗಳಾಗಿದ್ದು 15 ಸೆಂ.ಮೀ. ಉದ್ದವಿದ್ದು ಲೋಲಾಡುತ್ತಿರುತ್ತವೆ;ವೃಂತ 3 ಸೆಂ.ಮೀ ವರೆಗಿನ ಉದ್ದವಿರುತ್ತವೆ;ಹೂ ತೊಟ್ಟು 0.8 ಸೆಂ.ಮೀ.ಉದ್ದವಿರುತ್ತವೆ;ಹೂಗಳು ಉಭಯ ಪಾರ್ಶ್ವ ಅಸಮಾಂಗತೆ ಹೊಂದಿರುತ್ತವೆ, ಹಾಗೂ ಹಳದಿ ಬಣ್ಣ ಹೊಂದಿರುತ್ತವೆ;ಪುಷ್ಪದಳಗಳು 3, ತಳಭಾಗದ ಒಂದು ದಳ ದೋಣಿಯಾಕಾರದಲ್ಲಿರುತ್ತದೆ.
ಕಾಯಿ / ಬೀಜ : ಸಂಪುಟ ಫಲ ತಲೆಕೆಳಗಾದ ಹೃದಯಾಕಾರದಲ್ಲಿದ್ದು, ಉಬ್ಬಿಕೊಂಡಿರುತ್ತದೆ;ಬೀಜಗಳು 2 ಇದ್ದು ಗೋಳಾಕಾರದಲ್ಲಿದ್ದು ಸಂಕುಚಿತಗೊಂಡಿರುತ್ತವೆ;ಕ್ಯಾರಂಕಲ್ ಕಿತ್ತಳೆ-ಕೆಂಪು ಬಣ್ಣದಲ್ಲಿರುತ್ತದೆ.

ಜೀವಪರಿಸ್ಥಿತಿ :

1200 ಮತ್ತು 1600 ಮೀ.ನಡುವಿನ ಮಧ್ಯಮ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ದಕ್ಷಿಣ ಚೈನ; ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿ ಪ್ರದೇಶದಲ್ಲಿಈ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

Prodr. Fl. Nepal 199.1825; Gamble, Fl. Pres.Madras 1:58:1997(rep.ed.); Sasidharan, Biodiversity documentation for Kerala- Flowering Plants,part 6:34.2004;Saldanha,Fl. Karnataka 2:358.1984.

Top of the Page