ಪ್ರೂನಸ್ ಸೇಲಾನಿಕ (Wt.) Miq. - ರೋಸೇಸಿ

ಪರ್ಯಾಯ ನಾಮ : ಪೈಜಿಯಮ್ ಗಾರ್ಡ್ನೆರಿ J.Hk.,;ಪೈಜಿಯಮ್ ವೈಟಿಯಾನಮ್Bl. ex Muell.

Vernacular names : Tamil: ಅಟ್ಟನರಿಪೊಂಗು;ಇರಟ್ಟನಿ;ನಾಯ್ಕಂಬಗಮ್;ನಾಯ್ತಂಬಗಮ್;ರೆಟ್ಟಿಯನ್Malayalam: ಸುಗನಿ ನಾರು

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆಗಿನ ದೊಡ್ಡ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು, ಅನಿಯತವಾದ ದೊಡ್ಡ ಗಾತ್ರದ ಚಕ್ಕೆ ರೂಪದಲ್ಲಿರುತ್ತವೆ , ಕೆಲವು ವೇಳೆ ಪದರದಂತೆ ಕಳಚಿ ಹೋಗುವ ಮಾದರಿಯಲ್ಲಿರುತ್ತವೆ; ಕಚ್ಚು ಮಾಡಿದ ಜಾಗ ಕೆಂಪು ಛಾಯೆ ಹೊಂದಿದ್ದು ಕಹಿ ಬಾದಾಮಿಯ ಅಥವಾ ಹಾಸಿಗೆ ತಿಗಣೆಯ ವಾಸನೆಯನ್ನು ಹೊಂದಿರುತ್ತದೆ,
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪದುಂಡಾಗಿರುತ್ತವೆ,ಸೂಕ್ಷ್ಮ ಮೃದುತುಪ್ಪಳವನ್ನು ಹೊಂದಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ; ಕಾವಿನೆಲೆಗಳು ಉದುರಿದ ನಂತರ ಗುರುತುಗಳನ್ನು ಉಳಿಸುತ್ತವೆ;ತೊಟ್ಟು 0.6 – 2.8 ಸೆಂ.ಮೀ.ವರೆಗಿನ ಉದ್ದವಿದ್ದು, ಕಾಲುವೆಗೆರೆಯನ್ನು ಹೊಂದಿದ್ದು ರೋಮರಹಿತವಾಗಿರುತ್ತದೆ; ಪತ್ರಗಳು 7 -17 X 2.5–6.5 ಸೆಂ.ಮೀ. ಗಾತ್ರ, ಅಂಡದಿಂದ ಅಂಡ-ಭರ್ಜಿಯವರೆಗಿನ ಆಕಾರ ಹೊಂದಿದ್ದು,ಅಗ್ರದಲ್ಲಿ ಮೊಂಡಾಗ್ರವುಳ್ಳ ಹೊಂದಿದ ಕ್ರಮೇಣ ಚೂಪಾಗುವ ಮತ್ತು ತಿರುಚಿಕೊಂಡಿರುವ ತುದಿ, ದುಂಡಾದ ಅಥವಾ ಅಸಮವಾದ ,ಕೆಲವು ವೇಳೆ ಒಳಬಾಗಿದ ಬುಡ, ನಯವಾದ ಅಂಚು, ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ,ಸಾಮಾನ್ಯವಾಗಿ ವೃತ್ತಾಕಾರದ ಒಂದು ಜೋಡಿ ರಸಗ್ರಂಥಿಗಳು ಪತ್ರಗಳ ತಳ ಭಾಗದ ಬುಡದಲ್ಲಿರುತ್ತವೆ,ಕೆಲವು ವೇಳೆ ಪತ್ರದ ಮೊದಲ ಅರ್ಧ ಭಾಗದಲ್ಲಿರುತ್ತವೆ, ಅಪರೂಪವಾಗಿ ರಸಗ್ರಂಥಿಗಳು ಇರುವುದಿಲ್ಲ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿದ್ದು ತಳಭಾಗದಲ್ಲಿ ಕೆಂಪು ಛಾಯೆ ಹೊಂದಿರುತ್ತದೆ; ಎರಡನೇ ದರ್ಜೆಯ ನಾಳಗಳು 6 ರಿಂದ 8 ಜೋಡಿಗಳಿದ್ದು ಎಳೆಯದಾಗಿದ್ದಾಗ ಕೆಂಪಾಗಿರುತ್ತವೆ,ಆರೋಹಣ ಮಾದರಿಯಲ್ಲಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಮಧ್ಯಾಭಿಸರ ಮಾದರಿಯಲ್ಲಿರುತ್ತವೆ;ಹೂಗಳು ಬಿಳಿ ಬಣ್ಣದವು.
ಕಾಯಿ / ಬೀಜ : ಡ್ರೂಪ್ಗಳು ಆಳ ಹೊಂದಿರದ 2 ಹಾಲೆಗಳ ಸಮೇತವಿರುತ್ತದೆ,ರೋಮರಹಿತವಾಗಿರುತ್ತದೆ; ಬೀಜಗಳ ಸಂಖ್ಯೆ 2 ಇದ್ದು ಸಂಕುಚಿತಗೊಂಡಿರುತ್ತವೆ.

ಜೀವಪರಿಸ್ಥಿತಿ :

400 ಮತ್ತು 2600 ಮೀ. ನಡುವಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಉಪಛಾವಣಿಯಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಇಂಡೋಮಲೇಸಿಯ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳು.

ಗ್ರಂಥ ಸೂಚಿ :

Fl. Ind. Bat. 1.387. 1857; Trans. Linn. Soc. London 13. 103. 1821; Gamble, Fl. Madras 1:439. 1997 (re. ed); Sasidharan, Biodiversity documentation for Kerala- Flowering Plants, part 6: 165. 2004; Saldanha, Fl. Karnataka 1: 369. 1984; Cooke, Fl. Bombay 1: 458.1903; Almeida, Fl. Maharashtra 2:228. 1998

Top of the Page