ಸೈಖಾಟ್ರಿಯ ಡಾಲ್ಜೆಲ್ಲಿಯೈ J.Hk. - ರೂಬಿಯೇಸಿ

:

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ ಅಂದಾಜು 5 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪ ದುಂಡಾಗಿರುವುದರಿಂದ ಸಂಕುಚಿತದವರೆಗಿನ ಆಕಾರ ಹೊಂದಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ, ಕಾವಿನೆಲೆಗಳು ಗಾತ್ರದಲ್ಲಿದ್ದು,ತೊಟ್ಟುಗಳ ನಡುವೆ ಇರುತ್ತವೆ,ಎಲೆಯ ರೂಪವನ್ನು ಹೊಂದಿರುತ್ತವೆ, ಭರ್ಜಿಯಆಕಾರದಲ್ಲಿದ್ದು, ಒರೆಯ ಸಮೇತವಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ; ತೊಟ್ಟು 1 – 2 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿದ್ದು, ರೋಮರಹಿತವಾಗಿರುತ್ತವೆ;ಪತ್ರಗಳು 12 .5 -25 X4.5 -10.5 ಸೆಂ.ಮೀ. ಗಾತ್ರ ಹೊಂದಿದ್ದು, ಬುಗುರಿಯ ಅಥವಾ ಭರ್ಜಿ-ಬುಗುರಿಯ ಆಕಾರ ಹೊಂದಿದ್ದು, ಚೂಪಲ್ಲದ ಅಥವಾ ದುಂಡಾದ ಮತ್ತು ಕಿರಿದಾದ ಕ್ರಮೇಣ ಚೂಪಾಗುವವರೆಗಿನ ತುದಿ, ಬೆಣೆಯಾಕಾರದಿಂದ ತಳಭಾಗಕ್ಕೆ ವಿಸ್ತರಿಸಿದ ಬುಡ, ನಯವಾದ ಅಂಚು, ದಪ್ಪನೆಯ ತೊಗಲನ್ನೋಲುವವರೆಗಿನ ಮೇಲ್ಮೈ ಹೊಂದಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು 12 ರಿಂದ 20 ಜೋಡಿಗಳಿದ್ದು ಅಕ್ಷದ ಲಂಬ ಕೋನಕ್ಕೆ ಸಮಾನಾಂತರದಲ್ಲಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ ಅಥವಾ ಸ್ಪಷ್ಟವಾಗಿದ್ದ ಪಕ್ಷದಲ್ಲಿ ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಕವಲುಗಳ ಸುತ್ತುಗಳು ಹೂಗಳುಳ್ಳ ಚೆಂಡುಮಂಜರಿಯಲ್ಲಿ ಕೊನೆಗೊಳ್ಳುವ ಮಾದರಿಯವು;ಪತ್ರಕಗಳು ಮತ್ತು ಉಪಪತ್ರಕಗಳು ದೊಡ್ಡ ಗಾತ್ರ ಹೊಂದಿದ್ದು ಶಾಶ್ವತವಾಗಿರುತ್ತವೆ;ಹೂಗಳು ಬಿಳಿ ಬಣ್ಣದಲ್ಲಿದ್ದು ಉಪ ತೊಟ್ಟುಗಳನ್ನು ಹೊಂದಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಅಂಡಾಕಾರದಲ್ಲಿದ್ದು ಅಂದಾಜು 1 ಸೆಂ.ಮೀ. ಉದ್ದವಿದ್ದು 2 ಸಪಾಟ ಪೀನ ಮಧ್ಯದ ಆಕಾರವುಳ್ಳ 2 ಪೈರೀನುಗಳನ್ನೊಳಗೊಂಡು ಪುಷ್ಪಪಾತ್ರೆಯ ಎಸಳುಗಳನ್ನು ಮುಕುಟದಲ್ಲಿ ಹೊಂದಿರುತ್ತವೆ.;ಪ್ರತಿ ಪೈರೀನಿನಲ್ಲಿ 1 ಬೀಜವಿರುತ್ತದೆ.

ಜೀವಪರಿಸ್ಥಿತಿ :

700 ಮೀ. ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಾವರಣದಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Fl. Brit. India 3: 163. 1880; Gamble, Fl. Madras 2: 640. 1993 (re. ed); Sasidharan, Biodiversity documentation for Kerala- Flowering Plants, part 6: 231. 2004; Cooke, Fl. Bombay 1: 616.1903; Almeida, Fl. Maharashtra 3:54. 2001.

Top of the Page