ಸೈಖಾಟ್ರಿಯ ನೈಗ್ರ (Gaert.) Alston - ರೂಬಿಯೇಸಿ

Synonym :

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಪೊದೆಗಳು ಅಥವಾ ಅಂದಾಜು 4 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪ ದುಂಡಾದ ಆಕಾರದಲ್ಲಿದ್ದು,ಸಂಕುಚಿತವಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ, ಕಾವಿನೆಲೆಗಳು ,ತೊಟ್ಟುಗಳ ನಡುವೆ ಇರುತ್ತವೆ,ವಿಶಾಲ ಅಂಡದ ಆಕಾರದಲ್ಲಿದ್ದು ಅಗ್ರದಲ್ಲಿ ಸೂಕ್ಷ್ಮ ಮುಳ್ಳನ್ನು ಹೊಂದಿರುತ್ತವೆ ಹಾಗೂ ಒರೆಯ ಸಮೇತವಿರುತ್ತವೆ;ತೊಟ್ಟು 0.6 – 1.8 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿದ್ದು, ರೋಮರಹಿತವಾಗಿರುತ್ತವೆ;ಪತ್ರಗಳು 10 -16(-20) X3.5 -6 ಸೆಂ.ಮೀ. ಗಾತ್ರ ಹೊಂದಿದ್ದು, ಭರ್ಜಿ-ಬುಗುರಿಯಿಂದ ಬುಗುರಿಯವರೆಗಿನ ಆಕಾರ ಹೊಂದಿದ್ದು, ಕ್ರಮೇಣ ಚೂಪಾಗುವ ತುದಿ, ಬೆಣೆಯಾಕಾರದಿಂದ ತಳಭಾಗಕ್ಕೆ ವಿಸ್ತರಿಸಿದ ಬುಡ, ನಯವಾದ ಅಂಚು ಹೊಂದಿದ್ದು, ಕಾಗದವನ್ನೋಲುವ ಮೇಲ್ಮೈ ಸಮೇತವಿರುತ್ತವೆ;ಮಧ್ಯನಾಳಪತ್ರದಮೇಲ್ಭಾಗದಲ್ಲಿಉಬ್ಬಿರುತ್ತದೆ;ಎರಡನೇದರ್ಜೆಯನಾಳಗಳು12 ರಿಂದ 15 ಜೋಡಿಗಳಿದ್ದು,ಸಾಧಾರಣ ರೀತಿಯದಾಗಿರುತ್ತವೆ,ಹೆಚ್ಚೂ ಕಡಿಮೆ ಲಂಬ ಕೋನಕ್ಕೆ ಸಮಾನಾಂತರ ಅಕ್ಷದ ಲಂಬ ಕೋನಕ್ಕೆ ಸಮಾನಾಂತರದಲ್ಲಿರುತ್ತವೆ; ಎರಡನೇ ದರ್ಜೆಯ ನಾಳಗಳ ಅಕ್ಷಾಕಂಕುಳಿನಲ್ಲಿ ಸೂಕ್ಷ್ಮ ಸಹಜೀವಿ ಗೂಡುಗಳ ಸಮೇತವಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ ಅಥವಾಗಿರುತ್ತವೆ ಮತ್ತು ವಾ ಸ್ಪಷ್ಟವಾಗಿದ್ದ ಪಕ್ಷದಲ್ಲಿ ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಚಿಕ್ಕ ಗಾತ್ರದ ಚೆಂಡು ಮಾದರಿಯಲ್ಲಿದ್ದು ವೃಂತವುಳ್ಳ ಮಧ್ಯಾರಂಭಿ ಮಂಜರಿಗಳ ಸುತ್ತು ಜೋಡನೆಯ ಕವಲುಗಳ ಮೇಲಿರುತ್ತವೆ;ಹೂಗಳು ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಬಿಳಿಬಣ್ಣದಲ್ಲಿದ್ದು ಅಂಡವೃತ್ತದ ಆಕಾರದಲ್ಲಿದ್ದು 0.8 ಸೆಂ.ಮೀ.ವರೆಗಿನ ಉದ್ದವಿದ್ದು ಸಪಾಟ ಪೀನ ಮಧ್ಯದ ಆಕಾರದ 2 ಪೈರೀನುಗಳನ್ನೊಳಗೊಂಡಿರುತ್ತವೆ; ಪ್ರತಿ ಪೈರೀನಿನಲ್ಲಿ 1 ಬೀಜವಿರುತ್ತದೆ.

ಜೀವಪರಿಸ್ಥಿತಿ :

1800 ಮೀ. ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಾವರಣದಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟ ಮತ್ತು ಶ್ರೀಲಂಕಾ;ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಮತ್ತು ಈ ಪ್ರಭೇದ ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Trimen, Handb. Fl. Ceylon 6 (Suppl.): 152. 1931; Gamble, Fl. Madras 2: 640. 1993 (re. ed); Sasidharan, Biodiversity documentation for Kerala- Flowering Plants, part 6: 232. 2004. Cooke, Fl. Bombay 1: 615.1903; Almeida, Fl. Maharashtra 3:54. 2001.

Top of the Page