ಸೈಖಾಟ್ರಿಯ ಟ್ರಂಕೇಟ Wall. - ರೂಬಿಯೇಸಿ

:

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ ಅಂದಾಜು 5 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪ ದುಂಡಾಗಿರುವುದರಿಂದ,ಸಂಕುಚಿತವಾಗಿರುವ ಮಾದರಿಯದಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳುಸರಳವಾಗಿದ್ದುಕತ್ತರಿಯಾಕಾರದಅಭಿಮುಖಜೋಡನಾವ್ಯವಸ್ಥೆಯಲ್ಲಿರುತ್ತವೆ,ಕಾವಿನೆಲೆಗಳು,ತೊಟ್ಟುಗಳನಡುವೆಇರುತ್ತವೆ,ಅಂಡ-ಭರ್ಜಿಯ ಆಕಾರದಲ್ಲಿದ್ದು ಹಾಗೂ ಒರೆಯ ಸಮೇತವಿರುತ್ತವೆ;ತೊಟ್ಟು 0.8 – 3 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿದ್ದು,ರೋಮರಹಿತವಾಗಿರುತ್ತವೆ;ಪತ್ರಗಳು 10 -25 X 4.5 -10 ಸೆಂ.ಮೀ. ಗಾತ್ರ ಹೊಂದಿದ್ದು, ಬುಗುರಿಯಿಂದ ವಿಶಾಲವಾದ ಬುಗುರಿ ಕೆಲವು ವೇಳೆ ಅಂಡವೃತ್ತದ ಆಕಾರ ಹೊಂದಿದ್ದು, ಥಟ್ಟನೆ ಮತ್ತು ಕಿರುದಾಗಿ ಕ್ರಮೇಣ ಚೂಪಾಗುವ ತುದಿ, ಬೆಣೆಯಾಕಾರದಿಂದ ತಳಭಾಗಕ್ಕೆ ವಿಸ್ತರಿಸಿದ ಬುಡ, ಹಿಂಸುರುಳಿಯಾದ ಅಂಚು ಹೊಂದಿದ್ದು, ಕಾಗದವನ್ನೋಲುವ ಅಥವಾತೆಳುತೊಲನ್ನೋಲುವಮೇಲ್ಮೈಸಮೇತವಿರುತ್ತವೆಹಾಗೂರೋಮರಹಿತವಾಗಿರುತ್ತವೆ;ಮಧ್ಯನಾಳ ಮತ್ತು ಎರಡನೇ ದರ್ಜೆಯ ನಾಳಗಳು ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತವೆ;ಎರಡನೇ ದರ್ಜೆಯ ನಾಳಗಳು 13 ರಿಂದ 18 ಜೋಡಿಗಳಿದ್ದು,ಅಕ್ಷದ ಲಂಬ ಕೋನಕ್ಕೆ ಸಮಾನಾಂತರದಲ್ಲಿರುತ್ತವೆ ,ಮತ್ತು ಕ್ರಮೇಣವಾಗಿ ಬಾಗಿರುತ್ತವೆ ಹಾಗೂ ಅಕ್ಷಾಕಂಕುಳಿನಲ್ಲಿ ಸೂಕ್ಷ್ಮ ಸಹಜೀವಿ ಗೂಡುಗಳ ಸಮೇತವಿರುತ್ತವೆ;ಮೂರನೇ ದರ್ಜೆಯ ನಾಳಗಳು ಅತಿ ಕಡಿಮೆ ಅಂತರದಲ್ಲಿದ್ದು,ಓರೆಯಾಗಿ ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿದ್ದು ಕವಲುಗಳು ಮಧ್ಯಾರಂಭಿ ಮಂಜರಿಗಳಾಗಿ ಅಂತ್ಯಗೊಳ್ಳುವ ಮಾದರಿವುಗಳಾಗಿರುತ್ತವೆ; ಹೂಗಳು ಬಿಳಿಬಣ್ಣದವುಗಳಾಗಿದ್ದು, ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಅಂಡಾಕಾರದಲ್ಲಿದ್ದು ಸಪಾಟ ಪೀನ ಮಧ್ಯದ ಆಕಾರದ 2 ಪೈರೀನುಗಳನ್ನೊಳಗೊಂಡಿರುತ್ತವೆ; ಪ್ರತಿ ಪೈರೀನಿನಲ್ಲಿ 1 ಬೀಜವಿರುತ್ತದೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ 600 ಮತ್ತು 2000 ಮೀ. ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಾವರಣದಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿಯಲ್ಲಿ ಅಪರೂಪವಾಗಿ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಆಗಾಗ್ಗೆ ಕಂಡುಬರುತ್ತದೆ.

ಗ್ರಂಥ ಸೂಚಿ :

Wall. in Roxb. Fl. Ind.2: 162. 1824; Gamble, Fl. Madras 2: 640. 1993 (re. ed); Sasidharan, Biodiversity documentation for Kerala- Flowering Plants, part 6: 233. 2004; Cooke, Fl. Bombay 1: 616.1903; Almeida, Fl. Maharashtra 3:55. 2001.

Top of the Page