ಟೀರೋಸ್ಪರ್ಮಮ್ ರುಬಿಜಿನೋಸಮ್ Heyne - ಸ್ಟರ್ಕ್ಯೂಲಿಯೇಸಿ

:

Vernacular names : Tamil: ಚಿತ್ತಿಲಪ್ಳಾವು,ಎಲ್ಲೂಟಿ,ಮಲಂತೊಡಲಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 28 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ ಹೊಂದಿದ್ದು,ದೊಡ್ಡ ಗಾತ್ರದ ಚಕ್ಕೆ ರೂಪದವು ಅಥವಾ ಪದರ ಕಳಚುವ ಮಾದರಿಯಲ್ಲಿರುತ್ತವೆ;ಕಚ್ಚು ಮಾಡಿದ ಮೇಲ್ಭಾಗ ಕೆಂಪಾಗಿದ್ದು ಒಳ ಭಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ತೆಳುವಾಗಿದ್ದು, ದುಂಡಾಗಿರುತ್ತವೆ, ಕಂದು ಮಿಶ್ರಿತ ಹಳದಿಬಣ್ಣದ ಮೃದು ತುಪ್ಪಳದಿಂದ ಮತ್ತು ನಕ್ಷತ್ರ ರೂಪದ ರೋಮಗಳಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ ;ಕಾವಿನೆಲೆಗಳು ಪಾರ್ಶ್ವದಲ್ಲಿದ್ದು, ಎರಡು ದಬ್ಬಳದ ಆಕಾರದ ಉಪಾಂಗಗಳ ಸಮೇತವಿರುತ್ತವೆ, ದಟ್ಟವಾದ ಮೃದು ತುಪ್ಪಳದಿಂದ ಕೂಡಿದ್ದು ಉದುರಿಹೋಗುವ ಮಾದರಿ -ಯವುಗಳಾಗಿರುತ್ತವೆ; ತೊಟ್ಟುಗಳು ಅಂದಾಜು0.1 ಸೆಂ.ಮೀ. ಉದ್ದವಿದ್ದು, ದುಂಡಾಗಿರುತ್ತವೆ, ನಕ್ಷತ್ರ ರೂಪದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ; ಪತ್ರಗಳು 4.5 – 10 X 1.5 – 3 ಸೆಂ.ಮೀ. ಗಾತ್ರ,ಚತುರಸ್ರ-ಭರ್ಜಿಯ ಆಕಾರ ಹೊಂದಿದ್ದು, ಕ್ರಮೇಣ ಚೂಪಾಗುವ ತುದಿ, ಅಸಮ್ಮಿತಿಯಾದ,ಹಲವು ವೇಳೆಯಲ್ಲಿ ಪತ್ರದ ತಳಭಾಗದಲ್ಲಿ ತೊಟ್ಟು ಇರುವ ಉಪ ಮಾದರಿಯಲ್ಲಿರುತ್ತವೆ, ಅಂಚು ನಯವಾಗಿರುತ್ತದೆ, ತೊಗಲನ್ನು ಹೋಲುವ ಮೇಲ್ಮೈ ಹೊಂದಿರುತ್ತದೆ, ಕಂದು ಮಿಶ್ರಿತ ಹಳದಿಬಣ್ಣದ ಮೃದು ತುಪ್ಪಳದಿಂದ ಮತ್ತು ನಕ್ಷತ್ರ ರೂಪದ ರೋಮಗಳಿಂದ ಆವೃತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ;ಬುಡದಲ್ಲಿ 3 ನಾಳಗಳ ಸಮೇತವಿರುತ್ತವೆ; ಎರಡನೇ ದರ್ಜೆಯ ನಾಳಗಳು 5 - 7 ಜೋಡಿಗಳಿದ್ದು ಆರೋಹಣ ಮಾದರಿಯ -ಲ್ಲಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಬಿಳಿ ಬಣ್ಣದಲ್ಲಿರುತ್ತವೆ ಮತ್ತು ಒಂಟಿಯಾಗಿ ಅಕ್ಷಾಕಂಕುಳಿನಲ್ಲಿರುತ್ತವೆ; ಹೂತೊಟ್ಟುಗಳು 0.5 ಸೆಂ.ಮೀ.ಉದ್ದವಿರುತ್ತವೆ.
ಕಾಯಿ / ಬೀಜ : ಸಂಪುಟ ಫಲಗಳು ಕಂದು ಬಣ್ಣದವುಗಳಾಗಿದ್ದು, 5-ಕೋನಗಳ ಸಮೇತವಿದ್ದು , 5 X 1.3 ಸೆಂ.ಮೀ. ಗಾತ್ರದಲ್ಲಿದ್ದು ರೋಮರಹಿತವಾಗಿರುತ್ತವೆ; ಬೀಜಗಳು ಒಂದು ತುದಿಯಲ್ಲಿ ರೆಕ್ಕೆಯ ಸಮೇತವಿರುತ್ತವೆ.

ಜೀವಪರಿಸ್ಥಿತಿ :

900 ಮೀ. ವರೆಗಿನ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ,ಮತ್ತು ಮಧ್ಯ ಸಹ್ಯಾದ್ರಿ (ಕೊಡಗಿನ ಪ್ರದೇಶದವರೆವಿಗೆ) ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Wt. & Arn., Prodr. 69. 1834; Gamble, Fl. Madras 1: 108. 1997 (re. ed); Sasidharan, Biodiversity documentation for Kerala- Flowering Plants, part 6: 58. 2004.

Top of the Page