ರಪಾನಿಯ ತ್ವಾಯ್ಟೆಸಿಯೈ Mez - ಮಿರ್ಸಿನೇಸಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 7 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿದ್ದು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ ಎಲೆಯುದುರಿದ ಗುರುತುಗಳನ್ನು ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ, ಸುತ್ತು ಜೋಡಣೆ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳಲ್ಲಿ ಗುಂಪಾಗಿರುತ್ತವೆ; ತೊಟ್ಟುಗಳು 0.5 – 0.7 ಸೆಂ.ಮೀ. ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಪತ್ರಗಳು 5 - 12 X1 – 4.5 ಸೆಂ.ಮೀ.ವರೆಗಿನ ಗಾತ್ರವಿದ್ದು ಬುಗುರಿಯ ಆಕಾರ ಹೊಂದಿದ್ದು, ದುಂಡಾದ ಅಥವಾ ಅಗಲವಾದ ಮತ್ತು ದುಂಡನೆಯ ಅಗ್ರದಲ್ಲಿ ಕಚ್ಚುಳ್ಳ ತುದಿ, ಒಳಬಾಗಿದ ಬುಡ,ನಯವಾದ ಅಂಚು ಹೊಂದಿರುತ್ತವೆ,ಪತ್ರಗಳು ರೋಮರಹಿತವಾಗಿದ್ದು ಚುಕ್ಕೆ ರೂಪದ ರಸಗ್ರಂಥಿ ಮತ್ತು ರೇಖೆಗಳನ್ನೊಳಗೊಂಡಿರುತ್ತವೆ ಮತ್ತು ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ;ಮಧ್ಯ ನಾಳ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 14 ಜೋಡಿಗಳಿದ್ದು ಪ್ರಮುಖವಾಗಿರುವುದಿಲ್ಲ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪ ಮಂಜರಿಗಳು ವೃಂತರಹಿತವಾಗಿದ್ದು ಅಕ್ಷಾಕಂಕುಳಿನಲ್ಲಿನ ಅಥವಾ ಹಳೆಯ ಕಿರುಕೊಂಬೆಗಳ ಮೇಲಿರುವ ಪೀಠಛತ್ರ ಮಾದರಿಯವುಗಳಾಗಿರುತ್ತವೆ; ಹೂಗಳು ದ್ವಿಲಿಂಗಿಗಳು;ಹೂ ತೊಟ್ಟುಗಳು 1.5 ಸೆಂ.ಮೀ. ಉದ್ದವಿರುತ್ತವೆ.
ಕಾಯಿ / ಬೀಜ : ಬೆರ್ರಿ ಫಲಗಳು ಗೋಳಾಕಾರದಲ್ಲಿದ್ದು ಕೆನ್ನೀಲಿ ಬಣ್ಣದಲ್ಲಿರುತ್ತವೆ;ಬೀಜ ಒಂದು.

ಜೀವಪರಿಸ್ಥಿತಿ :

1600 ಮತ್ತು 2200ಮೀ. ನಡುವಿನ ಅತಿ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಣ್ಣಾಮಲೈ ಮತ್ತು ಪಳನಿ ಬೆಟ್ಟಗಳ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಸ್ಥಿತಿ :

ಅಪರೂಪ ಮತ್ತು ನಶಿಸಿ ಹೋಗುವ ಭೀತಿ ಸ್ಥಿತಿ (Ahmedulah and Nayar, 1987)

ಗ್ರಂಥ ಸೂಚಿ :

Engler, Pflanzenr. IV 236(9): 357.1902;Gamble, Fl. Madras 2:751.1998(rep.ed.); Sasidharan, Biodiversity documentation for Kerala- Flowering Plants, part 6:267.2004.

Top of the Page