English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
ಪ್ರಕೃತಿ : | 10 ಮೀ. ಎತ್ತರದವರೆಗಿನ ಸಣ್ಣ ಮರಗಳು. |
ಕಾಂಡ ಮತ್ತು ತೊಗಟೆ : | ತೊಗಟೆ ಬೂದು ಬಣ್ಣದಲ್ಲಿದ್ದು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು ಬಣ್ಣದಲ್ಲಿರುತ್ತದೆ. |
ಕವಲುಗಳು ಮತ್ತು ಕಿರುಕೊಂಬೆಗಳು : | ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿದ್ದು ಎಲೆಯುದುರಿದ ಗುರುತುಗಳನ್ನು ಹೊಂದಿರುತ್ತವೆ. |
ಎಲೆಗಳು : | ಎಲೆಗಳು ಸರಳವಾಗಿದ್ದು ಪರ್ಯಾಯ, ಸುತ್ತು ಮತ್ತು ಉಪ-ಆವರ್ತನಾ ಜೋಡಣೆ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.5 – 1 ಸೆಂ.ಮೀ. ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಪತ್ರಗಳು 4 - 8 X1 – 2.3 ಸೆಂ.ಮೀ.ವರೆಗಿನ ಗಾತ್ರವಿದ್ದು ಅಂಡವೃತ್ತ- ಅಂಡ-ಭರ್ಜಿಯ ಆಕಾರ ಹೊಂದಿದ್ದು, ಚೂಪಲ್ಲದ ತುದಿ, ಒಳಬಾಗಿದ ಬುಡ,ನಯವಾದ ಅಂಚು ಹೊಂದಿರುತ್ತವೆ,ಪತ್ರಗಳು ರೋಮರಹಿತವಾಗಿದ್ದು ಚುಕ್ಕೆ ರೂಪದ ರಸಗ್ರಂಥಿ ಮತ್ತು ರೇಖೆಗಳನ್ನೊಳಗೊಂಡಿರುತ್ತವೆ ಮತ್ತು ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ;ಮಧ್ಯ ನಾಳ ಚಪ್ಪಟೆಯಾಗಿರುತ್ತದೆ; ಎರಡನೇ ಮತ್ತು ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ. |
ಪುಷ್ಪಮಂಜರಿ / ಹೂಗಳು : | ಪುಷ್ಪ ಮಂಜರಿಗಳು ಸಣ್ಣ ವೃಂತ ಸಮೇತ ಅಥವಾ ವೃಂತರಹಿತವಾಗಿದ್ದು ಪೀಠಛತ್ರ ಮಾದರಿಯವುಗಳಾಗಿರುತ್ತವೆ;ಹೂಗಳು ಸಂಕೀರ್ಣ ಲಿಂಗಿಗಳು. |
ಕಾಯಿ / ಬೀಜ : | ಬೆರ್ರಿ ಫಲಗಳು ಗೋಳಾಕಾರದಲ್ಲಿದ್ದು ಶಾಶ್ವತವಾಗಿ ಉಳಿಯುವ ಶಲಾಖೆಯನ್ನು ಹೊಂದಿರುತ್ತವೆ; ಬೀಜ ಒಂದು. |