ರೋಡೋಡೆಂಡ್ರಾನ್ ಆರ್ಬೊರೇಟಮ್ Smith ssp. ನೀಲಗಿರಿಕಂ (Zenk.) Tagg. - ಎರಿಕೇಸಿ

Synonym : Rhododendron arboreum Smith var. nilagirica (Zenk.) Cl.; Rhododendron nilagiricum Zenk.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆವಿಗೆ ಬೆಳೆಯುವ ಮರಗಳು
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕಂದು ಬಣ್ಣದಲ್ಲಿದ್ದು ಸೀಳಿಕಾ ವಿನ್ಯಾಸದಲ್ಲಿರುತ್ತವೆ;ಕಚ್ಚು ಮಾಡಿದ ಜಾಗ ನಸುಗೆಂಪಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ತೊಟ್ಟುಗಳು 2 ಸೆಂ.ಮೀ.ವರೆಗಿನ ಉದ್ದ ಉದ್ದಹೊಂದಿದ್ದು, ಕಾಲುವೆಗೆರೆ ಸಮೇತವಿದ್ದು ರೋಮರಹಿತವಾಗಿರುತ್ತವೆ;ಪತ್ರಗಳು 7.5 – 13 X 3.5 – 5.5 ಸೆಂ ಮೀ. ಗಾತ್ರ, ಅಂಡವೃತ್ತ- ಚತುರಸ್ರ ಮಾದರಿಯ ಆಕಾರ,ಸಣ್ಣ ಮೊನಚು ಮುಳ್ಳು ಹೊಂದಿದ ತುದಿ, ಚೂಪಾದ ಅಥವಾ ದುಂಡಾದ ಬುಡ,ಹಿಂಚಾಚಿದ ಅಂಚು,ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ;ಪತ್ರದ ಮೇಲ್ಭಾಗ ರೋಮರಹಿತವಾಗಿರುತ್ತವೆ ,ಪತ್ರದ ತಳಭಾಗ ನಯವಾದ ತುಪ್ಪಳದಿಂದ ಕೂಡಿರುತ್ತದೆ; ನಾಳಗಳು ಮತ್ತು ಜಾಲಬಂಧ ನಾಳಗಳು ಪತ್ರದ ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತವೆ;ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 18 ಕವಲೊಡೆದ ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಮಸುಕಾಗಿ ಕಾಣುವಂತಹವು.
ಪುಷ್ಪಮಂಜರಿ / ಹೂಗಳು : ಹೂಗಳು ತುದಿಯಲ್ಲಿರುವ ಗುಚ್ಛಗಳಲ್ಲಿ ಅಥವಾ ಹುಸಿ-ನೀಳಛತ್ರ ಮಾದರಿಯ ಪುಷ್ಪಮಂಜರಿಯಲ್ಲಿರುತ್ತವೆ; ಹೂಗಳು ಕಡುಗೆಂಪಾಗಿದ್ದು ಉಭಯಪಾರ್ಶ್ವ ಅಸಮಾಂಗತೆಯುಳ್ಳ ಮಾದರಿಯವುಗಳಾಗಿರುತ್ತವೆ.
ಕಾಯಿ / ಬೀಜ : ಸಂಪುಟ ಫಲಗಳು ದಾರುವಿನಂತಿದ್ದು,ಚತುರಸ್ರಾಕಾರದಲ್ಲಿದ್ದು 2 ಸೆಂ.ಮೀ.ವರೆಗಿನ ಉದ್ದ ಹೊಂದಿರುತ್ತವೆ; ಸಂಪುಟ ಫಲಗಳು ಪಟಲಗಳ ಮೂಲಕ ಬಿರಿಯುತ್ತವೆ;ಬೀಜಗಳು ಅಂಡವೃತ್ತದ ಆಕಾರ ಹೊಂದಿರುತ್ತವೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿದ್ದು ತೀರಾ ಸಣ್ಣದಾಗಿರುತ್ತವೆ ಮತ್ತು ರೆಕ್ಕೆ ಸಹಿತವಾಗಿರುತ್ತವೆ.

ಜೀವಪರಿಸ್ಥಿತಿ :

1500 ರಿಂದ 2400 ಮೀ.ನಡುವಿನ ಬಹು ಎತ್ತರದ ಪ್ರದೇಶಗಳಲ್ಲಿನ ಹಾಗೂ ಬೆಟ್ಟ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳ ಅಂಚು ಮತ್ತು ತೆರೆದ ಜಾಗಗಳಲ್ಲಿ ಈ ಪ್ರಭೇದ ಸಾಮಾನ್ಯವಾಗಿ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಪ್ರಭೇದ ನೀಲಗಿರಿ, ಅಣ್ಣಾಮಲೈ ಮತ್ತು ಪಳನಿ ಬೆಟ್ಟಗಳಲ್ಲಿ ಸಾಮಾನ್ಯವಾಗಿಯೂ ವರುಶುನಾಡಿನಲ್ಲಿ ಅಪರೂಪವಾಗಿಯೂ ಕಾಣಸಿಗುತ್ತದೆ.

ಸ್ಥಿತಿ :

ಅಪರೂಪ (Nayar, 1997)

ಗ್ರಂಥ ಸೂಚಿ :

Stevenson, Sp. Rhod. 15.1930;Gamble, Fl. Pres.Madras 2: 743.1993 (rep.ed.);Ssidharan, Biodiversity documentation for Kerala- Flowering plants,part 6, 64.2004.

Top of the Page