ಸಾರ್ಕೋಕೋಕ್ಕ ಟ್ರೈನರ್ವಿಯ (D.Don) Muell.-Arg. - ಬಕ್ಸೇಸಿ

Synonym : ಬಕ್ಸಸ್ ಸಾಲಿಗ್ನ D.Don; ಸಾರ್ಕೋಕೋಕ್ಕ ಟ್ರೈನರ್ವಿಯ Wt.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 4 ಮೀ. ಎತ್ತರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ಸೂಕ್ಷ್ಮ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ತೊಟ್ಟುಗಳು 1.3 – 2.5 ಸೆಂ.ಮೀ. ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಪತ್ರಗಳು 5– 14.5 X 2 – 5.5 ಸೆಂ.ಮೀ. ಗಾತ್ರ ಹೊಂದಿದ್ದು ಅಂಡವೃತ್ತ- ಭರ್ಜಿಯ ಆಕಾರ ಹೊಂದಿದ್ದು, ಉದ್ದನೆಯ ಕ್ರಮೇಣ ಚೂಪಾಗುವ ತುದಿ, ಚೂಪಾದ-ಒಳಬಾಗಿದ ಬುಡ, ನಯವಾದ ಮತ್ತು ಹಿಂಚಾಚಿದ ಅಂಚು ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ;ಪತ್ರಗಳು ಬುಡಭಾಗದಲ್ಲಿ 3- ಮೇಲು ಆಧಾರ ನಾಳಗಳನ್ನು ಹೊಂದಿರುತ್ತವೆ;ಜೋಡಿ ಅಂತರ ಅಂಚಿನ ನಾಳಗಳಿರುತ್ತವೆ;ಎರಡನೇ ದರ್ಜೆಯ ನಾಳಗಳು ಅಂದಾಜು 5 ಜೋಡಿಗಳಿದ್ದು ಪ್ರಮುಖವಾಗಿರುವುದಿಲ್ಲ ಅಥವಾ ಅಸ್ಪಷ್ಟವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ಗುಚ್ಛಗಳು;ಹೂಗಳು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಒಂದೇ ಸಸ್ಯದಲ್ಲಿದ್ದು ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಬೆರ್ರಿ ನಯವಾಗಿದ್ದು,ಕಳಿತಾಗ ಕೆನ್ನೀಲಿ ಮಿಶ್ರಿತ ಕಪ್ಪು ಬಣ್ಣ ಹೊಂದಿದ್ದು ಶಾಶ್ವತವಾದ ಶಲಾಕೆಯ ಸಮೇತವಾಗಿರುತ್ತವೆ;ಬೀಜಗಳ ಸಂಖ್ಯೆ 2 ರಿಂದ 3.

ಜೀವಪರಿಸ್ಥಿತಿ :

1200 ಮತ್ತು 2000 ಮೀ. ಮಧ್ಯಮ ಮತ್ತು ಅತಿ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ;ಪಶ್ಚಿಮ ಘಟ್ಟದಲ್ಲಿ ಈ ಪ್ರಭೇದ ದಕ್ಷಿಣ(ಅಣ್ಣಾಮಲೈ) ಮತ್ತು ಮಧ್ಯ (ಪಾಲಕ್ಕಾಡು ಬೆಟ್ಟಗಳಿಂದ ಕೊಡಗಿನವರೆಗೆ)ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

DC., Prodr. 16: 11. 1869; Gamble, Fl. Madras 2:1265. 1993 (re.ed.); Sasidharan, Biodiversity documentation for Kerala- Flowering Plants, part 6: 431. 2004.

Top of the Page