ಶೆಫ್ಲೆರ ರಾಸ್ಟ್ರೇಟ (Wt.) Harms var. ರಾಸ್ಟ್ರೇಟ - ಅರಾಲಿಯೇಸಿ

Synonym : ಹೆಪ್ಟಾಪ್ಲೂರಮ್ ರಾಸ್ಟ್ರೇಟಮ್ (Wt.) Bedd.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ರಿಂದ 12 ಮೀ ಎತ್ತರಕ್ಕೆ ಬೆಳೆಯುವ ಮರಗಳು ಕೆಲವು ಸಂದರ್ಭಗಳಲ್ಲಿ ಇತರೆ ಮರಗಳ ಅಥವಾ ಬಂಡೆಗಳ ಮೇಲೆ ಅಪ್ಪಿಕೊಂಡು ಬೆಳೆಯುವ ಬೃಹತ್ ಬಳ್ಳಿ ರೀತಿಯದ್ದಾಗಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ದುಂಡಾಕೃತಿ ಹಾಗೂ ರೋಮರಹಿತ.
ಜಿನುಗು ದ್ರವ :
ಎಲೆಗಳು : ಎಲೆಗಳು ಹಸ್ತರೂಪಿ ಸಂಯುಕ್ತ ಮಾದರಿಯವು. ಹಾಗೂ ಪರ್ಯಾಯ ಸುತ್ತು ಜೋಡನಾ ವ್ಯವಸ್ಥೆಯನ್ನು ಹೊಂದಿದ್ದು ಬುಡದಲ್ಲಿ ಉಬ್ಬಿಕೊಂಡಿರುವಂತಹವು; ಅಕ್ಷದಿಂಡು 10-20 ಸೆಂ.ಮೀ. ಉದ್ದವಿರುತ್ತದೆ. ಕಾವಿನೆಲೆ ಎಲೆತೊಟ್ಟಿಗೆ ಅಂಟಿಕೊಂಡಿರುತ್ತದೆ. ಎಳೆಯದಾದ ಕಿರುತೊಟ್ಟುಗಳು ಕಿಲುಬು ಬಣ್ಣವುಳ್ಳ ಮೃದು ತುಪ್ಪಳ ಸಮೇತವಾಗಿರುತ್ತವೆ. ಕಿರು ಎಲೆಗಳು 7-11, ಪತ್ರ 5-12 3-8ಸೆಂ.ಮೀ. ಗಾತ್ರ ಚತುರಸ್ರ –ಭರ್ಜಿಯಾಕಾರದಲ್ಲಿದ್ದು ಚೂಪಾದ ತುದಿ, ಗುಂಡಾದ ಬುಡ ಹೊಂದಿರುತ್ತದೆ. ಎಳೆಯ ಪತ್ರಗಳು ಕಿಲುಬು ಬಣ್ಣವುಳ್ಳ ಮೃದು ತುಪ್ಪಳದಿಂದ ಕೂಡಿದ್ದು ಬಲಿತ ಪತ್ರಗಳು ರೋಮರಹಿತವಾಗಿರುತ್ತವೆ. ಹಾಗೂ ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ; ಎರಡನೇ ದರ್ಜೆಯ ನಾಳಗಳು 8-12 ಜೋಡಿಗಳಿದ್ದು ತೃತೀಯ ದರ್ಜೆಯವು ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಅಗ್ರಸ್ಥಾನದಲ್ಲಿರುವಂತಹವು; ಪೀಠಛತ್ರ ಪುಷ್ಪ ಮಂಜರಿಗಳು 2 ರಿಂದ 2.5 ಸೆಂ.ಮೀ. ವ್ಯಾಸವನ್ನು ಹೊಂದಿದ್ದು ಮದ್ಯಾಭಿಸರ ಮಾದರಿಯಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯವು; ಬೀಜ ಅದುಮಿದಂತಿರುತ್ತದೆ.

ಜೀವಪರಿಸ್ಥಿತಿ :

ಉಪಮೇಲ್ಛಾವಣಿ ಮರಗಳಾಗಿ ಅತಿ ಎತ್ತರ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಹಾಗೂ ಮಧ್ಯಮ ಎತ್ತರ ಪ್ರದೇಶಗಳ ಕಾಡುಗಳ ಅಂಚಿನಲ್ಲಿ ಈ ಪ್ರಬೇಧ ಬೆಳೆಯುತ್ತದೆ (800 ರಿಂದ 2400ಮೀ ಎತ್ತರದ ಪ್ರದೇಶಗಳಲ್ಲಿ)

ವ್ಯಾಪನೆ :

ಪಶ್ಚಿಮ ಘಟ್ಟ ಪ್ರದೇಶಗಳಿಗೆ ಈ ಪ್ರಬೇಧ ಸೀಮಿತ –ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳು (ಕೊಡಗು ಮತ್ತು ಶಿವಮೊಗ್ಗ ಪ್ರದೇಶಗಳ ನಡುವೆ)

ಗ್ರಂಥ ಸೂಚಿ :

Engler & Prantl, Naturl. Pflanzenfam. 3 (8): 38. 1894; Gamble, Fl. Madras 1: 569.1997 (re.ed); Sasidharan, Biodiversity documentation for Kerala- Flowering Plants, part 6: 207. 2004.

Top of the Page