ಸ್ಲೀರೋಪೈರಂ ಪೆಂಟ್ಯಾಂಡ್ರಂ (Denn.) Mabberley - ಸಂಟಾಲೇಸಿ

ಪರ್ಯಾಯ ನಾಮ : ಸ್ಲೀರೋಪೈರಂ ವಲ್ಲೀಚಿಯಾನಂ Arn.

Vernacular names : Tamil: ಇರುಮುಳ್ಳಿMalayalam: ಬೆಂಡುಗ,ಬೆಂಡುಲಿಕೆ,ಬೊಡ್ಲಿಗೆ ಹಲ್ಲು,ನಾಯಿಕುಳಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 7 ಮೀ ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ದೊಡ್ಡ ಗಾತ್ರದ ಮುಳ್ಳುಗಳನ್ನು ಹೊಂದಿರುತ್ತದೆ;ತೊಗಟೆ ನಯವಾಗಿದ್ದು ಬೂದು ಮಿಶ್ರಿತ ಬಿಳಿ ಬಣ್ಣದಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಹಳದಿ ಛಾಯೆ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಹಸಿರರಾಗಿದ್ದು,ದುಂಡಾದ ಆಕಾರ ಹೊಂದಿದ್ದು ರೋಮ ರಹಿತವಾಗಿರುತ್ತವೆ ಹಾಗೂ ಅಕ್ಷಾಕಂಕುಳಿನ ದೊಡ್ಡ ಗಾತ್ರದ ಮುಳ್ಳುಗಳ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.8 – 0.8 ಸೆಂ.ಮೀ. ಉದ್ದವಿದ್ದು ಅಡ್ಡ ಸೀಳಿದಾಗ ಕಾಲುವೆಗೆರೆಯ ಆಕಾರ ಹೊಂದಿದ್ದು, ರೋಮರಹಿತವಾಗಿರುತ್ತವೆ;ಪತ್ರಗಳು 8.5 – 17.5 X 4-7.5 ಸೆಂ.ಮೀ. ಗಾತ್ರ, ಅಂಡವೃತ್ತದಿಂದ ಅಂಡವೃತ್ತ –ಚತುರಸ್ರ ಅಥವಾ ಅಂಡದವರೆಗಿನ ಮಾದರಿಯ ಆಕಾರ, ಅಥವಾ ಚೂಪಲ್ಲದ ಮಾದರಿಯಲ್ಲಿರುತ್ತದೆ,ಬುಡ ದುಂಡಾಗಿರುತ್ತದೆ, ಅಂಚು ನಯವಾಗಿದ್ದು, ಮೇಲ್ಮೈ ತೊಗಲನ್ನೋಲುವ ರೀತಿಯಲ್ಲಿದ್ದು ರೋಮರಹಿತವಾಗಿರುತ್ತದೆ; ಮಧ್ಯನಾಳ ಮೇಲ್ಭಾಗದಲ್ಲಿ ಚಪ್ಪಟೆಯಾಗಿ ಅಥವಾ ಸ್ವಲ್ಪ ಮಟ್ಟಿಗೆ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 3 ರಿಂದ 5 ಜೋಡಿಗಳಿದ್ದು ಆರೋಹಣ ರೀತಿಯಲ್ಲಿರುತ್ತವೆ,ಹೆಚ್ಚಿನ ಸಂಧರ್ಭಗಳಲ್ಲಿ ತಳಭಾಗದ ಅತಿ ತಳಗಿನ ಜೋಡಿಗಳು ಅಭಿಮುಖಿಗಳಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ತೆಳುವಾಗಿದ್ದು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿರುವ ಕದಿರುಮಂಜರಿ ಮಾದರಿಯವು;ಹೂಗಳು ಸಂಕೀರ್ಣಲಿಂಗಿಗಳಾಗಿದ್ದು ಕೆಂಪು ಬಣ್ಣದಲ್ಲಿರುತ್ತವೆ ಮತ್ತು ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಪೇರು ಹಣ್ಣಿನ ಆಕಾರದಲ್ಲಿದ್ದು 3 ಸೆಂ.ಮೀ. ಉದ್ದವಿರುತ್ತವೆ;ಬೀಜಗಳ ಸಂಖ್ಯೆ 1.

ಜೀವಪರಿಸ್ಥಿತಿ :

600 ಮತ್ತು 1600 ಮೀ. ನಡುವಿನ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣದಿಂದ ಅರೆನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಮತ್ತು ಶ್ರೀಲಂಕಾ ;ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Mabb., Taxon 26: 533. 1977; Gamble, Fl. Madras 2: 1262. 1993 (re.ed.); Sasidharan, Biodiversity documentation for Kerala- Flowering Plants, part 6: 406. 2004; Saldanha, Fl. Karnataka 2: 74. 1996; Almeida, Fl. Maharashtra 4:276. 2003.

Top of the Page