ಸ್ಟೀರಿಯೋಸ್ಪರ್ಮಮ್ ಕೊಲಾಯ್ಸ್ Mabb. - ಬಿಗ್ನೋನಿಯೇಸಿ

Synonym : ಸ್ಟೀರಿಯೋಸ್ಪರ್ಮಮ್ ಪರ್ಸೋನೇಟಮ್ (Hassk.) Chatterj.; ಬಿಗ್ನೋನಿಯ ಕೊಲಾಯ್ಸ್ Buch.-Ham. ex Dillw.; ಸ್ಟೀರಿಯೋಸ್ಪರ್ಮಮ್ ಟೆಟ್ರಾಗೋನಮ್ DC.

ಕನ್ನಡದ ಪ್ರಾದೇಶಿಕ ಹೆಸರು : ಕಾಳಾಹಾದ್ರಿ, ಕಲ್ಲುಡಿ, ಅಂಗಧಾರೆ, ಮಲಲಿ, ಮೂಕಾತ್ರಿ, ಪಾದ್ರಿ. ಪುರಳಿ.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಎಲೆಯುದುರುವ ಮಾದರಿಯ ಬೃಹತ್ ವೃಕ್ಷವಾದ ಈ ಪ್ರಭೇದ 25ಮೀ ಎತ್ತರದವರೆಗೂ ಬೆಳೆಯುತ್ತದೆ ಹಾಗೂ ಹಲವು ಸಂದರ್ಭದಲ್ಲಿ ಆನಿಕೆಗಳ ಸಮೇತವಾಗಿರುತ್ತದೆ.
ಕಾಂಡ ಮತ್ತು ತೊಗಟೆ : ತೊಗಟೆ ಸೀಳಿಕಾ ಅಥವಾ ಒಡಕುಳ್ಳ ಮಾದರಿಯಲ್ಲಿದ್ದು ಕಂದು ಬಣ್ಣ ಹೊಂದಿರುತ್ತದೆ.ಕಚ್ಚು ಮಾಡಿದ ಜಾಗ ಕೆನೆಬಣ್ಣವನ್ನು ಹೊಂದಿರುತ್ತದೆ.
ಜಿನುಗು ದ್ರವ :
ಎಲೆಗಳು : ಎಲೆಗಳು ಅಸಮ ಸಂಖ್ಯಾಗರಿ ಸಂಯುಕ್ತ ಮಾದರಿಯಲ್ಲಿದ್ದು, ಕತ್ತರಿಯಾಕಾರದಲ್ಲಿ ಅಭಿಮುಖಿಗಳಾಗಿದ್ದು 60ಸೆಂ.ಮೀ. ನವರೆಗಿನ ಉದ್ದ ಹೊಂದಿರುತ್ತವೆ. ಅಕ್ಷದಿಂಡು 6 ರಿಂದ 16.5ಸೆಂ.ಮೀ. ಉದ್ದವಿದ್ದು ಕಾಲುವೆಗೆರೆ ಸಮೇತವಾಗಿದ್ದು ರೋಮರಹಿತವಾಗಿರುತ್ತವೆ. 3 ರಿಂದ 5 ಅಭಿಮುಖಿ ಜೋಡಿ ಕಿರು ಎಲೆಗಳಿದ್ದು ಒಂದು ಅಗ್ರಸ್ಥಾನದಲ್ಲಿರುತ್ತದೆ; ಕಿರು ಎಲೆಗಳ ತೊಟ್ಟು 0.8 ರಿಂದ 1.5ಸೆಂ.ಮೀ. ಉದ್ದವಿದ್ದು ಕಾಲುವೆಗೆರೆ ಸಮೇತವಾಗಿರುತ್ತದೆ; ಪತ್ರಗಳು 5 ರಿಂದ 15 ಸೆಂ.ಮೀ. ಉದ್ದ 2.5 ರಿಂದ 7.5ಸೆಂ.ಮೀ. ಅಗಲ ಹೊಂದಿದ್ದು ಅಂಡವೃತ್ತಾ-ಕೃತಿಯಲ್ಲಿದ್ದು ಬಾಲರೂಪಿ ತುದಿ (ತೀಕ್ಷ್ಣಾಗ್ರ ಭಾಗ 1.5 ರಿಮದ 4ಸೆಂ.ಮೀ. ಉದ್ದ) ಬೆಣೆಯಾಕಾರದಿಂದ ಅಸಮ್ಮಿತಿಯವರೆಗಿನ ಬುಡಭಾಗ, ನಯವಾದ ಅಂಚು, ರೋಮರಹಿತವಾದ ಹಾಗೂ ಕಾಗದವನ್ನೋಲುವ ಮೇಲ್ಮೈಯನ್ನು ಹೊಂದಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು ಕ್ರಮೇಣ ಓರೆಯಾಗುವ 8 ರಿಂದ 10 ಜೋಡಿಗಳಿದ್ದು ತೃತೀಯ ದರ್ಜೆಯ ನಾಳಗಳು ದುರ್ಬಲವಾಗಿ ಎಲೆದಿಂಡಿಗೆ ಅಡ್ಡವಾಗಿ ಕೂಡುವಂತಹವು.
ಪುಷ್ಪಮಂಜರಿ/ಹೂಗಳು : ಪುಷ್ಪ ಮಂಜರಿಗಳು ಸಡಿಲವಾಗಿದ್ದು ತುದಿಯಲ್ಲಿನ ಕವಲೊಡೆಯುವ ಮಧ್ಯಾಭಿಸರ ಮಾದರಿಯವು; ಹೂಗಳು ಕಂದುಮಿಶ್ರಿತ ಕೆನ್ನೀಲಿ ಬಣ್ಣದವಾಗಿದ್ದು ಹಳದಿ ಒಳಾವರಣವನ್ನು ಹೊಂದಿರುತ್ತವೆ. ಪುಷ್ಪದಳಗಳು ಉಣ್ಣೆಯುಕ್ತವಾಗಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು 4-ಕೋನಯುಕ್ತವಾಗಿದ್ದು, 40ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ತಿರುಚಿಕೊಂಡಿರುತ್ತದೆ; ಬೀಜಗಳು ರೆಕ್ಕೆಯುಕ್ತವಾಗಿದ್ದು ಬಹು ಸಂಖ್ಯೆಯಲ್ಲಿರುತ್ತವೆ.

ಜೀವಪರಿಸ್ಥಿತಿ :

1200ಮೀ ವರೆಗಿನ ಎತ್ತರದ ಪ್ರದೇಶಗಳ ತೇವಾಂಶವುಳ್ಳ ಎಲೆಯುದುರು ಕಾಡುಗಳಲ್ಲಿ ಸಾಮಾನ್ಯವಾಗಿಯೂ, ನಿತ್ಯಹರಿದ್ವರ್ಣ ಕಾಡುಗಳ ಆರಂಭ ಪ್ರದೇಶಗಳಲ್ಲಿ ಅಥವಾ ಅಂಚು ಭಾಗಗಳಲ್ಲಿ ಆಗಿಂದಾಗ್ಗೆ ಈ ಪ್ರಭೇದ ಕಂಡುಬರುತ್ತವೆ.

ವ್ಯಾಪನೆ :

ಭಾರತ ಮತ್ತು ಮ್ಯಾನ್ಮಾರ್; ಶ್ರೀಲಂಕ; ಪಶ್ಚಿಮ ಘಟ್ಟಗಳ ದಕ್ಷಿಣ, ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರದ ಪ್ರದೇಶಗಳು.

ಗ್ರಂಥ ಸೂಚಿ :

Taxon 27: 553.1979; Gamble, Fl. Madras 2: 998.1997 (re.ed); Sasidharan, Biodiversity documentation for Kerala- Flowering Plants, part 6: 335. 2004; Keshava Murthy and Yoganarasimhan, Fl. Coorg (Kodagu) 322. 1990.

Top of the Page